Article Bollywood Gossips %e0%b2%86%e0%b2%b0%e0%b3%81 %e0%b2%ac%e0%b2%be%e0%b2%b0%e0%b2%bf %e0%b2%ae%e0%b2%a6%e0%b3%81%e0%b2%b5%e0%b3%86%e0%b2%af%e0%b2%be%e0%b2%97%e0%b3%81%e0%b2%b5%e0%b3%86 %e0%b2%8e%e0%b2%82%e0%b2%a6 %e0%b2%aa%e0%b3%8d%e0%b2%b0%e0%b2%bf%e0%b2%af%e0%b2%be%e0%b2%82%e0%b2%95%e0%b2%be 113102400006_1.htm

Daily Horoscope

Select Your Language

Notifications

webdunia
webdunia
webdunia
webdunia

ಆರು ಬಾರಿ ಮದುವೆಯಾಗುವೆ ಎಂದ ಪ್ರಿಯಾಂಕಾ!

ಪ್ರಿಯಾಂಕಾ ಚೋಪ್ರಾ
PR
ಪ್ರಿಯಾಂಕಾ ನೀಡಿದ ಒಂದು ಹೇಳಿಕೆ ಬಾಲಿವುಡ್‌ನಲ್ಲಿ ಸಾಕಷ್ಟು ಸಂಚಲನ ಉಂಟುಮಾಡಿದೆ. ಕೆಲ ಪಡ್ಡೆ ಹುಡುಗರಿಗೆ ಆಕೆಯ ಹೇಳಿಕೆ ಖುಷಿ ನೀಡಿದ್ದರೆ, ಮತ್ತೆ ಕೆಲವರಿಗೆ ಇದು ಶಾಕ್ ನೀಡಿದೆಯಂತೆ.

ಬಾಲಿವುಡ್‌ನಲ್ಲಿ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಪ್ರಿಯಾಂಕಾಗೆ ಈಗ ಮೂವತ್ತರ ಗಡಿ ದಾಟಿದೆ. ಅಂತಹ ಸಂಚಲನಕಾರಿ ಹೇಳಿಕೆ ಅವರೇನು ನೀಡಿದ್ದಾರೆ ಎಂಬುದೇ ನಿಮ್ಮ ಪ್ರಶ್ನೆ...ಇಲ್ಲಿದೆ ಉತ್ತರ,

ತಮ್ಮ ಮದುವೆ ಬಗ್ಗೆ ಮಾತನಾಡಿದ ಅವರು ನಾನು ಆರು ಸಲ ಮದುವೆಯಾಗಬೇಕು ಎಂದು ನಿರ್ಧರಿಸಿದ್ದೇನೆ ಎಂದರು. ಆರು ಸಲ ಎಂದರೆ ಆರು ಮಂದಿಯನ್ನಾ, ಅದು ಮೂವತ್ತು ದಾಟಿದ ಮೇಲೆ? ಎಂಬುದು ಕೆಲ ಪೋಕ್ರಿ ಪರ್ತಕತ್ರರ ಪ್ರಶ್ನೆ. ಅಲ್ಲಾರೀ ಒಬ್ಬರನ್ನೇ ನಾನು ಆರು ಸಲ ಮದುವೆಯಾಗಬೇಕು ಎಂದಿದ್ದೇನೆ ಎಂಬುದು ಪ್ರಿಯಾಂಕಾ ನೀಡುವ ವಿವರಣೆ. ಅಷ್ಟಕ್ಕೇ ಅಬ್ಬಾ ಎಂದು ಅಭಿಮಾನಿಗಳು ಉಸಿರುಬಿಟ್ಟಿದ್ದಾರೆ.

ಒಬ್ಬರನ್ನೇ ಆರು ತರಹ ಆರು ಸಲ ಮದುವೆಯಾಗುವ ಪ್ಲಾನ್ ಪ್ರಿಯಾಂಕಾ ಅವರದ್ದು. ಇತ್ತೀಚೆಗೆ ಫಿಲಂಫೇರ್ ನಿಯತಕಾಲಿಕೆಗೆ ಅವರು ಕೊಟ್ಟ ಸಂದರ್ಶನದಲ್ಲಿ ಈ ಮಾತು ಹೇಳಿದ್ದಾರೆ. ಎಲ್ಲಾ ಹೆಣ್ಣುಮಕ್ಕಳಂತೆ ನನಗೂ ಚಿಕ್ಕಂದಿನಿಂದಲೂ ಮದುವೆ ಬಗ್ಗೆ ಸಾಕಷ್ಟು ಕನಸುಗಳಿವೆ. ಭಿನ್ನ ಪದ್ಧತಿಯಲ್ಲಿ ಆರು ಸಲ ವಿವಾಹವಾಗಬೇಕು ಎಂದಿದ್ದೇನೆ. ಅಫ್ಕೋರ್ಸ್ ಅದು ಒಬ್ಬರನ್ನೇ ಎಂದಿದ್ದಾರೆ ಪ್ರಿಯಾಂಕಾ.

ಮೊದಲ ಬಾರಿ ಸ್ವಂತ ಊರು ಅಂಬಾಲಾದಲ್ಲಿ, ಎರಡನೇ ಬಾರಿ ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್ ರೀಪ್ನ ಅಂಡರ್ವಾಟರ್‌ನಲ್ಲಿ, ಮೂರನೇ ಬಾರಿ ಹಾಲಿವುಡ್ ವಸ್ತ್ರದಲ್ಲಿ ಲಾಸ್ ವೆಗಾಸ್‌ನಲ್ಲಿ, ಬಳಿಕ ಸ್ವಿಟ್ಜರ್ಲೆಂಡ್ನ ಚರ್ಚ್‌ನಲ್ಲಿ ಇನ್ನೆರಡು ಆಪ್ಶನ್ ನನ್ನ ಪತಿಗೆ ಬಿಟ್ಟಿದ್ದೇನೆ ಎಂಬುದು ಅವರು ನೀಡುವ ವಿವರಣೆ. ಇಷ್ಟೆಲ್ಲಾ ಹೇಳಿದವರು ಪತಿ ಎಲ್ಲಿದ್ದಾನೆ? ಯಾವಾಗ ಮದುವೆ ಎಂಬ ಬಗ್ಗೆ ಬಾಯಿ ಬಿಟ್ಟಿಲ್ಲ.

Share this Story:

Follow Webdunia kannada