Publish Date: Mon, 29 Sep 2008 (18:39 IST)
Updated Date: Mon, 29 Sep 2008 (18:39 IST)
ದುಡಿಮೆಯ ವಿಷಯಕ್ಕೆ ಬಂದಾಗ ಬಚ್ಚನ್‌ರ 'ಬಹು' ಐಶ್ವರ್ಯ ರೈ ಎಷ್ಟರ ಮಟ್ಟಿಗೆ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ ಮತ್ತು ಪರಿಶ್ರಮ ಪಡುತ್ತಾರೆ ಎಂಬುದು ಎಲ್ಲರಿಗೂ ತಿಳಿದ ವಿಷಯ.
ಅವರೊಮ್ಮೆ ಕೆಲಸಕ್ಕಿಳಿದರೆ ಅವರು ಅದರಲ್ಲಿ ಪೂರ್ಣವಾಗಿ ಮುಳುಗಿ ಬಿಡುತ್ತಾರೆ. ಆದರೆ ಪ್ರಸ್ತುತ ದುಡಿಮೆಯಿಂದ ಅವರ ವ್ಯಸ್ತತೆಯನ್ನು ಕೆಡಿಸುತ್ತಿರುವವರು ಯಾರೆಂದು ಊಹಿಸಬಲ್ಲಿರಾ ?. ಅದು ಮತ್ತಾರು ಅಲ್ಲ ಐಶ್‌ರ ಪ್ರೀತಿಯ ಪತಿರಾಯ ಅಭಿಷೇಕ್ ಬಚ್ಚನ್.
ರೊಬೋಟ್(ಎಂಧಿರಾನ್) ಚಿತ್ರದಲ್ಲಿ ದಕ್ಷಿಣದ ಸೂಪರ್‌ಸ್ಟಾರ್ ರಜನಿಕಾಂತ್‌ರೊಂದಿಗೆ ನಟಿಸುತ್ತಿರುವ ಐಶ್ ಬ್ರೆಜಿಲ್‌ನಲ್ಲಿ ಚಿತ್ರೀಕರಣ ನಿರತರಾಗಿದ್ದಾರೆ. ಅವರು ಅಭಿಯ ದ್ರೋಣ ಚಿತ್ರದ ಪ್ರೀಮಿಯರನಲ್ಲಿ ಪತಿಯೊಡನಿರಲು ಬಯಸಿ, ವಿದೇಶದಲ್ಲಿನ ಚಿತ್ರೀಕರಣವನ್ನು ಬೇಗನೆ ಮುಗಿಸಲು ಅವಸರಿಸುತ್ತಿದ್ದಾರಂತೆ. ಸೆಪ್ಟಂಬರ್ 29ರಂದು ನಿಗದಿತ ವೇಳೆಗಿಂತ ಮೊದಲು ಐಶ್ ವಿದೇಶದಿಂದ ಭಾರತಕ್ಕೆ ಹೊರಟು ಬರಲಿದ್ದಾರೆ.
ಈ ಮೊದಲು ಅದರ್ಶ ಪತ್ನಿ ಐಶ್, ಚಿತ್ರೀಕರಣದಿಂದ ವಿರಾಮ ಪಡೆದು ಮತ್ತೆ ಬ್ರೆಜಿಲ್‌ಗೆ ತೆರಳುವ ಯೋಚನೆಯಿತ್ತು ಆದರೆ ಇದು ನಿರ್ಮಾಪಕರ ಚಿತ್ರೀಕರಣದ ವೇಳಾಪಟ್ಟಿಯನ್ನು ತೀವ್ರವಾಗಿ ತೊಂದರೆಗೊಳಪಡಿಸುವುದು ಎಂದರಿತ ಅವರು ಉತ್ತಮ ವೃತ್ತಿನಿರತೆಯಂತೆ ಸಮಯಕ್ಕೆ ಮೊದಲೇ ತಮ್ಮ ಕೆಲಸ ಮುಗಿಸಿಕೊಡಲು ನಿರ್ಧರಿಸಿದ್ದಾರೆ.
ನಾವು ಕರೆಯುವ ಆದರ್ಶ ನಾರಿ ಎಂದರೆ ಹೀಗಿರಬೇಕು ಅಲ್ಲವೇ ?