Publish Date: Thu, 14 Jun 2007 (17:10 IST)
Updated Date: Thu, 14 Jun 2007 (17:10 IST)
ನಿರ್ದೇಶಕ ಮೋಹಿತ್ ಸೂರಿ ಅವರು ಇಸ್ಲಾಂ ಬೋಧನೆಯಂತೆ ಸಿನಿಮಾ ತಯಾರಿಸಲು ಹೊರಟಿದ್ದಾರೆ. ಅದರ ಹೆಸರು 'ಆವಾರಾಪನ್'. ಸ್ವಾತಂತ್ರ್ಯ ಹಾಗೂ ಉದಾರತೆಯ ಬೋಧೆಯನ್ನು ಸಿನಿಮಾಗಳಲ್ಲಿ ಅಳವಡಿಸಲು ಅವರು ನಿರ್ಧರಿಸಿದ್ದಾರಂತೆ.
ಆವಾರಾಪನ್ ಚಿತ್ರದಲ್ಲಿ ನಾಯಕ , ನಾಯಕಿಯ ಚಟುವಟಿಕೆಗಳಲ್ಲಿ ಈ ಬೋಧನೆಗಳು ಪ್ರಕಟಗೊಳ್ಳುವುವು. ಚಿತ್ರದಲ್ಲಿ ಶಿವಂ, ರೀಮಾ ಝಾಯಿದಿ, ಆಲಿಯಾ ಹಮೀದ್ ಮುಖ್ಯ ಭೂಮಿಕೆಯಲ್ಲಿರುತ್ತಾರೆ.
ಆವಾರಪನ್‌ನಲ್ಲಿ 700 ಬಿಳಿ ಪಾರಿವಾಳಗಳನ್ನು ಶಾಂತಿ, ಸ್ವಾತಂತ್ರ್ಯದ ಸಂಕೇತವಾಗಿ ಹಾರಿಬಿಡಲಾಗುತ್ತದೆ. ಚಿತ್ರದಲ್ಲಿರುವ ಹಾಡು `ಮೌಲಾ ಮೌಲಾ`ದಲ್ಲಿ ಹೆಚ್ಚಿನ ಪಾರಿವಾಳಗಳನ್ನು ನೃತ್ಯಗಳ ನಡುವೆ ಹಾರಿಬಿಡಲಾಗುತ್ತದೆ.
ಸಿನಿಮಾದ ಉಳಿದ ಭಾಗಗಳು ಬ್ಯಾಂಕಾಕ್ ಹಾಗೂ ಹಾಂಕಾಂಗ್‌ನಲ್ಲಿ ಜರುಗಲಿರುವ ಚಿತ್ರೀಕರಣದ ವೇಳೆ ಹಾರಿ ಬಿಡಲಾಗುತ್ತದೆ. ಆವಾರಾ ಪನ್ ಚಿತ್ರದ ಮೂಲಕ ನಿರ್ದೇಶಕ ಮೋಹಿತ್ ಸೂರಿ ಹೆಚ್ಚಿನ ನಿರೀಕ್ಷೆ ಇರಿಸಿದ್ದಾರೆ.