Publish Date: Fri, 27 Jul 2007 (09:02 IST)
Updated Date: Thu, 26 Jul 2007 (20:18 IST)
"ಆಪ್ ಕಾ ಸುರೂರ್" ಯಶಸ್ಸಿನ ನಂತರ ಸಂಗೀತಗಾರ-ನಟ ಹಿಮೇಶ್ ರೆಶಿಮಿಯಾ ಅವರ ಬೇಡಿಕೆ ಹೆಚ್ಚಾಗಿದೆ.
ಇದೀಗ ಹೊಸ ಚಿತ್ರವೊಂದರಲ್ಲಿ ನಾಯಕನಾಗಿ ಅಭಿನಯಿಸುವಂತೆ ಹಾಗೂ ಆ ಚಿತ್ರದ ಸಂಗೀತ ನಿರ್ದೇಶಕನ ಜವಾಬ್ದಾರಿ ವಹಿಸುವಂತೆ ಆಡ್‌ಲ್ಯಾಬ್ ಕಂಪನಿ ಹಿಮೇಶ್ ರಶಿಮಿಯಾ ಅವರನ್ನು ಕೇಳಿದೆ ಎಂದು ಮೂಲಗಳು ತಿಳಿಸಿವೆ.
ಇಂತಹ ಜವಾಬ್ದಾರಿಗಳನ್ನು ನಾನು ಮಾತ್ರ ಹೊತ್ತುಕೊಳ್ಳಬಲ್ಲೆ, ಈಗಿನಿಂದಲೇ ಕೆಲಸ ಪ್ರಾರಂಭಿಸುತ್ತೇನೆ ಎಂದು ರೆಶಿಮಿಯಾ ಪ್ರತಿಕ್ರಿಯಿಸಿರುವುದಾಗಿ ಮತ್ತೂಂದು ಮೂಲಗಳು ವರದಿ ಮಾಡಿದೆ.
"ಆಫ್ ಕಾ ಸುರೂರ್" ಚಿತ್ರದ ವಿತರಣೆ ಹಕ್ಕನ್ನು ಆಡ್‌ಲ್ಯಾಬ್ ಕಂಪನಿ ಹೊಂದಿದ್ದು, ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಲಾಭ ಕೊಳ್ಳೆ ಹೊಡೆದ ನಂತರ, ರೆಶಿಮಿಯಾನನ್ನು ನಾಯಕನನ್ನಾಗಿ ಇಟ್ಟುಕೊಂಡು ಚಿತ್ರವೂಂದನ್ನು ಏಕೆ ತೆಗೆಯಬಾರದು ಎಂದು ಕಂಪನಿ ಚಿಂತನೆ ನಡೆಸಿದೆ.
ನೂತನ ಚಿತ್ರದ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ಟ್ರಿಪ್ಟ್ ರಚನೆ, ನಿರ್ದೇಶನ, ನಾಯಕಿಯರ ಆಯ್ಕೆ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಹಿಮೇಶ್ ರೆಶಿಮಿಯಾಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲಾಗಿದೆ ಎಂದು ಆಡ್‌ಲ್ಯಾಬ್ ಕಂಪನಿ ತಿಳಿಸಿದೆ.
"ಆಫ್ ಕಾ ಸರೂರ್" ಬಾಕ್ಸ್ ಆಫೀಸ್‌ನಲ್ಲಿ ಭಾರಿ ಯಶಸ್ಸು ಗಳಿಸುತ್ತಿದಂತೆ ಹಿಮೇಶ್ ರೆಶಿಮಿಯಾಗೆ ಹೊಸ ಚಿತ್ರಗಳಲ್ಲಿ ಅಭಿನಯಿಸುವಂತೆ ಪ್ರವಾಹದೋಪಾದಿಯಲ್ಲಿ ಅವಕಾಶಗಳು ಹರಿದು ಬರುತ್ತಿದ್ದು, ಆತ ತನ್ನ ಅಮೆರಿಕ ಪ್ರವಾಸದ ನಂತರ ಆಡ್‌ಲ್ಯಾಬ್ ಕಂಪನಿಯ ಯೋಜನೆಯನ್ನು ಕೈಗೆತ್ತಿಕೊಳ್ಳಲಿದ್ದಾನೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.