Publish Date: Sat, 29 Nov 2008 (15:08 IST)
Updated Date: Sat, 29 Nov 2008 (15:07 IST)
ಬಾಲಿವುಡ್‌ನಲ್ಲಿ ಖಂಡಿತವಾಗಿಯೂ ಯಶಸ್ಸು ದಕ್ಕಿಸಬಹುದಾದ ಫಾರ್ಮುಲಾ ಏನು ? ಅಮೀರ್ ಖಾನ್ ಮತ್ತು ಶಾರುಖ್ ಖಾನ್‌ರನ್ನು ಒಂದೇ ಚಿತ್ರದಲ್ಲಿ ತೋರಿಸುವುದು. ಈ ಕಲ್ಪನೆ ಇದುವರೆಗೆ ಕನಸಾಗಿಯೇ ಉಳಿದಿದೆ, ದಶಕಗಳಿಂದ ಈ ಖಾನ್‌ಗಳಿಬ್ಬರೂ ಬಾಲಿವುಡ್‌ನಲ್ಲಿ ದರ್ಬಾರು ನಡೆಸುತ್ತಿದ್ದರೂ ಇವರಿಬ್ಬರು ಯಾವುದೇ ಚಿತ್ರದಲ್ಲಿ ಜೊತೆಯಾಗಿ ಕಾಣಿಸಿಕೊಂಡಿಲ್ಲ. ಆದರೆ ಈಗ ಖಾನ್ ಪ್ರೇಮಿಗಳ ಕನಸು ನನಸಾಗಲೂ ಬಹುದು , ಏಕೆಂದರೆ ಕಿಂಗ್ ಖಾನ್, ಫರ್ಫೆಕ್ಷನಿಸ್ಟ್ ಖಾನ್‌ರೊಂದಿಗೆ ನಟಿಸುವಾಸೆಯನ್ನು ವ್ಯಕ್ತಪಡಿಸಿದ್ದಾರೆ. ಶಾರುಖ್, ತಾವು ಅಮೀರ್‌ರೊಂದಿಗೆ ಚಿತ್ರವೊಂದರಲ್ಲಿ ನಟಿಸಲು ಇಷ್ಟಪಡುವುದಾಗಿ ಹೇಳಿಕೆ ನೀಡಿದ್ದರು.
ಶಾರುಖ್ ಮತ್ತು ಅಮೀರ್ ಕ್ಯಾಮರಾದ ಮುಂದೆ ಪರಸ್ಪರರೆಡೆಗೆ ಆಗಾಧ ಗೌರವ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ ಆದರೆ ಒಳಗೊಳಗೆ ಅವರ ನಡುವೆ ಕಠಿಣ ಪೈಪೋಟಿ ನಡೆದೇ ಇತ್ತು. ಇದಕ್ಕೊಂದು ಉದಾಹರಣೆ ಹೇಳುವುದಾದರೆ, ನೋಕಿಯಾ ಮತ್ತು ಡಿಶ್- ಟಿವಿಗೆ ಶಾರುಖ್ ಪ್ರಚಾರಕರ್ತರಾಗಿದ್ದರೆ, ಇವುಗಳ ಪ್ರತಿಸ್ಪರ್ಧಿಗಳಾದ ಸಾಮ್‌ಸಂಗ್ ಮತ್ತು ಟಾಟಾ ಸ್ಕೈ ಶಾರುಖ್ ಪ್ರಭಾವವನ್ನು ಎದುರಿಸಲು ಅಮೀರ್‌ರನ್ನು ತಮ್ಮ ಪ್ರಚಾರಕರ್ತರನ್ನಾಗಿಸಿವೆ.
ಇಂತಹುದರಲ್ಲಿ ಅಮೀರ್ ಮತ್ತು ಶಾರುಖ್ ಒಟ್ಟಾಗಿ ನಟಿಸಿದರೆ ಅಭಿಮಾನಿ ಬಳದಕ್ಕೆ ರಸದೌತಣ ಸಿಗುವುದಂತೂ ಖಚಿತ.