Article Bollywood Gossips %e0%b2%85%e0%b2%ae%e0%b3%8d%e0%b2%9c%e0%b2%a6%e0%b3%8d %e0%b2%96%e0%b2%be%e0%b2%a8%e0%b3%8d %e0%b2%ae%e0%b2%97%e0%b2%b3%e0%b3%81 %e0%b2%88%e0%b2%97 %e0%b2%ac%e0%b2%be%e0%b2%b2%e0%b2%bf%e0%b2%b5%e0%b3%81%e0%b2%a1%e0%b3%8d %e0%b2%97%e0%b3%86 %e0%b2%ac%e0%b2%82%e0%b2%a6%e0%b2%b3%e0%b3%81 113112200009_1.htm

Daily Horoscope

Select Your Language

Notifications

webdunia
webdunia
webdunia
webdunia

ಅಮ್ಜದ್ ಖಾನ್ ಮಗಳು ಈಗ ಬಾಲಿವುಡ್ ಗೆ ಬಂದಳು..

ಅಮ್ಜದ್ ಖಾನ್
PR
ಬಾಲಿವುಡ್ ಕಂಡಂತಹ ಅಪರೂಪದ ಖಳನಾಯಕ ಅಮ್ಜದ್ ಅಲಿಖಾನ್.ಅವರು ತಮ್ಮ ತಾರ ಬದುಕಲ್ಲಿ ಅತ್ಯಂತ ಎಫೆಕ್ಟೀವ್ ಖಳನಾಗಿ ನಟಿಸಿದ ವಿಶೇಷ ಕಲಾವಿದ. ಅದರಲ್ಲೂ ಶೋಲೆಯಲ್ಲಿ ನಟಿಸಿದ್ದ ಗಬ್ಬರ್ ಸಿಂಗ್ ಪಾತ್ರ ಈಗಲೂ ಜನಮಾನದಲ್ಲಿ ಹಾಗೆ ಸ್ಥಿರವಾಗಿ ನಿಂತಿದೆ. ಈ ಪಾಪ್ಯುಲರ್ ನಟನ ಮಗಳು ಅಹ್ಲಂ ಈಗ ಬೆಳ್ಳಿ ತೆರೆಗೆ ಕಾಲಿಟ್ಟಿದ್ದಾಳೆ. ರಂಗಭೂಮಿಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಈ ಚೆಲುವೆ ಅಂತಿಮವಾಗಿ ಬೆಳ್ಳಿತೆರೆಗೆ ಕಾಲಿಟ್ಟಿದ್ದಾಳೆ.ಪ್ರಸ್ತುತ ಮಾರ್ಕಂಡ್ ದೇಶಪಾಂಡೆ ಜೊತೆ ನಾಟಕಗಳಲ್ಲಿ ನಟಿಸುತ್ತಿರುವ ಅಹ್ಲಂ ಬಾಲಿವುಡ್ ನಲ್ಲಿ ನಟಿಸುವುದಕ್ಕಿಂತ ಹೆಚ್ಚು ಇಷ್ಟ ಪಡುವುದು ಥಿಯೇಟೀರನ್ನು.

ನನ್ನ ಮೊದಲ ಮತ್ತು ಅಂತಿಮ ಆದ್ಯತೆ ಥಿಯೇಟರ್ ಬಗ್ಗೆ ಎಂದು ಹೇಳಿದ್ದಾಳೆ ಆಕೆ.ಬಾಲಿವುಡ್ ಎಂದಿಗೂ ನನ್ನ ಮುಖ್ಯ ಆಯ್ಕೆಯಲ್ಲ ಎಂದೂ ಸಹ ತಿಳಿಸಿದ್ದಾರೆ. ಮಿಸ್ ಸುಂದರಿ ಚಿತ್ರದಲ್ಲಿ ಈಕೆ ನಟಿಸುತ್ತಿದ್ದಾಳೆ. ಇದು ಮಾರ್ಕಂಡ್ ಅವರ ಮಿಸ್ ಬ್ಯೂಟಿಫುಲ್ ನಾಟಕದ ಕಥೆಯಾಗಿದೆ. ಹಿರಿಯನಟ ಅಮ್ಜದ್ ಖಾನ್ ಸಹ ರಂಗಭೂಮಿಯಿಂದಲೇ ತಮ್ಮ ಕೆರಿಯರ್ ಆರಂಭಿಸಿದ್ದರು.

Share this Story:

Follow Webdunia kannada