ಬಾಲಿವುಡ್ ಚಿತ್ರರಂಗದ ಸೂಪರ್‌ಸ್ಟಾರ್, ಅಭಿಮಾನಿಗಳಿಗೆ ಅರ್ಥಾತ್ ದೇವರಾದ ಅಮಿತಾಬ್ ಬಚ್ಚನ್ ತಮ್ಮ ಬರಿಯ ಅಸ್ತಿತ್ವದಿಂದಲೇ ಜನರನ್ನು ಮಂತ್ರಮುಗ್ಧಗೊಳಿಸಬಲ್ಲರು, ಮೋಡಿಉಂಟುಮಾಡಬಲ್ಲರು.
ಗುರುವಾರ ಅವರ 65ನೇ ವಯಸ್ಸಿನ ಹುಟ್ಟುಹಬ್ಬ ಆಚರಣೆಯಾಯಿತು. 20 ವರ್ಷ ವಯಸ್ಸಿನಿಂದ ಹಿಡಿದು 60 ವಯಸ್ಸು ದಾಟಿದ ಬಳಿಕವೂ ಅವರ ನಟನಾ ಕೌಶಲ್ಯ ಕುಂದಿಲ್ಲ. ಅನೇಕ ಮಂದಿಗೆ ಅವರು ಸ್ಫೂರ್ತಿಯಾಗಿದ್ದಾರೆ. ಆದರೆ ಅಮಿತಾಬ್‌ಗೆ ಆದರ್ಶ ಪುರುಷ ಯಾರು? ಅವರ ಸ್ಫೂರ್ತಿಯೇ? ಅಮಿತಾಬ್ ನೈನಿತಾಲ್‌ನಲ್ಲಿ ಶೆರ್‌ವುಡ್ ಶಾಲೆಯಲ್ಲಿ ಓದಿದರು.
ತಾವು ಏನೇ ಮಾಡಲಿ ಎಲ್ಲ ಹಂತಗಳಲ್ಲಿ ತಂದೆಯು ಆಸರೆಯಾಗಿರುತ್ತಾರೆಂದು ಅಮಿತಾಬ್ ನಂಬಿಕೆಯಾಗಿತ್ತು. ಸದಾ ಮಂದಹಾಸದ ಮೂಲಕ ಅನೇಕ ಜನರ ಹೃದಯ ಗೆದ್ದ ಅಮಿತಾಬ್ ಹೃದಯದ ಮೂಲೆಯಲ್ಲಿ ನಟನೆಯು ಸ್ಥಾನವನ್ನು ಆಕ್ರಮಿಸಿತ್ತು. ನಾಟಕದಲ್ಲಿ ಅವರ ಉತ್ತಮ ಅಭಿನಯಕ್ಕೆ ಉತ್ತಮ ನಟ ಪ್ರಶಸ್ತಿಯನ್ನು ತಂದುಕೊಟ್ಟಿತು.
ಅದನ್ನು ಈಗಲೂ ಅವರು ಜೋಪಾನವಾಗಿ ಇಟ್ಟಿದ್ದಾರೆ. ತಾವು ಆಸಕ್ತಿಯಿಂದ ಕಾಯುತ್ತಿದ್ದ ಒಂದು ಪಾತ್ರದಲ್ಲಿ ಪರಿಪೂರ್ಣತೆ ಸಾಧಿಸುವವರೆಗೆ ಅಭ್ಯಾಸ ಮಾಡಿದ್ದರು. ಅಗಾಥಾ ಕ್ರಿಸ್ಟಿ ನಾಟಕವೊಂದರಲ್ಲಿ ನ್ಯಾಯಾಧೀಶರ ಪಾತ್ರದಲ್ಲಿ ಅವರು ಅಭಿನಯಿಸಬೇಕಿತ್ತು.
ನಾಟಕದ ದಿನವೇ ಅವರು ಅಸ್ವಸ್ಥರಾಗಿ ದಡಾರ ಕಾಣಿಸಿಕೊಂಡಿತು. ಅವರನ್ನು ಕೋಣೆಯಲ್ಲಿಯೇ ಇರಿಸಲಾಯಿತು.ನಾಟಕದಲ್ಲಿ ಅಭಿನಯಿಸುವುದು ಕನಸಿನ ಮಾತಾಯಿತು. ತೀವ್ರ ನಿರಾಶರಾದ ಅವರು ಆಸ್ಪತ್ರೆಯ ಕೋಣೆಯಲ್ಲಿ ಏಕಾಂತದಲ್ಲಿ ಕುಳಿತಿದ್ದರು.
ನಾಟಕ ಇನ್ನೇನು ಆರಂಭವಾಗಬೇಕು. ಪ್ರತಿಯೊಂದು ನಿಮಿಷ ಕಳೆದಾಗಲೆಲ್ಲ ಅವರ ತಳಮಳ ಹೆಚ್ಚಿತು. ಇದ್ದಕ್ಕಿದ್ದಂತೆ ಬಾಗಿಲು ತೆಗೆದುಕೊಂಡಿತು ಮತ್ತು ಅವರ ತಂದೆ ಒಳ ಪ್ರವೇಶಿಸಿದರು.
ಅವರ ತಂದೆ ಹೇಳಿದ ಒಂದು ಮಾತಿನಿಂದ ಅವರು ಜೀವನದ ಅಮೂಲ್ಯ ಪಾಠವನ್ನು ಕಲಿತರು. ಜೀವನ ನೀವು ಎಣಿಸಿದ ದಾರಿಯಲ್ಲೇ ಹೋದರೆ ಒಳ್ಳೆಯದು. ಜೀವನ ನಮ್ಮ ನಿಯಂತ್ರಣದಲ್ಲಿ ಇಲ್ಲದಿರುವುದರಿಂದ ನಾವು ಎಣಿಸಿದ್ದು ಆಗದಿದ್ದರೆ ನಿರಾಶೆ ಬೇಡ. ಭಗವಂತನು ಜೀವನ ನಿಯಂತ್ರಿಸುತ್ತಾನೆ ಮತ್ತು ಯಾವುದೇ ವ್ಯಕ್ತಿಗೆ ಹಾನಿಯುಂಟು ಮಾಡುವುದಿಲ್ಲ ಎಂದು ತಂದೆ ಹೇಳಿದರು.
ಆ ಕ್ಷಣದಲ್ಲಿ ತಂದೆಯ ಮಾತುಗಳನ್ನು ಅವರು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಆದರೆ ಬಳಿಕ ಆ ಪದಗಳ ಅಗಾಧತೆ ಅವರಿಗೆ ಮನದಟ್ಟಾಯಿತು. ನಿಮಗೆ 20 ವರ್ಷಗಳಾಗಿದ್ದಾಗ ನೀವು ತಾರ್ಕಿಕ ಚಿಂತನೆ ಮಾಡುವುದಿಲ್ಲ. 30ರಲ್ಲಿ ತಾರ್ಕಿಕವಾಗಿ ಯೋಚಿಸುತ್ತೀರಿ.
40 ವರ್ಷ ವಯಸ್ಸಿನಲ್ಲಿ ಪಕ್ವವಾಗುತ್ತೀರಿ. 50ಕ್ಕೆ ಒಪ್ಪುತ್ತೀರಿ ಮತ್ತು 60ಕ್ಕೆ ಅನುಸರಿಸುತ್ತೀರಿ. ಈ ಆದರ್ಶ ಅಮಿತಾಬ್‌ರಲ್ಲಿ ಉಳಿಯಿತು. ಆ ಚಿಂತನೆಯನ್ನು ಅವರು ಈಗಲೂ ಅನುಸರಿಸುತ್ತಾರೆ ಮತ್ತು ಅದನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುತ್ತಾರೆ.