Article Bollywood Gossips %e0%b2%85%e0%b2%ab%e0%b3%8d%e0%b2%a4%e0%b2%be%e0%b2%ac%e0%b3%8d%e2%80%8c %e0%b2%ae%e0%b2%a6%e0%b3%81%e0%b2%b5%e0%b3%86%e0%b2%97%e0%b3%86 %e0%b2%af%e0%b2%be%e0%b2%b0%e0%b3%81 %e0%b2%b9%e0%b3%86%e0%b2%a3%e0%b3%8d%e0%b2%a3%e0%b3%81 %e0%b2%95%e0%b3%8a%e0%b2%a1%e0%b3%81%e0%b2%a4%e0%b3%8d%e0%b2%a4%e0%b2%be%e0%b2%b0%e0%b3%86 113082000005_1.htm

Daily Horoscope

Select Your Language

Notifications

webdunia
webdunia
webdunia
webdunia

ಅಫ್ತಾಬ್‌ ಮದುವೆಗೆ ಯಾರು ಹೆಣ್ಣು ಕೊಡುತ್ತಾರೆ?

ಅಫ್ತಾಬ್ ಶಿವದಾಸನಿ
PR
ಅಫ್ತಾಬ್ ಶಿವದಾಸನಿ ಹೆಸರು ಗೊತ್ತಿಲ್ಲದವರಿಲ್ಲ. ಕೆಲವೇ ಕೆಲವು ಚಿತ್ರಗಳಲ್ಲಿ ಅವರು ನಟಿಸಿದ್ದರೂ ಉತ್ತಮ ಹೆಸರನ್ನೇ ಗಳಿಸಿದ್ದಾರೆ. ರಾಮ್ಗೋಪಾಲ್ ವರ್ಮ ಅವರ ಚಿತ್ರದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈಗ ಅವರು ನಟಿಸಿರುವ ಗ್ರ್ಯಾಂಡ್ ಮಸ್ತಿ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಇದರಲ್ಲಿ ಮೂವರು ನಾಯಕರಿದ್ದಾರೆ. ವಿವೇಕ್ ಓಬೆರಾಯ್, ಅಫ್ತಾಬ್ ಹಾಗೂ ರಿತೇಶ್ ದೇಶ್ಮುಖ್. ಇದೊಂದು ಕಾಮಿಡಿ ಚಿತ್ರವಾಗಿದ್ದು ಡಬಲ್ ಮೀನಿಂಗ್ ಇರುವ ಕಥೆಯನ್ನು ಹೊಂದಿದೆಯಂತೆ. ಹೀಗಾಗಿ ಚಿತ್ರ ಹಿಟ್ ಭರವಸೆ ಇವರೆಲ್ಲರದು.

ಚಿತ್ರದಲ್ಲಿ ಅಫ್ತಾಬ್ನ ಪಾತ್ರ ನೋಡಿದವರು ಮತ್ತೆ ಆತನ ಬಳಿ ಸುಳಿಯಲು ಹೆದರುವ ಸಾಧ್ಯತೆ ಇದೆಯಂತೆ. ಅದರಲ್ಲೂ ಹುಡುಗಿಯರು ಅವನ ಸಮೀಪ ಬರಲು ಸಾಧ್ಯವೇ ಇಲ್ಲವಂತೆ. ಅಂತಹ ಲಂಪಟನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ವಿವೇಕ್ ಆ ಬಗ್ಗೆ ಹೇಳಿದ್ದಿಷ್ಟು. ಅಫ್ತಾಬ್ನ ಪಾತ್ರ ನೋಡಿದ ಬಳಿಕ ನನಗೆ ಅನಿಸಿದ್ದೆಂದರೆ ಆತನಿಗೆ ಹುಡುಗಿ ಕೊಡುವವರು ಈ ಚಿತ್ರವನ್ನು ನೋಡಿದರೆ ಖಂಡಿತಾ ಅವನಿಗೆ ಹುಡುಗಿ ಕೊಡಲು ಹಿಂದೇಟು ಹಾಕುವರು. ಅದರಲ್ಲೂ ಹುಡುಗಿಯ ತಂದೆ ತಾಯಂದಿರು ಈ ಪಾತ್ರ ನೋಡಿದರೆ ತಮ್ಮ ಮಗಳನ್ನು ಖಂಡಿತಾ ಇವನಿಗೆ ಕೊಡುವುದಿಲ್ಲ.

ಅವರೆಲ್ಲಾ ಏಕೆ, ನನಗೇ ಒಂದು ಹೆಣ್ಣುಮಗಳಿದ್ದಿದ್ದರೆ ಖಂಡಿತಾ ಅವನಿಗೆ ಕೊಡುತ್ತಿರಲಿಲ್ಲ ಎಂದಿದ್ದಾರೆ ವಿವೇಕ್. ಇದನ್ನು ಅವರು ಹೇಳಿದ್ದು ಕೂಡಾ ತಮಾಷೆಯಾಗಿಯೇ ಎಂಬುದು ನೆನಪಿರಲಿ. ಬಾಲಿವುಡ್ನಲ್ಲಿ ಇಂತಹ ಡಬಲ್ ಮೀನಿಂಗ್ ಚಿತ್ರಗಳು ಬರುವುದು ಹೊಸತೇನಲ್ಲ. ಆದರೆ ಅದು ಯಾವ ಮಟ್ಟಿನ ಹೆಸರು ಗಳಿಸುತ್ತದೆ ಎಂಬುದು ಸದ್ಯದ ಕುತೂಹಲ.

Share this Story:

Follow Webdunia kannada