ಅಭಿಷೇಕನ ಜೊತೆಗಿದ್ದಾಳೆ ಹೆಂಡತಿ ..
Publish Date: Fri, 01 Nov 2013 (12:58 IST)
Updated Date: Fri, 01 Nov 2013 (12:55 IST)
ಹೆಂಡತಿಯೊಬ್ಬಳು ಜೊತೆಯೊಳಗಿದ್ದರೆ ನನಗದೆ ಕೋಟಿ ರೂಪಾಯಿ ಅನ್ನುವ ಮಾತು ಅಕ್ಷರಶಃ ಅಭಿಷೇಕ್ ಬಚ್ಚನ್ ಗೆ ಹೊಂದಿಕೆ ಆಗುತ್ತಿದೆ. ಕಾರಣ ಇಷ್ಟೇ ಅಂತಹ ಸೂಪರ್ ಸ್ಟಾರ್ಗಳ ಮಗನಾಗಿ ಜನಿಸಿದರೂ ಸಹ ಅಭಿ ಅದೃಷ್ಟ ಹೇಳಿಕೊಳ್ಳುವಂತೆ ಇಲ್ಲ. ಆರಕ್ಕೂ ಮೂರಕ್ಕೂ ಏರದ ನಟ ಆತ. ಬೈ ಲಕ್ ಎಲ್ಲರ ಜೊತೆ ಲವ್ ಮಾಡಿ ಬೇಜಾರಾದ ವಿಶ್ವಸುಂದರಿ ಐಶ್ವರ್ಯ ರೈ ಕಡೆಗೆ ಅಭಿಷೇಕನ ಮಡದಿ ಆದಳು.ಅದಕ್ಕೂ ಮೇಲಿನ ವಾಕ್ಯಕ್ಕೂ ಏನು ಸಂಬಂಧ ಅಂತೀರಾ ಇದೆ. ಅಭಿಷೇಕ್ ಗೆ ಈಗ ಅದೃಷ್ಟ ಖುಲಾಯಿಸಿದೆ. ಹೌದ್ರಿ ಮಾರಾರೆ ! ಮದುವೆ ಆಗಿ ಗರ್ಭಿಣಿ ಆದ ಐಶ್ ಗೆ ಮಾರ್ಕೆಟ್ ಇಲ್ಲದೆ ಹೋಗಿತ್ತು. ಎಷ್ಟೋ ಆಡ್ ಕಂಪನಿಗಳು ಆಕೆ ಕಾ೦ಟ್ರಾಕ್ಟ್ ರದ್ದು ಮಾಡಿತ್ತು. ಆಕೆ ಪ್ಲೇಸ್ ಕರೀನಾ ,ಕತ್ರಿನಾ , ಡಿಪ್ಪಿ ಪಾಲಾಗಿತ್ತು. ಹಾಗಂತ ಆಕೆಗೆ ತೊಂದ್ರೆ ಆಗಲಿಲ್ಲ. ಆದರೆ ಸದ್ಯದ ಸುದ್ದಿ ಏನಂದರೆ ಆಕೆಯನ್ನು ಹುಡುಕಿಕೊಂಡು ಒಂದು ಆಡ್ ಕಂಪನಿ ಬಂದಿತ್ತು. ಆಗ ನಮ್ಮ ಐಶ್ ಹೇಳಿದ್ದು ನೋಡ್ರಪ್ಪ ನಮಗೆ 30 ಕೋಟಿ ಕೊಡಿ ಸಾಕು ನಾನು ಮತ್ತು ನನ್ನ ಹಬ್ಬಿ ಇಬ್ರು ಒಟ್ಟಿಗೆ ನಟಿಸ್ತೀವಿ ನಿಮ್ಮ ಪ್ರಾಡಕ್ಟ್ ಆಡ್ ನಲ್ಲಿ ಅಂದಳಂತೆ. ಛೆ ಈ ಓಲ್ಡ್ ಮಾಡೆಲ್ ಗೆ ಇಷ್ಟು ಪ್ರೈಸಾ ಎಂದು ಆ ಕಂಪನಿ ಅವರು ಹೇಳದೆ ಓಕೆ ಅಂದಿದ್ದಾರಂತೆ.. ಹೆಂಡತಿಯೊಬ್ಬಳು ಜೊತೆಯೊಳಗಿದ್ದರೆ!