Article Bollywood Gossips %e0%b2%86%e0%b2%a8%e0%b2%82%e0%b2%a6 %e0%b2%a8%e0%b2%bf%e0%b2%b2%e0%b2%af%e0%b2%82%e0%b2%97%e0%b2%be%e0%b2%97%e0%b2%bf %e0%b2%b9%e0%b2%be%e0%b2%a1%e0%b2%bf%e0%b2%a6 %e0%b2%b2%e0%b2%a4%e0%b2%be %e0%b2%ae%e0%b2%82%e0%b2%97%e0%b3%87%e0%b2%b6%e0%b3%8d%e0%b2%95%e0%b2%b0%e0%b3%8d 113100400006_1.htm

Daily Horoscope

Select Your Language

Notifications

webdunia
webdunia
webdunia
webdunia

ಆನಂದ ನಿಲಯಂಗಾಗಿ ಹಾಡಿದ ಲತಾ ಮಂಗೇಶ್ಕರ್

ಲತಾ ಮಂಗೇಶ್ಕರ್
PR
ಲತಾ ಮಂಗೇಶ್ಕರ್ ಕೈಲಿ ಹಾಡು ಹಾಡಿಸಬೇಕೆಂಬ ಬಯಕೆ ಯಾರಿಗೆ ಇರುವುದಿಲ್ಲ ಹೇಳಿ. ಆ ಒಂದು ಅವಕಾಶಕ್ಕಾಗಿ ಅದೆಷ್ಟೋ ಮಂದಿ ಕಾಯುತ್ತಿರುತ್ತಾರೆ. ಇದು ಎಲ್ಲರಿಗೂ ಸಿಗುವುದಿಲ್ಲ ಎಂಬುದು ಗೊತ್ತಿರುವ ವಿಷಯವೇ. ಆದರೆ ಕಿರುತೆರೆಯ ಹಿರಿಯ ನಟ ವೆಂಕಟಾದ್ರಿ ತಮ್ಮ ಆನಂದ ನಿಲಯಂ ಪ್ರಾಜೆಕ್ಟ್ಗಾಗಿ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರಿಂದ ಹಾಡಿಸಿದ್ದಾರೆ. ಅಂದಹಾಗೆ ಇದು ಅವರ ಎರಡು ವರ್ಷದ ಸತತ ಪ್ರಯತ್ನಕ್ಕೆ ಸಿಕ್ಕ ಫಲ.

ತಿರುಪತಿ ಮತ್ತು ಅಲ್ಲಿನ ದೇವರನ್ನು ಬಣ್ಣಿಸುವಂತಹ ಹಾಡು ಇದು. ಲತಾ ಮಂಗೇಶ್ಕರ್ ಇಲ್ಲಿ ಇಡೀ ಹಾಡನ್ನು ಹಾಡಿಲ್ಲ, ಈ ಹಾಡಿನ ಎರಡು ಸಾಲನ್ನಷ್ಟೇ ಹಾಡಿದ್ದಾರೆ. ಸೆ.30ರಂದು ಲತಾ ಮಂಗೇಶ್ಕರ್ ಹಾಡುವ ಮೂಲಕ ವೆಂಕಟಾದ್ರಿ ಅವರ ಕನಸು ನನಸಾಗಿದೆ. ಉಳಿದಂತೆ ಈ ಹಾಡಿನಲ್ಲಿ ಖ್ಯಾತ ಗಾಯಕರಾದ ಬಾಲಮುರಳಿ ಕೃಷ್ಣ, ಶಂಕರ್ ಮಹದೇವನ್, ಷಣ್ಮುಗ ಪ್ರಿಯ ಸೇರಿದಂತೆ ಹಲವರ ದನಿ ಅಲ್ಲಿರಲಿದೆ. ಲತಾ ಮಂಗೇಶ್ಕರ್ ಕೊನೆಗೂ ನಮ್ಮ ಪ್ರಾಜೆಕ್ಟ್ನಲ್ಲಿ ಹಾಡಿದ್ದಕ್ಕೆ ಖುಷಿ ಇದೆ. ಎರಡು ವರ್ಷಗಳಿಂದ ಅವರಿಂದ ಹಾಡಿಸಲು ಪ್ರಯತ್ನಿಸುತ್ತಿದೆ. ಕೊನೆಗೂ ಅದು ಈಗ ಈಡೇರಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ ವೆಂಕಟಾದ್ರಿ.

Share this Story:

Follow Webdunia kannada