Article Bollywood Gossips %e0%b2%85%e0%b2%ae%e0%b3%80%e0%b2%b0%e0%b3%8d %e0%b2%96%e0%b2%be%e0%b2%a8%e0%b3%8d %e0%b2%b6%e0%b2%be%e0%b2%b0%e0%b3%82%e0%b2%96%e0%b3%8d %e0%b2%ae%e0%b2%a4%e0%b3%8d%e0%b2%a4%e0%b3%8a%e0%b2%82%e0%b2%a6%e0%b3%81 %e0%b2%a8%e0%b2%be%e0%b2%af%e0%b2%bf 108051700013_1.htm

Daily Horoscope

Select Your Language

Notifications

webdunia
webdunia
webdunia
webdunia

ಅಮೀರ್ ಖಾನ್, ಶಾರೂಖ್ ಮತ್ತೊಂದು ನಾಯಿ!

ಅಮೀರ್ ಖಾನ್
PTI
ಬಾಲಿವುಡ್ ಮಂದಿಯ ಬ್ಲಾಗುಗಳು ಕೂಡ ಇದೀಗ ಸುದ್ದಿ-ಸದ್ದು ಮಾಡತೊಡಗಿವೆ. ಅಮಿತಾಭ್ ಬಚ್ಚನ್ ಬ್ಲಾಗು ಇತ್ತೀಚೆಗಷ್ಟೇ ಶತ್ರುಘ್ನ ಸಿನ್ಹಾ ವಿರುದ್ಧದ ಹೇಳಿಕೆಯೊಂದಿಗೆ ಜೋರಾಗಿ ಸದ್ದು ಮಾಡಿದ ಬಳಿಕ ಈಗಿನ ಸರದಿ ಅಮೀರ್ ಖಾನ್ ಬ್ಲಾಗಿನದು.

'ಶಾರೂಖ್ ಖಾನ್' ಎಂದು ತನ್ನ ಸಾಕು ನಾಯಿಗೆ ಹೆಸರಿಟ್ಟಿರುವುದನ್ನು ಅಮೀರ್ ಖಾನ್ ಪ್ರಸ್ತಾಪಿಸಿದ್ದು, ಇದಕ್ಕೆ ಕಿಂಗ್ ಖಾನ್ ತಮ್ಮ ಎಂದಿನ ಕೂಲ್ ಕೂಲ್ ಕಾಯ್ದುಕೊಂಡು, ನಿರ್ಲಕ್ಷ್ಯದ ಪ್ರತಿಕ್ರಿಯೆ ನೀಡಿದ್ದಾರೆ. ಈ ಮಧ್ಯೆ, ನಾಯಿಗೆ ಹೆಸರಿಟ್ಟದ್ದಕ್ಕೂ ತನಗೂ ಸಂಬಂಧವಿಲ್ಲ ಎಂದು ಅಮೀರ್ ಖಾನ್ ಕೂಡ ಪ್ರತಿಕ್ರಿಯಿಸಿದ್ದಾರೆ.

ಶಾರೂಖ್ ಖಾನ್ ಎಂಬ ನಾಯಿ ತನ್ನ ಕಾಲು ನೆಕ್ಕುತ್ತಾ ಇರುತ್ತದೆ ಎಂಬುದನ್ನು ಅಮೀರ್ ಖಾನ್ ಬ್ಲಾಗಿನಲ್ಲಿ ಪ್ರಸ್ತಾಪಿಸಿದ್ದರು. ಇದೀಗ ವಿವಾದವೆದ್ದ ಕಾರಣಕ್ಕೆ ಪ್ರತಿಕ್ರಿಯೆ ನೀಡಿರುವ ಅಮೀರ್ ಖಾನ್, ಶಾರೂಖ್ ಎಂಬುದು ತಮ್ಮ ಮನೆಯನ್ನು ನೋಡಿಕೊಳ್ಳುತ್ತಿರುವವರು ಸಾಕಿರುವ ನಾಯಿ. ನಾವು ಈ ಮನೆಯನ್ನು ಖರೀದಿಸಿದ್ದಾಗ, ನಾಯಿ ಕೂಡ ಅವರೊಂದಿಗೆ ಬಂತು ಎಂದು ಸ್ಪಷ್ಟೀಕರಣ ನೀಡಿದ್ದಾರವರು.

ಶಾರೂಖ್ ಅವರಲ್ಲಿ ಈ ಕುರಿತು ಪ್ರತಿಕ್ರಿಯೆ ಕೇಳಿದಾಗ, ಇಂಥವುಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಗೆಳೆಯರು ಈ ರೀತಿ ತಮಾಷೆ ಮಾಡುವುದೆಲ್ಲಾ ಸಾಮಾನ್ಯ. ನಿಜಕ್ಕಾದರೆ, ನನಗೆ ಇದರಿಂದ ಖುಷಿಯೇ ಆಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಕೆಲವು ವರ್ಷಗಳ ಹಿಂದೆ ಶಾರೂಖ್ ಅವರು ಪಂಚಗನಿಯಲ್ಲಿರುವ ಮನೆಯಲ್ಲಿ ಶೂಟಿಂಗ್ ನಿರತರಾಗಿದ್ದರು. ಆವತ್ತೇ ಈ ಮನೆಯ ಉಸ್ತುವಾರಿಗಳು ನಾಯಿ ಮರಿ ಖರೀದಿಸಿದ್ದರು ಮತ್ತು ಆಗ ಯಶಸ್ಸಿನ ಹಾದಿಯಲ್ಲಿದ್ದ ನಟ ಶಾರೂಖ್‌ನ ಹೆಸರಿಟ್ಟಿದ್ದರು ಎಂದೂ ಅಮೀರ್ ವಿವರಿಸಿದ್ದಾರೆ.

Share this Story:

Follow Webdunia kannada