Article Bollywood Gossips %e0%b2%85%e0%b2%ae%e0%b3%80%e0%b2%b0%e0%b3%8d%e2%80%8d%e2%80%8c%e2%80%8c%e0%b2%b0 %e0%b2%85%e0%b2%82%e0%b2%a6%e0%b2%be%e0%b2%9c%e0%b3%8d %e0%b2%85%e0%b2%aa%e0%b2%a8%e0%b2%be %e0%b2%85%e0%b2%aa%e0%b2%a8%e0%b2%be 108090800011_1.htm

Select Your Language

Notifications

webdunia
webdunia
webdunia
webdunia

ಅಮೀರ್‍‌‌ರ 'ಅಂದಾಜ್ ಅಪನಾ ಅಪನಾ'

ಅಂದಾಜ್ ಅಪನಾ ಅಪನಾ
IFM
ಹಿಟ್ ಚಿತ್ರಗಳ ಎರಡನೇ ಭಾಗ ತಯಾರಿಸುವುದು ಬಾಲಿವುಡ್‌ನಲ್ಲೀಗ ಚಾಲ್ತಿಯಲ್ಲಿರುವ ಟ್ರೆಂಡ್‌. ಈ ಬಾರಿ ಮಿ. ಪರ್ಫೆಕ್ಷನಿಸ್ಟ್ ಎಂದು ಕರೆಯಲ್ಪಡುವ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಇಂತಹುದೇ ಒಂದು ಯೋಚನೆ ಹೊಂದಿದ್ದಾರೆ, ಇಂದಿನವರೆಗೂ ಅತ್ಯುತ್ತವೆನಿಸಿರುವಂತಹ ಹಾಸ್ಯ ಚಿತ್ರವಾದ 'ಅಂದಾಜ್ ಅಪನಾ ಅಪನಾ'ದ ಎರಡನೇ ಭಾಗವನ್ನು ಚಿತ್ರೀಕರಿಸಿಬೇಕೆಂದು ಅಮೀರ್ ಯೋಜಿಸಿದ್ದಾರಂತೆ.

ಈ ಚಿತ್ರವು ಅತಿ ಹೆಚ್ಚು ಜನಮನ್ನಣೆಗೆ ಪಾತ್ರವಾದ ಅಮೀರ್ ಚಿತ್ರಗಳಲ್ಲಿ ಒಂದಾಗಿದ್ದು, ಇಂದಿಗೂ ಜನರ ಅಚ್ಚುಮೆಚ್ಚಿನ ಚಿತ್ರವಾಗಿ ಉಳಿದಿದೆ. ಮೂಲಗಳನ್ನು ನಂಬುವುದಾದರೆ ಈ ಚಿತ್ರದ ಉತ್ತರಾರ್ಧ ನಿರ್ಮಿಸುವ ಬಗೆಗಿನ ವಿವರಗಳನ್ನು ಅಮೀರ್ ಸಧ್ಯದಲ್ಲೇ ಬಹಿರಂಗಪಡಿಸಿಲಿದ್ದಾರೆ.

ಹಾಗದರೆ, ಚಿತ್ರದ ತಾರಾಂಗಣದಲ್ಲಿ ಯಾರು ಇರುತ್ತಾರೆ...?

ಚಿತ್ರದಲ್ಲಿ ಹಿಂದೆ ಮೋಡಿ ಮಾಡಿದ್ದ ಸ್ಟಾರ್ ಜೋಡಿಯಾದ ಅಮೀರ್ ಮತ್ತು ಸಲ್ಮಾನ್‌ ಮತ್ತೆ ಒಂದಾಗಲಿದ್ದಾರೆ ಎಂಬುದು ಈ ಖಾನ್‌ದ್ವಯರ ಅಭಿಮಾನಿ ಬಳಗಕ್ಕೆ ಸಿಹಿ ಸುದ್ದಿ.

ಸಧ್ಯಕ್ಕೆ ಸಲ್ಮಾನ್‌ರನ್ನು ಚಿತ್ರಕ್ಕೆ ಒಪ್ಪಿಸುವಲ್ಲಿ ಅಮೀರ್ ನಿರತರಾಗಿದ್ದಾರೆ. ನಿರ್ದೇಶಕ ರಾಜ್ ಕುಮಾರ್ ಸಂತೋಷಿಯವರೇ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆಯೇ ಎಂಬುದು ಪ್ರಸ್ತುತ ಪ್ರಶ್ನೆಯಾಗಿಯೇ ಉಳಿದಿದೆ.

ಆದರೆ ಅಮೀರ್‌ರ ಬಗ್ಗೆ ತಿಳಿದಿರುವ ಪ್ರಕಾರ, ಅವರ ಈ ಕನಸಿನ ಚಿತ್ರಕ್ಕೆ ಬಾಲಿವುಡ್‌ನ ದಿಗ್ಗಜರೊಬ್ಬರನ್ನು ನಿರ್ದೇಶನಕ್ಕಿಳಿಸುವುದು ಖಚಿತ...!!

Share this Story:

Follow Webdunia kannada