ಪಾಕಿಸ್ತಾನಿ ಮಾಡೆಲ್ , ಬಾಲಿವುಡ್ ಹಾಟ್ ಮತ್ತು ಸೆಕ್ಸಿ ನಟಿ ವೀಣಾ ಮಲಿಕ್ ತನ್ನ ಅಭಿಮಾನಿಗಳ ಹೃದಯ ಈಗಾಗಲೇ ಒಡೆದಿದ್ದಾಳೆ ತಾನು ಮದುವೆ ಆಗುವುದರ ಮುಖಾಂತರ. ಈಗ ಮತ್ತೊಮ್ಮೆ ಅವಳು ತನ್ನ ಅಭಿಮಾನಿಗಳಿಗೆ ನೋವನ್ನು ನೀಡುತ್ತಿದ್ದಾಳೆ. ಇನ್ನುಮುಂದೆ ತಾನು ಕಮರ್ಷಿಯಲ್ ಚಿತ್ರಲ್ಲಿ ನಟಿಸುವುದಿಲ್ಲ ಎಂದು ಗಾಯದ ಮೇಲೆ ಬರೆ ಎಳೆದಿದ್ದಾಳೆ. ದೇವರು, ಧಾರ್ಮಿಕ ಸಂಗತಿಗಳನ್ನು ಒಳಗೊಂಡ ಅಂಶಗಳಿರುವ ಚಿತ್ರದಲ್ಲಿ ಮಾತ್ರ ಇನ್ನು ನಟಿಸುವುದು ಎನ್ನುವ ಕಠೋರ ಸತ್ಯವನ್ನು ಸಹ ಆಕೆ ಎಲ್ಲರಿಗು ತಿಳಿಸಿದ್ದಾಳೆ.
ಮಕ್ಕಾದಲ್ಲಿ ಪ್ರಾರ್ಥನೆ ಮಾಡಿದ ಬಳಿಕ ಆಕೆ ಇಂತಹ ಹಾಟ್ ಬೀಟ್ ಹೆಚ್ಚು ಮಾಡುವ ಚಿತ್ರಗಳಲ್ಲಿ ನಟಿಸುವುದಿಲ್ಲ ಎನ್ನುವ ಅಂಶಕ್ಕೆ ಆದ್ಯತೆ ನೀಡಿದ್ದಾಳೆ. ಇನ್ನುಮುಂದೆ ಅಂತಹ ಚಿತ್ರಗಳಲ್ಲಿ ನಟಿಸ ಬಾರದು ಎನ್ನುವ ನಿರ್ಧಾರ ಕೈಗೊಂಡಿರುವುದಾಗಿ ಆಕೆ ತಿಳಿಸಿದ್ದಾರೆ. ಕಳೆದ ವರ್ಷ ಈಕೆ ದುಬೈನಲ್ಲಿ ನೆಲೆಸಿರುವ ವ್ಯಾಪಾರಿ ಅಸದ್ ಬಷೀರ್ ನ್ನು ಮದುವೆ ಆಗಿದ್ದ ಕಥೆ ಎಲ್ಲರಿಗು ತಿಳಿದೇ ಇದೆ. ಈಗಷ್ಟೇ ಆಕೆ ಪತಿ ಮತ್ತು ಕುಟುಂಬದವರೊಡನೆ ಮೆಕ್ಕಾಗೆ ಹೋಗಿ ಪೂಜೆ ಸಲ್ಲಿಸಿ ಬಂದಿದ್ದಾಳೆ. ಜೊತೆಗೆ ಆಕೆಯ ಅಭಿಮಾನಿಗಳಿಗೆ ಇಂತಹ ಖೇದಕರ ಸಂಗತಿಯನ್ನು ಹೇಳಿದ್ದಾಳೆ .