Article Bollywood Gossips %e0%b2%85%e0%b2%ae%e0%b3%80%e0%b2%b0%e0%b3%8d %e0%b2%b6%e0%b2%be%e0%b2%b0%e0%b3%82%e0%b2%96%e0%b3%8d %e0%b2%92%e0%b2%82%e0%b2%a6%e0%b3%87 %e0%b2%b8%e0%b2%bf%e0%b2%a8%e0%b2%bf%e0%b2%ae%e0%b2%be%e0%b2%a6%e0%b2%b2%e0%b3%8d%e0%b2%b2%e0%b2%bf 109012200088_1.htm

Daily Horoscope

Select Your Language

Notifications

webdunia
webdunia
webdunia
webdunia

ಅಮೀರ್-ಶಾರೂಖ್ ಒಂದೇ ಸಿನಿಮಾದಲ್ಲಿ...

ಅಮೀರ್ ಖಾನ್
ಬಾಲಿವುಡ್‌ನ ಎರಡು ಖ್ಯಾತ ಖಾನ್‌ಗಳು ಕೊನೆಗೂ ಒಂದೇ ಚಿತ್ರದಲ್ಲಿ ನಟಿಸಿದ್ದಾರೆ. ಮೊನ್ನೆ ಮೊನ್ನೆವರೆಗೆ ತಂತಮ್ಮ ಬ್ಲಾಗುಗಳಲ್ಲಿ ಕಚ್ಚಾಡುತ್ತಿದ್ದ ಶಾರೂಖ್ ಖಾನ್ ಮತ್ತು ಅಮೀರ್ ಖಾನ್ ಅಷ್ಟು ಬೇಗ ಬದಲಾದರೇ? ಬಹುಶಃ ಬದಲಾಗಿದ್ದಾರೆ. ಯಾಕೆಂದರೆ ನಂತರದ ದಿನಗಳಲ್ಲಿ ಇಬ್ಬರೂ ಪರಸ್ಪರ ಮುಖಸ್ತುತಿಯಲ್ಲಿ ತೊಡಗಿದ್ದನ್ನು ನಾವೆಲ್ಲ ನೋಡಿದ್ದೇವೆ ತಾನೇ.. ಇದೀಗ ಒಂದೇ ಚಿತ್ರದಲ್ಲಿ ನಟಿಸಿರುವ ಸುದ್ದಿ ಬಂದಿದೆ.

ಒಂದೇ ಚಿತ್ರದಲ್ಲಿ ನಟಿಸುತ್ತಿರುವುದೇನೋ ನಿಜ. ಆದರೆ ಒಟ್ಟಿಗೆ ಅಲ್ಲವೆಂಬುದು ಗಮನಾರ್ಹ. ಜಾವೇದ್ ಅಖ್ತರ್ ಪುತ್ರಿ ಝೋಯಾ ಅಖ್ತರ್ ನಿರ್ದೇಶನದ ಚೊಚ್ಚಲ ಚಿತ್ರ 'ಲಕ್ ಬೈ ಚಾನ್ಸ್' ಚಿತ್ರದಲ್ಲಿ ಈ ಇಬ್ಬರೂ ಖಾನ್‌ಗಳೂ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಬೇರೆ ಬೇರೆ ಸಮಯದಲ್ಲಿ ಸ್ಕ್ರೀನ್‌‌ನಲ್ಲಿ ಬಂದು ಹೋಗುತ್ತಾರೆ.

ಇಬ್ಬರೂ ಪರದೆಯನ್ನು ಹಂಚಿಕೊಳ್ಳದಿರುವುದು ನಿಜಕ್ಕೂ ಚಿತ್ರ ಪ್ರೇಮಿಗಳಿಗೆ ನಿರಾಸೆಯೇ ಸರಿ. ಇಬ್ಬರೂ ಬೇರೆ ಬೇರೆ ಸಂದರ್ಭದಲ್ಲಿ ಬಂದು ಪ್ರೇಕ್ಷಕರಿಗೆ ಮುಖ ತೋರಿಸಿ ಹೋಗುವುದು ಅಷ್ಟೇನೂ ಸರಿಯಿಲ್ಲ ಎನ್ನುವುದು ಹೆಚ್ಚಿನವರ ಅಭಿಪ್ರಾಯ. ಆದರೂ ಇಷ್ಟಕ್ಕಾದರೂ ಇಬ್ಬರೂ ಒಪ್ಪಿಕೊಂಡಿರುವುದು ಬಹುಶಃ 'ಬೈ ಚಾನ್ಸ್' ಇರಬೇಕು !

ಈ ಚಿತ್ರದಲ್ಲಿ ಶಾರೂಖ್ ಖಾನ್ ಫರ್ಹಾನ್ ಅಖ್ತರ್ ಜತೆ ಮತ್ತು ಅಮೀರ್ ಖಾನ್ ಕೊಂಕನಾ ಸೇನ್ ಜತೆ ಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರಷ್ಟೇ ಅಲ್ಲ ಇನ್ನೂ ಹಲವು ದೊಡ್ಡ ದೊಡ್ಡ ತಲೆಗಳು ಈ ಚಿತ್ರದಲ್ಲಿ ಇದ್ದಾರೆ. ಹೃತಿಕ್ ರೋಷನ್, ರಿಷಿ ಕಪೂರ್, ಡಿಂಪಲ್ ಕಪಾಡಿಯಾ, ಜೂಹಿ ಚಾವ್ಲಾ, ಇಶಾ ಶೆರ್ವಾನಿ, ಸಂಜಯ್ ಕಪೂರ್, ಶಬನಾ ಆಜ್ಮಿ, ಜಾವೇದ್ ಅಖ್ತರ್, ರಾಣಿ ಮುಖರ್ಜಿ, ಶಿಲ್ಪಾ ಶೆಟ್ಟಿ, ಕರಣ್ ಜೋಹರ್, ಕರೀನಾ ಕಪೂರ್, ಅಭಿಷೇಕ್ ಬಚ್ಚನ್, ಜಾನ್ ಅಬ್ರಹಾಂ, ರಣಬೀರ್ ಕಪೂರ್, ಅಕ್ಷಯ್ ಖನ್ನಾ, ವಿವೇಕ್ ಓಬೇರಾಯ್, ಬೊಮನ್ ಇರಾನಿ, ಅನುರಾಗ್ ಕಶ್ಯಪ್ ಮತ್ತು ರಾಜ್‌ಕುಮಾರ್ ಹಿರಾನಿ ಚಿತ್ರದಲ್ಲಿದ್ದಾರೆ. ಇಲ್ಲಿ ಪ್ರಧಾನ ಪಾತ್ರ ಫರ್ಹಾನ್ ಅಖ್ತರ್ ಮತ್ತು ಕೊಂಕಣಾ ಸೇನ್‌ರದ್ದು.

ಅಂದ ಹಾಗೆ ನಾಯಕ ಫರ್ಹಾನ್ ಅಖ್ತರ್ ಝೋಯಾ ಅಖ್ತರ್‌ರ ಸಹೋದರ ಮತ್ತು ಸ್ವತಃ ನಿರ್ದೇಶಕ. ದಿಲ್ ಚಾಹ್ತಾ ಹೈ, ಲಕ್ಷ್ಯ, ಡಾನ್, ಪೊಸಿಟಿವ್ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಉಳಿದಂತೆ ನಟ, ನಿರ್ಮಾಪಕ, ಕಥೆಗಾರ, ಸಾಹಿತಿಯಾಗಿ ಹಲವಾರು ಚಿತ್ರಗಳಲ್ಲಿ ಕೈಯಾಡಿಸಿದ್ದಾರೆ. ಮೊದಲ ಬಾರಿಗೆ ನಾಯಕರ ಪಟ್ಟಕ್ಕೆ ಏರಿದ್ದಾರೆ.

ಅಂದ ಹಾಗೆ ಇಷ್ಟೆಲ್ಲಾ ಜನರನ್ನು ಹೊತ್ತಿರುವ 'ಲಕ್ ಬೈ ಚಾನ್ಸ್' ಜನವರಿ 30ಕ್ಕೆ ಬಿಡುಗಡೆಯಾಗಲಿದೆ. ಈ ಹಿಂದೆ ಶಾರೂಖ್ ಖಾನ್, ದೀಪಿಕಾ ಪಡುಕೋಣೆಯವರ 'ಓಂ ಶಾಂತಿ ಓಂ'ನಲ್ಲೂ ಇದೇ ರೀತಿಯ ದೊಡ್ಡ ತಾರಾಗಣವಿತ್ತು.
IFM

Share this Story:

Follow Webdunia kannada