Article Bollywood Gossips %e0%b2%85%e0%b2%ae%e0%b3%80%e0%b2%b0%e0%b3%8d %e0%b2%85%e0%b2%95%e0%b3%8d%e0%b2%b7%e0%b2%af%e0%b3%8d %e0%b2%b6%e0%b2%be%e0%b2%b0%e0%b3%81%e0%b2%96%e0%b3%8d %e0%b2%b9%e0%b3%8a%e0%b2%97%e0%b2%b3%e0%b3%81%e0%b2%b5 %e0%b2%b8%e0%b3%81%e0%b2%a4%e0%b3%8d%e0%b2%a4%e0%b3%81 108121900047_1.htm

Daily Horoscope

Select Your Language

Notifications

webdunia
webdunia
webdunia
webdunia

ಅಮೀರ್,ಅಕ್ಷಯ್,ಶಾರುಖ್: ಹೊಗಳುವ ಸುತ್ತು

ಅಮೀರ್ ಖಾನ್
WD

ಅಮೀರ್ ಖಾನ್ ಸ್ವತಃ ಸೂಪರ್ ಸ್ಟಾರ್ ಆದರೆ ಅವರು ತಮ್ಮ ಹೊರತಾಗಿ ಅಕ್ಷಯ್ ಕುಮಾರ್‌ರನ್ನೂ ಸೂಪರ್‌ಸ್ಟಾರ್ ಎನ್ನುತ್ತಾರೆ. ಅಮೀರ್‌ರಲ್ಲಿ ನಿಮ್ಮನ್ನು ಬಿಟ್ಟರೆ ಬಾಲಿವುಡ್‌ನಲ್ಲಿ ನಿಮಗೆ ಕಂಡುಬರುವ ಬೇರೆ ಸೂಪರ್ ಸ್ಟಾರ್ ಯಾರು ಎಂದು ಕೇಳಿದಾಗ ಅಮೀರ್ ಹೇಳಿದ ಹೆಸರು ಅಕ್ಷಯ್ ಕುಮಾರ್.

ಫರ್ಫೆಕ್ಷನಿಸ್ಟ್ ಖಾನ್ ಹೇಳುವ ಪ್ರತಿ ಮಾತಿನ ಹಿಂದೆಯೂ ಒಂದು ಬಲವಾದ ಕಾರಣವಿರುತ್ತದೆ. ಅಮೀರ್ ಹೇಳುವಂತೆ ಅಕ್ಷಯ್‌ಗೆ ತಮ್ಮ ಹೆಸರಿನ ಮೇಲೆಯೇ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವ ಶಕ್ತಿಯಿದೆ. ಅವರಿಗೆ ದೊಡ್ಡ ಬ್ಯಾನರ್ ಅಥವಾ ನಿರ್ದೇಶಕರ ಅಗತ್ಯವಿಲ್ಲ, ಜನ ಪೋಸ್ಟರ್‌ಗಳಲ್ಲಿ ಅವರ ಹೆಸರು ನೋಡಿಯೇ ಚಿತ್ರ ನೋಡಲು ಧಾವಿಸುತ್ತಾರೆ.

ಈ ಬಾರಿ ಬಾಲಿವುಡ್‌ನಲ್ಲಿ ತೆಗೆಳುವ ಟ್ರೆಂಡ್‌ಗೆ ಬ್ರೇಕ್ ನೀಡಿ ಹೊಗಳುವ ಟ್ರೆಂಡ್ ಶುರುವಾಗಿರುವಂತಿದೆ. ಇತ್ತೀಚಿಗಷ್ಟೇ ಅಕ್ಷಯ್, ಶಾರುಖ್ ಖಾನ್‌‌ರನ್ನು ಸಿಕ್ಕಾಪಟ್ಟೆ ಹೊಗಳಿದ್ದರು, ಈಗ ಅಮೀರ್, ಅಕ್ಷಯ್‌ರನ್ನು ಹೊಗಳಿ ಅಟ್ಟಕ್ಕೇರಿಸುತ್ತಿದ್ದಾರೆ.

ಇತ್ತೀಚಿಗೆ ಅಮೀರ್ ಮತ್ತು ಶಾರುಖ್ ನಡುವೆ ಜಟಾಪಟಿಯ ಸುದ್ದಿ ಬಂದಿತ್ತು. ಅಮೀರ್ ಕೆಲ ಚಿತ್ರ ಮಂದಿರಗಳ ಸಿಬ್ಬಂದಿಗಳ ಕೇಶವಿನ್ಯಾಸವನ್ನು ಗಜನಿ ಶೈಲಿಗೆ ಮಾಡಿದ್ದಾರೆ, ಇದರಿಂದ ರಬ್ನೆ ಬನಾ ದಿ ಜೋಡಿ ನೋಡಲು ಬರುವ ಪ್ರೇಕ್ಷಕರಲ್ಲಿ ಗಜನಿಗೆ ಪ್ರಚಾರ ಸಿಕ್ಕಾಂತಗುತ್ತದೆ ಎಂಬುದು ಅಮೀರ್ ಐಡಿಯಾ.

ಈ ಬಗ್ಗೆ ಶಾರುಖ್, "ಅಮೀರ್ ಗಜನಿ ಪ್ರಚಾರಕ್ಕಾಗಿ ನನ್ನ ಚಿತ್ರವನ್ನು ಬಳಸಿಕೊಳ್ಳುತ್ತಿದ್ದಾರೆ, ಆದರೆ ನನಗೆ ಹೀಗೆಲ್ಲಾ ಮಾಡುವ ಅವಶ್ಯಕತೆಯಿಲ್ಲ. ನಾನು ಸ್ವತಃ ಎಲ್ಲದಕ್ಕಿಂತ ದೊಡ್ಡ ಬ್ರಾಂಡ್" ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅಮೀರ್, "ಅವರು(ಶಾರುಖ್)20 ವರ್ಷಗಳಿಂದ ತಮ್ಮ ಬಗ್ಗೆಯೇ ಹೇಳಿಕೊಳ್ಳುತ್ತಾ ಬಂದಿದ್ದಾರೆ ಆದ್ದರಿಂದ ಇದರಲ್ಲೇನು ಹೊಸದಿಲ್ಲ" ಎಂದಿದ್ದರು. ಇವೆಲ್ಲಾ ಅಮೀರ್ ಮತ್ತು ಶಾರುಖ್ ನಡುವಿನ ಸಂಬಂಧ ಉತ್ತಮವಾಗಿಲ್ಲ ಎಂದು ಸೂಚಿಸುತ್ತಿತ್ತು.

ಆದರೆ, ಮೆಹಬೂಬ್ ಸ್ಟೂಡಿಯೊದಲ್ಲಿ ಅವರಿಬ್ಬರ ಭೇಟಿಯಾಯಿತು. ಇಬ್ಬರೂ ಶೂಟಿಂಗ್ ಪ್ರಯುಕ್ತ ಅಲ್ಲಿ ಹಾಜರಿದ್ದರು. ಅವರಿಬ್ಬರ ನಡುವೆ ಬಹಳ ಕಾಲ ಚಿತ್ರಗಳ ಕುರಿತು ಮಾತುಕತೆ ಸಾಗಿತ್ತು. ಆಗ ಅವರನ್ನು ನೋಡಿದರೆ ಅವರ ನಡುವೆ ಯಾವುದೇ ರೀತಿಯ ಅಸಮಧಾನಗಳು ಇರುವಂತೆ ಕಾಣಿಸುತ್ತಲೇ ಇರಲಿಲ್ಲ.

Share this Story:

Follow Webdunia kannada