Publish Date: Mon, 08 Oct 2007 (16:56 IST)
Updated Date: Mon, 08 Oct 2007 (16:54 IST)
ಅಭಿಷೇಕ್ ಬಚ್ಚನ್ ಬಾಡಿ ಬಿಲ್ಡಿಂಗ್ ಯೋಜನೆ ಬಗ್ಗೆ ಕೇಳಿದಾಗ ಸ್ವತಃ ಅಭಿಷೇಕ್‌ಗಲ್ಲದೇ ಅವರ ನಿರ್ಮಾಪಕ ಶ್ರಿಸ್ತಿ ಬೆಹಲ್‌ಗೆ ಆಶ್ಚರ್ಯ ಮೂಡಿಸಿತಂತೆ. ಅಭಿಷೇಕ್ ದ್ರೋಣ ಚಿತ್ರದಲ್ಲಿ ತೆರೆದೆದೆಯಲ್ಲಿ ಅಭಿನಯಿಸುತ್ತಾರೆಂದು ಓದಿ ಶ್ರಿಸ್ತಿ ಅಭಿಷೇಕ್ ಅವರಿಗೆ ದೂರು ನೀಡಲು ಕರೆಸಿದರು.
" ನೀನು ದ್ರೋಣ ಚಿತ್ರಕ್ಕೆ ಸ್ನಾಯುಗಳನ್ನು ಬಲಪಡಿಸಿ, ಎದೆಯನ್ನು ರೋಮರಹಿತ ಮಾಡಿ ತೆರೆದೆದೆಯಲ್ಲಿ ನಟಿಸುವುದು ಸರಿಯಷ್ಟೇ. ಆದರೆ ಸ್ವತಃ ನಿರ್ಮಾಪಕರಿಗೆ ಈ ವಿಷಯ ತಿಳಿಸುವುದು ಬೇಡವೇ ಎಂದು ಪ್ರಶ್ನಿಸಿದರಂತೆ"
ವಾಸ್ತವಸಂಗತಿಯೇನೆಂದರೆ ಸ್ವತಃ ಅಭಿಷೇಕ್‌ಗೇ ತಾನು ತೆರೆದೆದೆಯಲ್ಲಿ ನಟಿಸುವುದು ತಿಳಿದರಲಿಲ್ಲವಂತೆ. ಆದರೆ ಅವರ ತಂದೆ ಅಮಿತಾಬ್ ಹಾಸ್ಯಮಿಶ್ರಿತ ಧ್ವನಿಯಲ್ಲಿ " ಇಂದಿನ ದಿನಗಳಲ್ಲಿ ನಾವು ಜೀವನದಲ್ಲಿ ಏನು ಮಾಡುತ್ತೇವೆಂಬುದನ್ನು ಸುದ್ದಿಪತ್ರಿಕೆ ಓದುವ ಮೂಲಕ ಮತ್ತು ಟಿವಿ ವೀಕ್ಷಿಸುವ ಮೂಲಕ ತಿಳಿದುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದರು.
ಅಭಿಷೇಕ್‌ಗೆ ದ್ರೋಣದಲ್ಲಾಗಲೀ ಅಥವಾ ಯಾವುದೇ ಚಿತ್ರದಲ್ಲಿ ತೆರೆದೆದೆಯಲ್ಲಿ ನಟಿಸುವ ದೃಶ್ಯಗಳಿಲ್ಲ. ಕ್ಯಾಮೆರಾದೆದುರು ಬಟ್ಟೆ ಬಿಚ್ಚಲು ಅಥವಾ ಪ್ರೇಮ ತೋರಿಸುವುದೆಂದರೆ ಅಭಿಷೇಕ್‌ಗೆ ನಾಚಿಕೆಯಂತೆ.
ಅದಕ್ಕಾಗೇ ಅವರು ಮೀರಾ ನಾಯರ್ ಅವರ ಚಿತ್ರದ ಬಟ್ಟೆಬಿಚ್ಚುವ ಮತ್ತು ಚುಂಬನದ ದೃಶ್ಯದಲ್ಲಿ ನಟಿಸಲು ನಿರಾಕರಿಸಿದರಂತೆ. ಅಭಿಷೇಕ್‌ಗೆ ನಷ್ಟವಾಗಿದ್ದು ಕಾಲ್ ಪೆನ್‌ಗೆ ಲಾಭಸಿಕ್ಕಿತು.