ಅರುಂಧತಿ 2 ರಲ್ಲಿ ಅನುಷ್ಕಾಗೆ ತಪ್ಪಿದ ಅವಕಾಶ !
, ಗುರುವಾರ, 6 ಮಾರ್ಚ್ 2014 (09:55 IST)
ಅರುಂಧತಿ ಚಿತ್ರದಲ್ಲಿ ನಟಿಸಿದ ಬಳಿಕ ನಟಿ ಅನುಷ್ಕ ತಾರ ಬದುಕಲ್ಲಿ ಸಿಕ್ಕಾಪಟ್ಟೆ ಬದಲಾವಣೆ ಆಯಿತು. ಅದಾದ ಬಳಿಕ ಯಶಸ್ಸುಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡ ಈ ಚೆಲುವೆ ಟಾಲಿವುಡ್ ಬ್ಯುಸಿಯೇಸ್ಟ್ ನಟಿಯಾಗಿ ಬದಲಾದರು. ಅರುಂಧತಿಯಲ್ಲಿನ ಆಕೆಯ ಪಾತ್ರವು ತಾರ ಬದುಕನ್ನು ಉಜ್ವಲ ಮಾಡಿತು. ಅದಾದ ಬಳಿಕ ಆಕೆಗೆ ಅವಕಾಶಗಳ ಸುರಿಮಳೆ. ಇದು ಹಳೆಯ ಸಂಗತಿ. ಅರುಂಧತಿ ಚಿತ್ರದ ನಿರ್ಮಾಪಕ ಶ್ಯಾಮ್ ಪ್ರಸಾದ್ ರೆಡ್ಡಿ ಅವರು ಈಗ ಅರುಂಧತಿ2 ಚಿತ್ರದ ನಿರ್ಮಾಣ ಕಾರ್ಯದಲ್ಲಿ ಬ್ಯುಸಿ.
ಆದರೆ ಈ ಚಿತ್ರದಲ್ಲಿ ಅನುಷ್ಕಳಿಗೆ ಚಾನ್ಸ್ ಇಲ್ಲ , ಬದಲಾಗಿ ನಿತ್ಯ ಮೆನನ್ ಗೆ ಅವಕಾಶ ನೀಡಿದ್ದಾರೆ ಶ್ಯಾಮ್ ಪ್ರಸಾದ್ ರೆಡ್ಡಿ. ಅರುಂಧತಿ2ರಲ್ಲಿ ನಿತ್ಯ ಮೆನನ್ ಅನುಷ್ಕ ಸ್ಥಳದಲ್ಲಿ ಇರುತ್ತಾರೆ. ಇದಕ್ಕೆ ಸಂಬಂಧಪಟ್ಟ ಮಾತುಕತೆಗಳು, ಅಗ್ರಿಮೆಂಟ್ ಕೆಲಸ ಪೂರ್ಣ ಆಗಿದೆಯಂತೆ. ಆಗಿನ ಅರುಂಧತಿ ಚಿತ್ರವನ್ನು 13ಕೋಟಿ ರೂಪಾಯಿಗಳಲ್ಲಿ ನಿರ್ಮಿಸಿ 40ಕೋಟಿ ರೂಪಾಯಿಗಳನ್ನು ಗಳಿಕೆ ಮಾಡಿತ್ತು ನಿರ್ಮಾಣ ಸಂಸ್ಥೆ. ಆದರೆ ಸದ್ಯದ ಪರಿಸ್ಥ್ತಿಯಲ್ಲಿ ಅನುಷ್ಕಾಗೆ ಈ ಸಿನಿಮಾಗೆ ಡೇಟ್ಸ್ ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟ ಆಗಿರುವುದರಿಂದ ನಿರ್ಮಾಪಕರು ಈ ನಿರ್ಧಾರಕ್ಕೆ ಬಂದಿದ್ದಾರಂತೆ.