Article Bollywood Gossips %e0%b2%85%e0%b2%ae%e0%b3%80%e0%b2%b0%e0%b3%8d %e0%b2%a8%e0%b3%87%e0%b2%a4%e0%b3%83%e0%b2%a4%e0%b3%8d%e0%b2%b5%e0%b2%a6 %e0%b2%b8%e0%b2%a4%e0%b3%8d%e0%b2%af%e0%b2%ae%e0%b3%87%e0%b2%af %e0%b2%9c%e0%b2%af%e0%b2%a4%e0%b3%87 2 %e0%b2%aa%e0%b3%81%e0%b2%a8%e0%b2%b0%e0%b2%be%e0%b2%b0%e0%b2%82%e0%b2%ad 113102600013_1.htm

Daily Horoscope

Select Your Language

Notifications

webdunia
webdunia
webdunia
webdunia

ಅಮೀರ್ ನೇತೃತ್ವದ ಸತ್ಯಮೇಯ ಜಯತೇ 2 ಪುನರಾರಂಭ

ಅಮೀರ್ ಖಾನ್
PR
ಬಾಲಿವುಡ್‌ನಲ್ಲಿ ತನ್ನದೇ ಆದ ಭಿನ್ನ ರುಚಿಗಳಿಂದ, ನಟನೆಯಿಂದ ಮನೆಗೆದ್ದವರು ಅಮೀರ್‌ಖಾನ್. ಅದೇ ಕಾರಣಕ್ಕೆ ಅವರಿಗೆ ಮಿಸ್ಟರ್ ಪರ್ಫೆಕ್ಟ್ ಎಂಬ ಹೆಸರು ಬಂದಿದ್ದು. ತಾರೇ ಜಮೀನ್ ಪರ್, ತ್ರೀ ಈಡಿಯೆಟ್ಸ್ ಚಿತ್ರಗಳ ಮೂಲಕ ಬಾಕ್ಸಾಫೀಸ್ ಕೊಳ್ಳೆ ಹೊಡೆಯುವುದನ್ನೂ ಹೇಳಿಕೊಟ್ಟವರಿವರು. ಈಗ ಮತ್ತೆ ಕಿರುತೆರೆಗೆ ಮರಳಿರುವ ಅಮೀರ್ ಸ್ಟಾರ್ ಪ್ಲಸ್‌ನಲ್ಲಿ ಸತ್ಯಮೇಯ ಜಯತೇ ಸೀಸನ್ 2 ಕಾರ್ಯಕ್ರಮ ನಿರೂಪಿಸುವ ಜವಾಬ್ದಾರಿ ಹೊತ್ತಿದ್ದಾರೆ.

ಸತ್ಯಮೇಯ ಜಯತೇ ಮೊದಲ ಸೀಸನ್‌ಗೆ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸೀಸನ್ 2 ಮುಂದಿನ ವರ್ಷ ಜನವರಿಯಲ್ಲಿ ಆರಂಭವಾಗಲಿದ್ದು ಅದಕ್ಕಾಗಿ ಈಗಾಗಲೇ ತಯಾರು ಆರಂಭವಾಗಿದೆ.
ಯೋಜನೆ ಪ್ರಕಾರ್ ಸೀಸನ್ 2 ಈ ವರ್ಷದ ಮಧ್ಯಭಾಗದಲ್ಲೇ ಆರಂಭವಾಗಬೇಕಿತ್ತು. ಆದರೆ ಅಮೀರ್ ಆಭಿನಯದ ಆಕ್ಷನ್ ಚಿತ್ರ ಧೂಮ್ 3 ಚಿತ್ರೀಕರಣ ತಡವಾಗಿದ್ದೇ ...ಜಯತೇ ನಿಧಾನವಾಗಿ ಆರಂಭವಾಗಲು ಕಾರಣವಾಯಿತು ಎನ್ನಲಾಗಿದೆ.

ಈಗ ಬಿಡುವು ಮಾಡಿಕೊಂಡಿರುವ ಅಮೀರ್ ಕಿರುತೆರೆಯಲ್ಲಿ ಮತ್ತೆ ತೊಡಗಿಕೊಂಡಿದ್ದಾರೆ. ವರದಕ್ಷಿಣೆ, ಹೆಣ್ಣು ಭ್ರೂಣ ಹತ್ಯೆ, ಭ್ರಷ್ಟಾಚಾರ, ಅನೈತಿಕತೆ, ದೌರ್ಜನ್ಯ, ಮದ್ಯಪಾನ ಮೊದಲಾದ ಪ್ರಚಲಿತ ಸಮಸ್ಯೆಗಳ ಮೇಲೆ ಈ ಟಾಕ್ಶೋ ಬೆಳಕು ಚೆಲ್ಲಿತ್ತು. ವೇದಿಕೆಯಲ್ಲಿ ಸಾಕಷ್ಟು ವಾದ ವಿವಾದಗಳೂ ನಡೆದಿದ್ದವು. ಸೀಸನ್ 1ರಲ್ಲಿ ಅಸಂಖ್ಯಾತ ಮೇಲ್, ದೂರವಾಣಿ ಕರೆ, ಎಸ್ಎಂಎಸ್, ಪತ್ರಗಳು ಬಂದಿದ್ದು ಎಲ್ಲರೂ ಇದೊಂದು ಸೂಪರ್ ಶೋ ಎಂದು ಅಭಿಪ್ರಾಯಪಟ್ಟಿದ್ದರು. ಅಲ್ಲಿ 8 ಕೋಟಿ ರೂಪಾಯಿ ನಿಧಿ ಸಂಗ್ರಹವಾಗಿತ್ತು. ಈಗ ಎರಡನೇ ಸೀಸನ್‌ನಲ್ಲಿ ಏನೆಲ್ಲಾ ಸಂಗತಿಗಳಿರಬಹುದು ಎಂಬ ಕುತೂಹಲ ಪ್ರೇಕ್ಷಕರಲ್ಲಿದೆ.

Share this Story:

Follow Webdunia kannada