ಆಜಾ.. ಮೇಲಿನ ಉ.ಪ್ರ ನಿಷೇಧ ತೆರವು
Publish Date: Sat, 01 Dec 2007 (19:12 IST)
Updated Date: Sat, 01 Dec 2007 (19:11 IST)
ಆಜಾ ನಾಚ್ಲೇ ಚಿತ್ರ ನಿರ್ಮಾಪಕ ಯಶ ಚೋಪ್ರಾ ಅವರು ಕ್ಷಮೆ ಕೋರಿದ ನಂತರ, ಧಕ್ ಧಕ್ ಬೇಡಗಿಯ ಪುನರಾಗಮನ ಚಿತ್ರ ಆಜಾ ನಾಚ್ ಲೇ ಮೇಲೆ ಹೇರಲಾಗಿದ್ದ ನಿಷೇಧವನ್ನು ಉತ್ತರ ಪ್ರದೇಶ ಸರಕಾರ ಹಿಂದೆಗೆದುಕೊಂಡಿದೆ. ಯಶ್ ರಾಜ್ ಬ್ಯಾನರಿನ ಆಜಾ...ದಲ್ಲಿ ದಲಿತರಿಗೆ ಅವಮಾನವಾಗುವಂತಹ ಸಂಗತಿಗಳನ್ನು ಚಿತ್ರಿಕರಿಸಲಾಗಿದೆ ಎಂದು ಕೆಲವು ಸಂಘಟನೆಗಳು ಆರೋಪ ಮಾಡಿ, ಪ್ರದರ್ಶನ ನಿಷೇಧಕ್ಕೆ ಒತ್ತಾಯಿಸಿದ್ದವು. ವಿವಾದಕ್ಕೆ ಕಾರಣವಾದ ಅಂಶಗಳನ್ನು ಚಿತ್ರ ನಿರ್ಮಾಪಕರು ತೆಗೆದು ಹಾಕಲು ಒಪ್ಪಿಕೊಂಡಿರುವುದರಿಂದ ನಿಷೇದ ತೆರವುಗೊಳಿಸಲಾಗಿದೆ. ಯಶ್ ರಾಜ್ ಫಿಲ್ಮ್ಸ್ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಯಾವುದೇ ವ್ಯಕ್ತಿ ಅಥವಾ ಸಮುದಾಯದ ಭಾವನೆಗಳಿಗೆ ದಕ್ಕೆ ತರುವ ಅವಮಾನ ಪಡಿಸುವ ಉದ್ದೇಶ ಇಲ್ಲ. ಆಕಸ್ಮಿಕವಾಗಿ ಆಗಿರುವ ತಪ್ಪಿಗೆ ಕ್ಷಮೆ ಯಾಚಿಸುತ್ತೆವೆ. ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಅಕ್ಷೇಪಾರ್ಹ ಸಂಗತಿಗಳನ್ನು ಆಜಾ...ದಿಂದ ತೆಗೆದುಹಾಕುತ್ತಿದ್ದೆವೆ ಎಂದು ಹೇಳಿದೆ.