Publish Date: Sat, 30 Jun 2007 (15:57 IST)
Updated Date: Sat, 30 Jun 2007 (15:56 IST)
ಪೂಜಾ ಭಟ್ ನಿರ್ಧೇಶಿತ ಚಿತ್ರ 'ದೋಕಾ'ದ ಪ್ರೋಮೋಗಳನ್ನು 'ಅವಾರಪನ್' ಚಿತ್ರ ಪ್ರದರ್ಶನದ ವೇಳೆ ತೋರಿಸಲಾಗುತ್ತಿದೆ. ಬಹು ನಿರೀಕ್ಷಿತ 'ದೋಕ' ಚಿತ್ರವನ್ನು ಮಹೇಶ್ ಭಟ್ ನಿರ್ಮಿಸಿದ್ದು, ಸೂಪರ್‌ಮೋಡೆಲ್ ಮುಜಾಮಿಲ್ ಇಬ್ರಾಹಿಂ ಪರಿಚಯಿಸುತ್ತಿದ್ದಾರೆ.
ಮೇರೆ ಯಾರ್ ಕಿ ಶಾದಿ ಹೈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ ತುಲಿಪ್ ಜೋಷಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ವಿಶೇಷ್ ಪಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿದೆ.
ಮೋಹಿತ್ ಸೂರಿ ನಿರ್ಧೇಶಿತ 'ಅವಾರಪನ್' ಚಿತ್ರ ವಿಶೇಷ್ ಪಿಲ್ಮ್ಮ್‌ನ ಉತ್ಪನ್ನವಾಗಿದೆ. ಈಗಾಗಲೇ ನಿರೀಕ್ಷೆ ಮೂಡಿಸಿರುವ 'ದೋಕಾ' ಚಿತ್ರದ ತುಣುಕುಗಳನ್ನು ತೋರಿಸಿ ಭಟ್ ಪರಿವಾರ ಇದರ ಸಂಪೂರ್ಣ ಲಾಭ ಪಡೆಯುತ್ತಿದೆ.
ಇದೇ ವೇಳೆ ಭಟ್‌ರ ಇತರ ಚಿತ್ರಗಳಾದ ಪ್ರಖ್ಯಾತ ಕೊರಿಯೋಗ್ರಾಫರ್ ರಾಜು ಖಾನ್ ನಿರ್ಧೇಶಿತ 'ಶೋಬಿಸ್', ಅನುರಾಗ್ ಬಸುರಿಂದ ನಿರ್ಧೇಶಿಸಲ್ಪಡಲಿರುವ 'ಸುಸೈಡ್ ಬಾಂಬರ್' ಮತ್ತು ಮೋಹಿತ್ ಸೂರಿ ನಿರ್ಧೇಶಿತ ಹಾಗು ಇಮ್ರಾನ್ ಹಾಶ್ಮಿ ನಟಿಸಲಿರುವ 'ರಾಜ್ 2 ರ ನಿರ್ಮಾಣ ಕಾರ್ಯ ನಡೆಯುತ್ತಿದೆ.