ಅಮೀಷಾ ಫುಲ್ ಘರಂ: ಕಾರಣವೇನು?
Publish Date: Mon, 24 Jun 2013 (17:41 IST)
Updated Date: Mon, 24 Jun 2013 (17:40 IST)
ಶಾರ್ಟಕಟ್ ರೋಮಿಯೋ ಚಿತ್ರದಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡ ಅಮೀಷಾ ಪಟೇಲ್ ಫುಲ್ ಗರಂ ಆಗಿದ್ದಾರಂತೆ. ಮನಸ್ಸಿನ ನಿಯಂತ್ರಣ ಕಳೆದುಕೊಂಡು ಸುಭಾಶ್ ಘಾಯ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾದೇನ್ ಚಿತ್ರದಿಂದ ತಾನು ಹೊರಬಿದ್ದಿದ್ದು ಫಿಲಂ ಪಾಲಿಟಿಕ್ಸ್ನಿಂದ ಎಂದೆಲ್ಲಾ ಅವರು ದೂರಿದ್ದಾರೆ.ಶಾರ್ಟಕಟ್ ರೋಮಿಯೋ ಸಿನೆಮಾದ ಪ್ರಚಾರ ವೇಳೆ ರೇಡಿಯೊ ಸಂದರ್ಶನವೊಂದರಲ್ಲಿ ಈ ಮಾತುಗಳು ಅಮೀಷಾ ಆಡಿದ್ದಾರೆ. ಒಂದು ವಿಷಯದಲ್ಲಿ ಆಕೆ ಲಕ್ಕಿ. ಹೀಗೆ ಮಾತನಾಡುವಾಗ ಅಲ್ಲಿಯೇ ಉಪಸ್ಥಿತರಿದ್ದ ಸುಭಾಷ್ ಘಾಯ್ ಮೌನದ ಮೊರೆ ಹೊಕ್ಕಿದ್ದಾರೆ. 13 ವರ್ಷದ ಕೆಳಗಿನ ಘಟನೆಗಳ ಬಗ್ಗೆ ಈಗ ಮಾತನಾಡಿ ಏನು ಪ್ರಯೋಜನ ಎಂದು ನಸುನಕ್ಕು ಸುಮ್ಮನಾಗಿದ್ದಾರೆ. ಅವರ ಜತೆಗಿದ್ದ ಚಿತ್ರತಂಡದ ಸದಸ್ಯರೊಬ್ಬರು ಯಾದೇನ್ ಚಿತ್ರ ಮಿಸ್ ಆದರೇನಂತೆ ಕಹೋ ನಾ ಪ್ಯಾರ್ ಹೆ ಚಿತ್ರದಲ್ಲಿ ಅಮೀಷಾ ಬದಲು ಕರೀನಾ ಅವರನ್ನು ಆಯ್ಕೆ ಮಾಡಿಕೊಂಡಿಲ್ಲವಲ್ಲ. ಬೇರೊಂದು ಚಿತ್ರದಲ್ಲಿ ಉತ್ತಮ ಅವಕಾಶವನ್ನೇ ಕೊಟ್ಟಿದ್ದಾರಲ್ಲಾ ಎಂದು ತಿರುಗೇಟು ನೀಡಿದ್ದಾರೆ. ಅದೇನೇ ಇರಲಿ, ಈ ಶಾರ್ಟಕಟ್ ಸಿನೆಮಾ ಯಶಸ್ಸು ತಂದುಕೊಟ್ಟರೂ ಸುಭಾಷ್ ಘಾಯ್ ಮತ್ತೆ ಅವರಿಗೆ ಚಾನ್ಸ್ ಕೊಡುತ್ತಾರೋ ಇಲ್ಲವೋ ಕಾದು ನೋಡಬೇಕಿದೆ.