ಅಮಿತ್ ರಾಯ್ ಚಿತ್ರದಲ್ಲಿ ತಾಪಸಿಗೆ ಅವಕಾಶ
Publish Date: Wed, 07 Aug 2013 (11:05 IST)
Updated Date: Wed, 07 Aug 2013 (11:04 IST)
ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸದ್ಯ ಮಿಂಚುತ್ತಿರುವ ನಟಿಯರಲ್ಲಿ ತಾಪಸಿಯೂ ಒಬ್ಬರು. ಒಂದಾದ ಬಳಿಕ ಒಂದರಂತೆ ಅತ್ಯುತ್ತಮ ಅವಕಾಶಗಳೇ ಇದನ್ನು ಪ್ರೂವ್ ಮಾಡುತ್ತಿವೆ. ಈಗ ಹಿಂದಿ ಚಿತ್ರರಂಗದಿಂದ ಆಕೆಗೆ ಬುಲಾವ್ ಬಂದಿದೆ. ಈಕೆ ನಟಿಸಿದ ಮೊದಲ ಹಿಂದಿ ಚಿತ್ರ ಅದೇಕೋ ಹೆಸರು ಮಾಡಲಿಲ್ಲ. ಆದರೆ ಈಗ ವಿಕ್ಕಿ ಡೋನರ್ ನಿರ್ಮಾಪಕ ಅಮಿತ್ ರಾಯ್ ಚಿತ್ರವೊಂದನ್ನು ತಯಾರಿಸುತ್ತಿದ್ದಾರೆ. ಆ ಚಿತ್ರಕ್ಕೆ ತಾಪಸಿಯೇ ಹೆಚ್ಚು ಸೂಕ್ತವಾದ ನಟಿ ಎಂಬುದು ಅವರ ಅಭಿಮತ. ಹೀಗಾಗಿ ಅವರನ್ನು ಭೇಟಿಯಾಗಿ ಕಥೆ ಹೇಳಿದ್ದಾರೆ. ಅದಕ್ಕೆ ಅವರೂ ಒಪ್ಪಿಕೊಂಡಿದ್ದಾರೆ. ನನಗೆ ಕಥೆ ಸಖತ್ ಇಷ್ಟವಾಗಿದೆ. ಅದಕ್ಕಿಂತ ಹೆಚ್ಚಾಗಿ ನನ್ನ ಪಾತ್ರ ಮಜವಾಗಿದೆ. ನಾನು ಈವರೆಗೆ ತಮಿಳು ಇಲ್ಲವೇ ತೆಲುಗಿನಲ್ಲಿ ಈ ರೀತಿಯ ಪಾತ್ರವನ್ನು ಮಾಡಿಲ್ಲ ಎಂದಿದ್ದಾರೆ.ಚಿತ್ರವನ್ನು ಅವರು ಒಪ್ಪಿಕೊಳ್ಳುವ ಸಾಧ್ಯತೆ ಇವೆ ಎನ್ನುತ್ತವೆ ಮೂಲಗಳು. ಇದಿನ್ನೂ ಪಕ್ಕಾ ಆಗಿಲ್ಲ. ಈಗಲೇ ಎರಡು ಚಿತ್ರಗಳನ್ನು ಕೈಯಲ್ಲಿ ಹಿಡಿದಿರುವ ತಾಪಸಿ ಅವೆರಡು ಮುಗಿದ ಬಳಿಕವೇ ಈ ಆಹ್ವಾನವನ್ನು ಒಪ್ಪಿಕೊಳ್ಳಬೇಕಿದೆ. ಡೇಟ್ಸ್ ಹೊಂದಿಸಲು ಒದ್ದಾಡುತ್ತಾ ಇರುವುದಾಗಿ ತಾಪಸಿ ತಿಳಿಸಿದ್ದಾರೆ. ವಿಕ್ಕಿ ಡೋನರ್ ನಿರ್ಮಿಸಿರುವ ನಿರ್ದೇಶಕರಿಗೆ ಇದನ್ನೂ ವಿಭಿನ್ನವಾಗಿ ಮಾಡಬೇಕೆಂಬ ಬಯಕೆ. ಅದಕ್ಕೆ ರಾಷ್ಟ್ರಪ್ರಶಸ್ತಿ ಬಂದಿತ್ತು. ಹೀಗಾಗಿ ನನ್ನ ಮೇಲೆ ಜವಾಬ್ದಾರಿಯೂ ಹೆಚ್ಚಿದೆ. ಅದನ್ನು ಮಾಡಲೆಂದೇ ಚಿತ್ರದ ಕಥೆ ಬರೆಯಲು ಒಂದು ವರ್ಷ ತೆಗೆದುಕೊಂಡೆ ಎಂದಿದ್ದಾರೆ ಅಮಿತ್