ಅನುಷ್ಕಾ ಏಳು ನಿಮಿಷಗಳ ಮುತ್ತಿನ ಕಥೆ
Publish Date: Thu, 17 Oct 2013 (11:10 IST)
Updated Date: Thu, 17 Oct 2013 (10:30 IST)
ಬಾಲಿವುಡ್ ಚಂದ ಚೆಲುವೆ ಅನುಷ್ಕ ಶರ್ಮ ತೆಲುಗಿನಲ್ಲಿ ನಟಿಸುತ್ತಾಳ? ಈ ಪ್ರಶ್ನೆ ಈಗ ಟಾಲಿವುಡ್ ನಲ್ಲಿ ಹರಿದಾಡುತ್ತಿದೆ. ಈ ಪ್ರಶ್ನೆಗೆ ಹೌದು ಎಂದು ಹೇಳುತ್ತಿದ್ದಾರೆ ಇಲ್ಲಿನ ಸಿನಿಮಂದಿ. ಇತ್ತೀಚೆಗಷ್ಟೆ ಓರ್ವ ಪ್ರಸಿದ್ಧ ನಿರ್ಮಾಪಕ ಅನುಷ್ಕಾಳನ್ನು ಭೇಟಿ ಮಾಡಿದ ಸುದ್ದಿ ಈಗ ಎಲ್ಲರಿಗೂ ಗೊತ್ತಾಗಿದೆ.ಕತೆ ಮತ್ತು ಹಣಕಾಸಿನ ಸಂಗತಿ ಎಲ್ಲವೂ ಓಕೆ ಆಗಿ ಅನುಷ್ಕಾ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆಯಂತೆ. ಆದರೆ ಯಾವ ಸಿನಿಮ ಆ ನಿರ್ಮಾಪಕರು ಯಾರು ಹೀಗೆ ಅನೇಕ ಸಂಗತಿಗಳ ಬಗ್ಗೆ ತಿಳಿಯ ಬೇಕಾದರೆ ಇನ್ನು ಸ್ವಲ್ಪ ದಿನ ಕಾಯ ಬೇಕು. ರಬನೆ ಬನಾದೆ ಜೋಡಿ ಚಿತ್ರದಿಂದ ಬಾಲಿವುಡ್ನಲ್ಲಿ ಸಂಚಲನ ಮೂಡಿಸಿರುವ ಅನುಷ್ಕ ಮೊದಲ ಚಿತ್ರದಲ್ಲೇ ಶಾರೂಖ್ ಖಾನ್ ಜೊತೆ ನಟಿಸಿ ಎಲ್ಲರ ಗಮನ ಸೆಳೆದಿದ್ದಳು. ಆರಂಭದಲ್ಲಿ ತುಂಬಾ ಸರಳ ನಟಿಯಂತೆ ಕಂಡರೂ ನಂತರದ ಚಿತ್ರಗಳಲ್ಲಿ ಹಾಟ್ ಹಾಟ್ ಆಗಿ ಹುಡುಗರ ನಿದ್ದೆ ಕದ್ದಿದ್ದಳು. ಈಗ ರಣಬೀರ್ ಜೊತೆ ಬಾಂಬೆ ವೆಲ್ವೆಟ್ ಮತ್ತು ಅಮೀರ್ ಖಾನ್ ಜೊತೆ ಪೀಕೆ ಚಿತ್ರದಲ್ಲಿ ನಟಿಸುತ್ತಿದ್ದಾಳೆ . ಪೀಕೆಯಲ್ಲಿ ಆಕೆ ಅಮೀರ್ ಖಾನ್ ಏಳು ನಿಮಿಷಗಳ ಮುದ್ದಾಟ ಆಡಿರುವ ಬಗ್ಗೆ ಸುದ್ದಿ ಹೊಮ್ಮಿದೆ. ಒಟ್ಟಲ್ಲಿ ಹಿಂದಿ ಮಾತ್ರವಲ್ಲ ತೆಲುಗು ಹೀರೋಗಳ ಜೊತೆನೂ ಮುದ್ದಾಡಲು ಸಿದ್ಧ ಆಗಿದ್ದಾಳೆ ಈ ಚೆಲುವೆ!