Article Bollywood Gossips %e0%b2%86%e0%b2%a8%e0%b2%bf%e0%b2%ae%e0%b3%87%e0%b2%b6%e0%b2%a8%e0%b3%8d%e0%b2%a8%e0%b2%b2%e0%b3%8d%e0%b2%b2%e0%b2%bf %e0%b2%a6%e0%b3%8d%e0%b2%b0%e0%b3%8c%e0%b2%aa%e0%b2%a6%e0%b2%bf%e0%b2%af%e0%b2%be%e0%b2%97%e0%b2%b2%e0%b2%bf%e0%b2%b0%e0%b3%81%e0%b2%b5 %e0%b2%b5%e0%b2%bf%e0%b2%a6%e0%b3%8d%e0%b2%af%e0%b2%be%e0%b2%ac%e0%b2%be%e0%b2%b2%e0%b2%a8%e0%b3%8d 113100400007_1.htm

Daily Horoscope

Select Your Language

Notifications

webdunia
webdunia
webdunia
webdunia

ಆನಿಮೇಶನ್ನಲ್ಲಿ ದ್ರೌಪದಿಯಾಗಲಿರುವ ವಿದ್ಯಾಬಾಲನ್

ದ್ರೌಪದಿ
PR
ವಿದ್ಯಾಬಾಲನ್ ಹೆಸರು ಕೇಳಿದಾಕ್ಷಣ ಡರ್ಟಿ ಪಿಕ್ಚರ್ ನೆನಪಾಗುವುದು ಅತಿ ಸಹಜ ಸಂಗತಿ. ಬಾಲಿವುಡ್ನಲ್ಲಿ ಹಾಟ್ ಪಾತ್ರ ನಿರ್ವಹಿಸುವ ಮೂಲಕ ಹೊಸ ಹವಾ ಎಬ್ಬಿಸಿದ್ದ ಈಕೆ ಇದೀಗ ದ್ರೌಪತಿಯಾಗಿದ್ದಾರಂತೆ. ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆಯೊಂದು ನಿರ್ಮಾಣ ಮಾಡುತ್ತಿರುವ ಮಹಾಭಾರತ ಆನಿಮೇಶನ್ ಚಿತ್ರದಲ್ಲಿ ವಿದ್ಯಾಬಾಲನ್ ದ್ರೌಪತಿ ಪಾತ್ರಕ್ಕೆ ಕಂಠದಾನ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಅಮಿತಾಬ್ ಬಚ್ಚನ್, ಸನ್ನಿ ಡಿಯೋಲ್ ಸೇರಿದಂತೆ ಬಾಲಿವುಡ್ನ ಖ್ಯಾತನಾಮರು ಈಗಾಗಲೇ ಚಿತ್ರಕ್ಕೆ ಕಂಠದಾನ ಮಾಡಲು ಒಪ್ಪಿಕೊಂಡಿದ್ದು ಆ ಸಾಲಿಗೆ ಇದೀಗ ವಿದ್ಯಾಬಾಲನ್ ಸೇರ್ಪಡೆಗೊಂಡಿದ್ದಾರೆ.

webdunia
PR
ಈಗಾಗಲೇ ಚಿತ್ರ ನಿರ್ಮಾಣ ಸಂಸ್ಥೆ ಜೊತೆಗಿನ ಅಗ್ರಿಮೆಂಟ್ಗೆ ವಿದ್ಯಾಬಾಲನ್ ಸಹಿ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಷ್ಟೇ ಅಲ್ಲ, ಆನಿಮೇಷನ್ನ ದ್ರೌಪದಿ ಪಾತ್ರ ವಿದ್ಯಾಬಾಲನ್ ಅವರನ್ನೇ ಹೋಲುತ್ತಿದೆಯಂತೆ.

ವಿದ್ಯಾಬಾಲನ್ ಪ್ರತಿರೂಪದಂತೆ ಕಾಣುವ ದ್ರೌಪದಿ ವಯ್ಯಾರ, ಲಾವಣ್ಯ, ದೇಹಸೌಂದರ್ಯ ಎಲ್ಲವುಗಳ ಅನುರಣನವೇ ಆನಿಮೇಶನ್ ದ್ರೌಪದಿ ಎನ್ನಲಾಗಿದೆ. ಈವರೆಗೆ ಬಿಚ್ಚಮ್ಮಳಾಗಿ ಬಾಲಿವುಡ್ಲ್ಲಿ ಸಂಚಲನ ಮೂಡಿಸಿರುವ ವಿದ್ಯಾ ದ್ರೌಪದಿಯಾಗಿ ಎಷ್ಟು ಜನರ ಮನ ಗೆಲ್ಲಲ್ಲಿದ್ದಾರೆ ಎಂದು ಕಾದು ನೋಡಬೇಕಷ್ಟೇ.

Share this Story:

Follow Webdunia kannada