Publish Date: Sat, 01 Dec 2007 (17:38 IST)
Updated Date: Sat, 01 Dec 2007 (17:38 IST)
ಧಕ್ ಧಕ್ ಬೇಡಗಿಯ ಆಜಾ ನಾಚ್‌ಲೇಯಲ್ಲಿನ ಕೆಲ ಹಾಡುಗಳಿಗೆ ಸಂಭಂಧಿಸಿದಂತೆ ವಿವಾದದ ಹುತ್ತ ಬೆಳೆಯುತ್ತಲೆ ಅತ್ತ ಭಾರತೀಯ ಸೆನ್ಸಾರ್ ಮಂಡಳಿಯ ಮುಖ್ಯಸ್ಥೆ ಶರ್ಮಿಳಾ ಟ್ಯಾಗೋರ್ ಅವರು ಆಜಾ.... ವನ್ನು ನಿಷೇಧಿಸಲು ಕಾರಣಗಳೇ ಇಲ್ಲ ಎಂದು ಹೇಳಿ, ಚಿತ್ರದಲ್ಲಿ ಯಾವುದೇ ಕೋಮಿಗೆ ದಕ್ಕೆಯಾಗುವ ಹಾಡುಗಳಿದ್ದರೆ ಅದಕ್ಕೆ ನಾನು ಕ್ಷಮೆ ಕೋರುತ್ತೆನೆ ಆದರೆ ಚಿತ್ರ ನಿಷೇಧ ಸಾಧ್ಯವಿಲ್ಲ ಎಂದಿದ್ದಾರೆ.
ಬಹಳ ದಿನಗಳಿಂದ ಚಿತ್ರದ ಸಂಗೀತ ಮಾರುಕಟ್ಟೆಯಲ್ಲಿದೆ. ಆ ಸಮಯದಲ್ಲಿ ಯಾರು ದೂರು ಸಲ್ಲಿಸಿಲ್ಲ. ಇದೇ ಆಧಾರದ ಮೇಲೆ ದೂರನ್ನು ಗಮನಿಸಿದಲ್ಲಿ ಇದು ಜಾತಿಯಾಧಾರಿತ ದೂರಲ್ಲ ಬದಲಾಗಿ ವೃತ್ತಿ ಆಧಾರಿತ ಟಿಪ್ಪಣೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚಿತ್ರದಲ್ಲಿ ಒಳಗೊಂಡಿರುವ ಹಾಡಿನ ತುಣುಕುಗಳನ್ನು ಈಗಾಗಲೇ ನಿರ್ಮಾಪಕರು ಸ್ವಯಂಪ್ರೇರಿತರಾಗಿ ತೆಗೆದು ಹಾಕಿರುವುದರಿಂದ ನಿಷೇಧದ ಸಮಸ್ಯೆ ಪರಿಹಾರವಾದಂತಾಗಿದೆ. ಅಲ್ಲದೆ ಅಷ್ಟಕ್ಕೂ ನಾನೇ ಈ ವಿಚಾರದ ಬಗ್ಗೆ ಕ್ಷಮೆ ಕೋರಲು ಸಿದ್ಧ ಎಂದು ಹೇಳಿದ್ದಾರೆ.
ದಲಿತರಿಗೆ ಅಪಮಾನವೇಸಗುವ ರೀತಿಯಲ್ಲಿ ಹಾಡಿನ ಸಾಹಿತ್ಯವನ್ನು ರಚಿಸಲಾಗಿದೆ ಎಂಬ ಆರೋಪಕ್ಕೆ ಅವರು ಸೆನ್ಸಾರ್ ಮಂಡಳಿಯು ಸ್ವಲ್ಪ ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ್ದು ಸತ್ಯ ಎಂದು ಒಪ್ಪಿಕೊಂಡಿದ್ದಾರೆ.
ಕಾನೂನು ಸುವ್ಯವಸ್ಥೆಗೆ ದಕ್ಕೆ ಬಂದಲ್ಲಿ ರಾಜ್ಯ ಸರಕಾರಗಳು ಚಿತ್ರ ಪ್ರದರ್ಶನವನ್ನು ನಿಷೇಧಿಸಬಹುದು. ಆದರೆ ಸರಕಾರದ ನಿಷೇಧಕ್ಕೆ ಒಳಗಾಗುವಂತಹ ವಿಚಾರವನ್ನು ಚಿತ್ರದಲ್ಲಿ ಇಲ್ಲ ಮತ್ತು ಈ ಮೊದಲು ಇದ್ದ ಹಾಡಿನ ಭಾಗವನ್ನು ನಿರ್ಮಾಪಕರು ತೆಗೆದು ಹಾಕಿದ್ದಾರೆ. ಅಲ್ಲದೇ ನಾನೇ ಖುದ್ದು ಚಿತ್ರವನ್ನು ವಿಕ್ಷಿಸಿದ್ದೆನೆ. ಮುಂಬೈನಂತಹ ಪ್ರಮುಖ ನಗರದಲ್ಲಿ ಅಂತಹ ಭಾರಿ ಪ್ರಮಾಣದ ಪ್ರತಿಭಟನೆ ವ್ಯಕ್ತವಾಗುತ್ತಿಲ್ಲ ಆದ್ದರಿಂದ ನಿಷೇಧ ಇಲ್ಲ ಎಂದಿದ್ದಾರೆ.