ಅಮಿತಾಬ್-ರೇಖಾ ಒಂದೇ ವಿಮಾನದಲ್ಲಿ ಪ್ರಯಾಣ?
Publish Date: Wed, 09 Oct 2013 (13:13 IST)
Updated Date: Wed, 09 Oct 2013 (13:12 IST)
ಮೋದಿ ಪರ ಬಿಗ್‌ಬಿ ಬ್ಯಾಟಿಂಗ್ ನಡೆಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದ ಕೆಲವೇ ದಿನಗಳಲ್ಲಿ ಅಮಿತಾಬ್ ಹೆಸರು ಮತ್ತೆ ಗಾಸಿಪ್ ಕಾಲಂಗಳಲ್ಲಿ ಕಾಣಿಸಿಕೊಂಡಿದೆ. ಈ ಎಲ್ಲಾ ಸುದ್ದಿಗಳು ತನ್ನಿಂತಾನೇ ಹುಟ್ಟಿಕೊಳ್ಳುತ್ತವೆಯೋ ಅಥವಾ ಅವರನ್ನು ಟಾರ್ಗೆಟ್ ಆಗಿಟ್ಟುಕೊಂಡು ಮತ್ತಾರಾದರೂ ಸೃಷ್ಟಿಸುತ್ತಿದ್ದಾರೋ ಎಂಬುದು ಇನ್ನೂ ಉತ್ತರ ಸಿಗದ ಪ್ರಶ್ನೆಯಾಗಿದೆ. ಈ ಬಾರಿ ಅವರ ಚಿತ್ರವೊಂದು ಇಂಟರ್ನೆಟ್‌ಲ್ಲಿ ಹರಿದಾಡುತ್ತಿದೆ. ಇದನ್ನು ನೋಡಿದ ಮಂದಿ ಹೀಗೂ ಆಗಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರಂತೆ.ಈ ಚಿತ್ರ ನೋಡಿದ ಬಳಿಕ ನಿಮಗೂ ಹಾಗೆಯೇ ಅನ್ನಿಸಿರಬಹುದು. ಅಮಿತಾಬ್ ಬಚ್ಚನ್ ಜೊತೆ ಕೃಷ್ಣಸುಂದರಿ ರೇಖಾ ಒಂದೇ ವಿಮಾನದಲ್ಲಿ ಪ್ರಯಾಣಿಸಿದ್ದಾರೆ ಎಂಬ ಭಾವನೆ ನಿಮಗೆ ಬರಬಹುದು. ಗಾಸಿಪ್ ಪುಟಗಳಲ್ಲಿ ಅಗ್ರಸ್ಥಾನ ಪಡೆದಿರುವ ಈ ಚಿತ್ರ ಇಂಟರ್‌ನೆಟ್‌ಲ್ಲಿ ವೇಗವಾಗಿ ಹರಿದಾಡುತ್ತಿದೆ. ಅಮಿತಾಬ್ ಬಚ್ಚನ್ ಹಾಗೂ ರೇಖಾ ಒಂದೇ ವಿಮಾನದಲ್ಲಿ ಪ್ರಯಾಣಿಸಿದ್ದು ಅವರು ಮುಂಬದಿ ಹಾಗೂ ಹಿಂದಿನ ಸೀಟಿನಲ್ಲಿ ಕುಳಿತಿದ್ದರೆ ಹಿಂಬದಿಯಲ್ಲಿ ರೇಖಾ ನಿದ್ದೆ ಮಾಡುವಂತಿದೆ. ಮೊದಲ ನೋಟಕ್ಕೆ ಇದು ನಿಜ ಎನಿಸಿದರೂ ಹಿಂದಿನ ಚಿತ್ರದಲ್ಲಿ ರೇಖಾ ಇರುವುದು ಸ್ಪಷ್ಟವಾಗುತ್ತಿಲ್ಲ. 80 ರ ದಶಕದಲ್ಲಿ ಅವರಿಬ್ಬರ ಪ್ರೇಮಕಥೆಯ ಬಗ್ಗೆ ಕೇಳದೆ ಇರುವವರು ಇರಲಿಕ್ಕಿಲ್ಲ. ಇವರಿಬ್ಬರ ಆನ್‌ಸ್ಕ್ರೀನ್-ಆಫ್ ಸ್ಕ್ರೀನ್ ಕೆಮೆಸ್ಟ್ರಿ ಬಗ್ಗೆ ಬಹಿರಂಗವಾಗಿ ಚರ್ಚಿಸುವ ಅಗತ್ಯವೂ ಇಲ್ಲ. ಅವರ ಈ ಚಿತ್ರ ಅವರಿಬ್ಬರು ಇನ್ನು ಮುಂದೆ ಒಂದೇ ಚಿತ್ರದಲ್ಲಿ ಜೊತೆಯಾಗಿ ನಟಿಸಲು ಸಾಧ್ಯವೇ ಇಲ್ಲವೇನೋ ಎಂಬ ಸಂಶಯ ಹುಟ್ಟಿಸುತ್ತದೆ.