ಅವಳ ಬೆತ್ತಲೆ ಚಿತ್ರದ ಬೆಲೆ 5 ಲಕ್ಷ !
Publish Date: Sat, 17 Jan 2009 (18:31 IST)
Updated Date: Sat, 17 Jan 2009 (18:30 IST)
ಆಕೆಗೀಗ 50 ವರ್ಷ. ಇಂದಿಗೂ ಬಹು ಬೇಡಿಕೆಯ ನಟಿ ಮತ್ತು ಪಾಪ್ ಗಾಯಕಿ. ತುಟಿ ಕೆಂಪಾಗುತ್ತಿದ್ದಂತೆ ಬೇಡಿಕೆಗೆ ಬಂದಿದ್ದ ಚೆಂದುಳ್ಳಿ ಚೆಲುವೆ 30 ವರ್ಷಗಳ ಹಿಂದೆ ಬೆತ್ತಲೆಯಾಗಿ ತೆಗೆಸಿದ್ದ ಫೋಟೋಗಳನ್ನು ಇದೀಗ ಹರಾಜು ಹಾಕಲಾಗುತ್ತಿದೆ. ಅದರ ಬೆಲೆ 10,000 ಅಮೆರಿಕನ್ ಡಾಲರ್‌ಗಳು ಮತ್ತು ಅವಳ ಹೆಸರು ಮಡೋನ್ನಾ !ಬಹುಶಃ ಮಡೋನ್ನಾ ಹೊಂದಿದಷ್ಟು ಅಕ್ರಮ ಮತ್ತು ಸಕ್ರಮ ಸಂಬಂಧಗಳನ್ನು ಬೇರ‌್ಯಾವ ನಟಿಯೂ ಹೊಂದಿರಲು ಸಾಧ್ಯವಿಲ್ಲ. ಸಿಕ್ಕಿದವರನ್ನೆಲ್ಲ ತನ್ನ ತೆಕ್ಕೆಗೆ ಎಳೆದುಕೊಂಡು ಕ್ಷಣಗಳಲ್ಲೇ ಹೊಸಕಿ ಹಾಕುವ ಸಂಸ್ಕೃತಿ ಅವಳದ್ದು. ಮಾಡಿದ ಡೇಟಿಂಗ್, ಕಳೆದ ರಾತ್ರಿಗಳು ಮತ್ತು ಹಂಚಿಕೊಂಡ ದೇಹಗಳ ಲೆಕ್ಕ ಅವಳಿಗೇ ಗೊತ್ತಿರಲಿಕ್ಕಿಲ್ಲ. ಶುದ್ಧ ಹರಕು ಭಾಷೆಯಲ್ಲೇ ಹೇಳುವುದಾದರೆ ಆಕೆ ಮಾಡುತ್ತಿದ್ದುದು ಹಾದರ. ಅವಳನ್ನು ಮತ್ತೊಂದು ಹೆಸರಿನಲ್ಲಿ ಕರೆಯುವುದಾದರೆ ಟ್ರೆಡೀಷನಲ್ ವೇಶ್ಯೆ ಎನ್ನಬಹುದು !
ಹಾಗಂತ ಹಾದಿ ಬೀದಿಯಲ್ಲಿ ಸಿಗುವ ಕರೆವೆಣ್ಣು ಆಕೆಯಲ್ಲ. ಆಕೆಗಾಗಿ ಪ್ರತಿದಿನ ಅಪರಾತ್ರಿ ಆಗಂತುಕರಾಗುವ ಗಂಡಸು ಕುಲ ಇಂದಿಗೂ ನ್ಯೂಯಾರ್ಕ್‌ನ ಗಲ್ಲಿ ಗಲ್ಲಿಗಳಲ್ಲಿವೆ. ಆಕೆಯ ದೇಹ ಸಿರಿಯನ್ನು ಸೆರೆ ಹಿಡಿಯಲು ಮಿಕಗಳಂತೆ ಕಾಯುತ್ತಿರುವ ಅದೆಷ್ಟೋ ಕ್ಯಾಮರಾಗಳು ಕಾಯುತ್ತಿವೆ. ವಯಸ್ಸು ಐವತ್ತಾದರೂ ಮೂವತ್ತರ ಅಂಗನೆಯಂತೆ ಓಲಾಡುತ್ತಿರುವ ಮಡೋನ್ನಾ ಇನ್ನೂ ಗಂಡನ ಹುಡುಕಾಟದಲ್ಲಿದ್ದಾಳೆ.
ಹಾಗೆ ಹೇಳಲು ಹೋದರೆ ಈಕೆ ಜಗತ್‌ಸುಂದರಿ ಮರ್ಲಿನ್ ಮನ್ರೋಳಷ್ಟು ಸುಂದರಿಯಲ್ಲ. ಆಕೆಯಂತೆ ಜೀವನದಲ್ಲಿ ಪ್ರೀತಿಯ ಹುಡುಕಾಟದಲ್ಲಿ ಸೋತವಳಲ್ಲ. ಮನ್ರೋ ಪ್ರೀತಿ ಹುಡುಕುವ ಗೊಂದಲದಲ್ಲಿ ದೇಹವನ್ನು ಬಿಚ್ಚಿಡುತ್ತಾ ಹೋದಳು. ಕೆಟ್ಟ ಗಂಡು ಕುಳ ಅವಳ ದೇಹವನ್ನು ಹಿಂಡಿ ಹಿಪ್ಪೆ ಮಾಡಿದ ಹೊರತು ಪ್ರೀತಿಯ ನವೆಯೂ ಆಕೆಗೆ ದೊರಕಲಿಲ್ಲ. ಕೊನೆಗೆ ಅದೇ ನೋವಿನಲ್ಲಿ ಪ್ರಾಣ ಬಿಟ್ಟವಳು ಮನ್ರೋ. ಅವಳ ರೀತಿಯಲ್ಲೇ ಮುಂದುವರಿಯುತ್ತಿರುವ ಮಡೋನ್ನಾ ನೊಂದವಳಂತೆ ಕಾಣಿಸದಿದ್ದರೂ ಮುಖದಲ್ಲಿನ್ನೂ ಹಸಿವು ಇಂಗಿದ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ.
ಇಂದಿಗೂ ಅಷ್ಟೊಂದು ಬೇಡಿಕೆ ಉಳಿಸಿಕೊಂಡಿರುವ ಮಡೋನ್ನಾ 30 ವರ್ಷಗಳ ಹಿಂದೆ ಹೇಗಿದ್ದಿರಬಹುದು. ನೀವೇ ಯೋಚಿಸಿ. ಅಂತಹ ಸಂಪದ್ಭರಿತ ದಿನಗಳಲ್ಲಿ ಸಂಪೂರ್ಣ ಬೆತ್ತಲೆಯಾಗಿ ತೆಗೆದಿದ್ದ ಫೋಟೋಗಳನ್ನು ಇದೀಗ ಹರಾಜು ಹಾಕಲಾಗುತ್ತಿದೆಯಂತೆ. ಬೆಲೆ ಸರಿಸುಮಾರು 10 ಸಾವಿರ ಡಾಲರ್ ಎಂದು ನಿಗದಿ ಪಡಿಸಲಾಗಿದೆ. 15 ಸಾವಿರ ಡಾಲರ್‌ವರೆಗೆ ಮಾರಾಟವಾಗುವ ಸಾಧ್ಯತೆಯಿದೆ ಎಂದು ಹರಾಜು ಮಾಲಕರು ಅಂದಾಜಿಸಿದ್ದಾರೆ.
1979ರಲ್ಲಿ ಮಡೋನ್ನಾ 20ರ ಹರೆಯದಲ್ಲಿದ್ದಾಗ ಈ ಚಿತ್ರ ತೆಗೆಯಲು ಆಕೆಗೆ ಕೇವಲ 25 ಡಾಲರ್ ನೀಡಲಾಗಿತ್ತಂತೆ. ಆಗಿನ್ನೂ ಬೆಳಕಿಗೆ ಬಂದಿರದ ಗಾಯಕಿ ಮತ್ತು ನಟಿಯಾಕೆ. ಛಾಯಾಚಿತ್ರಕಾರ ಲೀ ಫ್ರೆಡ್ಲಾಂಡರ್ ವಿವಿಧ ಭಂಗಿಗಳ ಆರು ಚಿತ್ರಗಳನ್ನು ತೆಗೆದಿದ್ದರಂತೆ. ಈ ಆರು ಪೂರ್ಣ ಬೆತ್ತಲೆ ಚಿತ್ರಗಳ ಜತೆಗೆ ಅಲ್ಲಲ್ಲಿ ಬಟ್ಟೆ ಧರಿಸಿದ ಕೆಲವು ಫೋಟೋಗಳನ್ನು ಕೂಡ ಹರಾಜಿಗೆ ಹಾಕಲಾಗುತ್ತದೆಯಂತೆ.