Publish Date: Sun, 15 Jul 2007 (14:06 IST)
Updated Date: Sun, 15 Jul 2007 (14:05 IST)
ಬಾಲಿವುಡ್ ನಿರ್ದೇಶಕ ಸಂತೋಷ್ ಶಿವನ್ ಗೊತ್ತಲ್ಲ, ಕರೀನಾ ಕಪೂರ್-ಶಾರೂಕ್ ಮಾದಕ ಅಭಿನಯದ 'ಅಸೋಕ' ನಿರ್ದೇಶಿಸಿದವರಿವರು. ಇದೀಗ ಅಫ್ಘಾನಿಸ್ತಾನದಲ್ಲಿ ಹೊಸ ಚಿತ್ರ ಚಿತ್ರೀಕರಿಸಲಿದ್ದಾರೆ.
ಬಿಬಿಸಿ ನಿರ್ಮಾಣದ ಈ ಹೊಸ ಚಿತ್ರದ ಹೆಸರು 'ವೆಡಿಂಗ್ ಪಾರ್ಟಿ'. ಪ್ರಸ್ತುತ ಅಲ್‌ಖೈದಾ ನೆಲದಲ್ಲಿ ಚಿತ್ರಣಗೊಳ್ಳಲಿರುವ ಸಿನೆಮಾದಲ್ಲಿ ಕಥೆಯೂ ಕುತೂಹಲಕಾರಿಯಾಗಿದೆ.
ಅಫ್ಘಾನಿಸ್ತಾನದ ನೂತನ ಸಮಸ್ಯೆಯ ಕುರಿತು ಇದರಲ್ಲಿ ಬೆಳಕು ಚೆಲ್ಲುವ ಪ್ರಯತ್ನವಿದೆ. ಬಿಳಿಯರು ಹಾಗೂ ರಷ್ಯಾ ಮೂಲದ ಜನರು ಆ ದೇಶದಲ್ಲಿ ನೆಲೆಯೂರಿದ ಶತಮಾನದ ಹಿಂದಿನ ಕಥೆ ಮೂಡಿಬರಲಿದೆ.
ಚಿತ್ರಕಥೆಯನ್ನು ಇಟೆಲಿ ಮೂಲದ ಬರಹಗಾರರು ಪೂರ್ಣಗೊಳಿಸಿ ಒದಗಿಸಿದ್ದಾರೆ. ಆದರೆ ತಾರಾಗಣದ ಕುರಿತು ಇನ್ನೂ ನಿರ್ಧಾರವಾಗಿಲ್ಲ. ನಾಯಕ, ನಾಯಕಿಯರು ಯಾರು ಎಂಬ ಕುತೂಹಲ ಇನ್ನೂ ಬಾಕಿ ಉಳಿದಿದೆ.
ವಿಶೇಷವೆಂದರೆ ಚಿತ್ರಣ ಅಫ್ಘಾನಿಸ್ತಾನದಲ್ಲಿ ನಡೆಯಲಿರುವುದರಿಂದ ವಿಮಾ ಕಂಪನಿಗಳು ಪ್ರಾಯೋಜನೆಗೆ ಸಿದ್ಧವಾಗಿಲ್ಲವಂತೆ. ಇನ್ನುಳಿದಂತೆ ಮೊರೊಕ್ಕೊ ಹಾಗೂ ಲಢಾಕ್ ಗಳಲ್ಲೂ ಚಿತ್ರೀಕರಣಕ್ಕೆ ಯೋಜನೆ ಹಾಕಲಾಗಿದೆ.