ಅಮೃತಾಗೆ ಕರೆ ಮಾಡಿದ ಸಲ್ಮಾನ್
Publish Date: Tue, 11 Dec 2007 (12:22 IST)
Updated Date: Tue, 11 Dec 2007 (12:21 IST)
ಬಾಲಿವುಡ್ ಬೆಡಗಿ ಅಮೃತಾ ರಾವ್, 'ಹೋಲ್ಡ್ ಯುವರ್ ಬ್ರೀತ್' ಸಲ್ಮಾನ್ ಖಾನ್‌ನಿಂದ ಅನಿರೀಕ್ಷಿತ ದೂರವಾಣಿ ಕರೆಯೊಂದನ್ನು ಸ್ವೀಕರಿಸಿದ್ದರು. ಅನಿಲ್ ಕಪೂರ್ ಅವರ ಚಿತ್ರವೊಂದಕ್ಕಾಗಿ ಜೈಸಾಲ್ಮರ್‌ನಲ್ಲಿ ಚಿತ್ರೀಕರಣದಲ್ಲಿ ತೊಡಗಿರುವ ಅಮೃತಾ, ಮೈ ನೇಮ್ ಈಸ್ ಅಂಥೋನಿ ಗಾನ್ಸ್ಲೇವ್ಸ್ ನ ಧ್ವನಿ ಸುರುಳಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲು ಮುಂಬಯಿಗೆ ತೆರಳಿದ್ದರು. ಈ ಕಾರ್ಯಕ್ರಮದಲ್ಲಿ, ಚೆಲುವಾದ ನಟಿಯು ಅನೇಕರಿಂದ ಮೆಚ್ಚುಗೆಯನ್ನು ಪಡೆದಿದ್ದರು.ಬೋನೀ ಕಪೂರ್ ಅವರ ಚಿತ್ರಕ್ಕಾಗಿ ಹೈದರಾಬಾದ್‌ನಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದ ಸಲ್ಮಾನ್ ಖಾನ್ ಈ ಕಾರ್ಯಕ್ರಮವನ್ನು ಟಿವಿಯಲ್ಲಿ ನೋಡುತ್ತಿದ್ದರು, ಅಲ್ಲದೆ ಅದೇ ಸಂದರ್ಭದಲ್ಲಿ ಅಮೃತಾಗೆ ಕರೆ ಮಾಡಿ ತನ್ನ ಅಭಿನಂದನೆಯನ್ನು ತಿಳಿಸಿದರು. ಸಲ್ಮಾನ್ ನನಗೆ ಕರೆ ಮಾಡಿದಾಗ ನನಗೆ ನಿಜವಾಗಿಯೂ ಆಶ್ಚರ್ಯವಾಗಿತ್ತು, ಈ ಸಮಯದಲ್ಲಿ ಸಲ್ಮಾನ್ ಅವರೊಂದಿಗಿದ್ದ ಬೋನಿ ಅವರು ನನ್ನೊಂದಿಗೆ ಮಾತನಾಡಿದ್ದರು ಎಂದು ಅಮೃತಾ ನುಡಿದರು.