Publish Date: Thu, 21 Jun 2007 (11:59 IST)
Updated Date: Thu, 21 Jun 2007 (11:59 IST)
ಬಾಲಿವುಡ್‌ನ ನಾಯಕ ನಟರಲ್ಲಿ ಸ್ಟಾರ್ ಆಗಿದ್ದ ಮಿಥುನ್ ಚಕ್ರವರ್ತಿ ಇದೀಗ ಗಾಯಕನಾಗಿ ಹೊರಹೊಮ್ಮುತ್ತಿರುವುದು ಅವರ ಹೊಸ ಅವತಾರ.
ಹೆಸರಾಂತ ಗಾಯಕಿ ಆಶಾ ಭೋಸ್ಲೆ ಅವರ ಹೊಸ ಆಲ್ಬಮ್‌ನಲ್ಲಿ ಮಿಥುನ್ ಹಾಡುಗಳಿಗೆ ಕಂಠನೀಡಿದ್ದಾರೆ. ನಾಯಕ ನಟರು ಬೇಡಿಕೆ ಕುಸಿದಾಗ ಅಥವಾ ನಟನೆಯಿಂದ ಹಿಂದೆ ಸರಿದಾಗ ಗಾಯಕರಾಗಿ ಬೆಳಗುವುದು ಹೊಸ ಬೆಳವಣಿಗೆ.
ಆಶಾ ಬೋಸ್ಲೆ ಅವರ ಹೊಸ ಆಲ್ಬಂ 'ಆಶಾ ಎಂಡ್ ಫ್ರೆಂಡ್ಸ್'ನಲ್ಲಿ ಹೇಸರಾಂತ ನಾಯಕರು ಕ್ರಿಕೆಟ್ ತಾರೆಗಳು ಹಾಡಿದ್ದಾರೆ. ಆದರೆ ಮಿಥುನ್ ಅವರ ಗಾಯನ ವಿಶೇಷ ಗಮನ ಸೆಳೆದಿದೆ.
ಆಲ್ಬಂನಲ್ಲಿ ಹಾಡಿದವರೆಂದರೆ ಸಂಜಯ್ ದತ್,ಊರ್ಮಿಳಾ ಮಾತೋಂಗ್ಕರ್, ಕ್ರಿಕೆಟಿಗ ಬ್ರೆಟ್ ಲೀ, ಮುಂತಾದವರು. ಇವರಲ್ಲಿ ಮಿಥುನ್ ಈಗಾಗಲೇ ತಮ್ಮ ರೆಕಾರ್ಡಿಂಗ್ ಕಾರ್ಯ ಪೂರೈಸಿದ್ದಾರೆ.
ಅನುಪಮ್ ಖೇರ್‌ರಂತಹ ಪ್ರಮುಖ ನಟರು ಶಶಿರಂಜನ್ ಅವರ ಧೂಮ್ ದಢ್ಕನ್‌ಗಾಗಿ ಕಂಠನೀಡಿರುವುದು ವಿಶೇಷ ವಿಷಯ. ಇವರಿಗಿಂತ ಭಿನ್ನವಾಗಿ ಆಶಾ ಆಲ್ಬಂ ಹೊರಹೊಮ್ಮಲಿದೆ.