Publish Date: Wed, 29 Aug 2007 (12:30 IST)
Updated Date: Wed, 29 Aug 2007 (12:29 IST)
"ರಾಮ್ ಗೋಪಾಲ್ ವರ್ಮಾ ಕೀ ಆಗ್" ಚಿತ್ರವು ಶುಕ್ರವಾರ ಬಿಡುಗಡೆಯಾಗಲಿದ್ದು, ಸುಶ್ಮಿತಾ ಸೇನ್ ಪ್ರಧಾನ ಪಾತ್ರದಲ್ಲಿರುವ ಇದು ಎಲ್ಲರ ಕುತೂಹಲ ಕೆರಳಿಸಿದೆ.
ಚಿತ್ರದಲ್ಲಿ ನಾಯಕಿಗೆ ಸರಿಸಾಟಿಯಾಗಿ ಕಾಣಿಸಿಕೊಂಡಿರುವ ಮಾದಕ ಚೆಲುವೆ ನಿಶಾ ಕೊಠಾರಿಯವರು ಹೇಳುವಂತೆ, ಈ "ಚಿತ್ರದ ಪ್ರಧಾನ ನಾಯಕಿ ನಾನಲ್ಲ, ಸುಶ್ಮಿತಾ ಸೇನ್".
ಚಿತ್ರದ ಪಾತ್ರಗಳಲ್ಲೊಂದನ್ನು ನಿರ್ವಹಿಸುತ್ತಿರುವ ಬಗ್ಗೆ ನನಗೆ ಸಂತೋಷವಿದೆ. ನಾನು ಹುಟ್ಟುವುದಕ್ಕೂ ಮೊದಲೇ ಬೆಳ್ಳಿ ತೆರೆಯಲ್ಲಿ ರಾರಾಜಿಸುತ್ತಿರುವವರ ಜತೆ ಕೆಲಸ ಮಾಡುವುದನ್ನು ನೆನಪಿಸಿಕೊಳ್ಳಿ. ಈ ಹೆಮ್ಮೆಯೇ ಸಾಕು ನನಗೆ ಎನ್ನುತ್ತಾಳೆ ನಿಶಾ.
ನನ್ನ ನಟನೆಯ "ಗೋ" ಚಿತ್ರವು ಬಿಡುಗಡೆಗೆ ಸಿದ್ಧವಾಗಿದೆ. ಮತ್ತೊಂದು ಚಿತ್ರ "ಡಾರ್ಲಿಂಗ್"ನಲ್ಲಿ ಒಂದು ಹಾಡು-ಕುಣಿತದಲ್ಲಿ ನಾನು ಕಾಣಿಸಿಕೊಳ್ಳುತ್ತಿದ್ದೇನೆ. ರಾಮ್ ಗೋಪಾಲ್ ವರ್ಮಾ ಕೀ ಆಗ್ (ಆರ್‌ಜಿವಿಕೆಎ)ನಲ್ಲೂ ನನ್ನ ನಟನೆಯಿದೆ. ಇದೊಂದು ಕುಟುಂಬ ಮತ್ತು ಬಬನ್ ಎಂಬ ಪಾತ್ರದ ಜತೆಗಿನ ಅದರ ಸಂಘರ್ಷವನ್ನು ನಿಪಿಸುವ ಚಿತ್ರ ಎಂದು ಟಿವಿ ಪ್ರಮೋಷನ್ ಪ್ರದರ್ಶನಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ನಿಶಾ ಹೇಳಿದ್ದಾರೆ.
ಹೊಸ ಹೊಸ ಯೋಜನೆಗಳಿಗೆ ಸಹಿ ಹಾಕಲು ವಿಳಂಬವೇಕೆ ಎಂದು ಕೇಳಿದರೆ ಆಕೆಯ ಉತ್ತರ :"ನನ್ನತ್ತ ಬರುತ್ತಿರುವ ವೈವಿಧ್ಯಮಯ ಸ್ಕ್ರಿಪ್ಟ್‌ಗಳಿಗಾಗಿ ನಾನು ಎದುರು ನೋಡುತ್ತಿದ್ದೇನೆ. ಇಷ್ಟವಾದರೆ ಮಾತ್ರವೇ ಅದಕ್ಕೆ ಸಹಿ ಹಾಕುತ್ತೇನೆ. ಅದಕ್ಕೆ ಮುನ್ನ ಸಮಗ್ರ ಪರಿಶೀಲನೆ ನಡೆಯಬೇಕಿದೆ. ನಟನೆ ವಿಭಾಗದ ಎಲ್ಲಾ ಸೂಕ್ಷ್ಮ ವಿಷಯಗಳಲ್ಲೂ ಪರಿಣತಿ ಸಾಧಿಸುವ ಗುರಿ ಇರಿಸಿಕೊಂಡಿದ್ದೇನೆ. ಹಾಗಾಗಿ ನಾನೇನೂ ಸಹಿ ಹಾಕುವ ಅವಸರಕ್ಕೆ ಬಿದ್ದಿಲ್ಲ"!