Publish Date: Sun, 24 Jun 2007 (14:53 IST)
Updated Date: Sun, 24 Jun 2007 (14:53 IST)
ಬಾಲಿವುಡ್ ಮೆಗಾ ಸಿನಿಮಾ ಅಲ್ಲಾವುದ್ದೀನನ ಅದ್ಭುತ ದೀಪದಿಂದ ಆಯೇಶಾ ತಾಕಿಯಾ ಹೊರಬಂದಿದ್ದಾಳೆ. ಆಯೇಶಾ ಇತ್ತೀಚೆಗಷ್ಟೇ ಅಮೀರ್ ಖಾನ್‌ರ ಗಜನಿಯಿಂದ ಹೊರನಡೆದಿದ್ದಳು.
ಸಂಜಯ್ ಘೋಷ್ ಅವರ ಅದ್ಭುತ ದೀಪದಲ್ಲಿ ಅಯೇಶಾಗೆ ರಾಜಕುಮಾರಿ ಜಾಸ್ಮಿನ್ ಪಾತ್ರ ಚಿತ್ರಣವಿತ್ತು. ನಾಯಕನಾಗಿ ರಿತೇಶ್ ದೇಶ್‌ಮುಖ್ ಅಭಿನಯವಿತ್ತು.
ಆದರೆ ನಾನು ಈ ಸಿನಿಮಾ ಯೋಜನೆಯಲ್ಲಿ ಪಾಲ್ಗೊಳ್ಳಲಾರೆ ಎಂದಾಕೆ ರಚ್ಚೆ ಹಿಡಿದಿದ್ದಾಳೆ. ಅಯೇಶಾ ಹೇಳಿದಂತೆ ಎಲ್ಲವೂ ನಡೆಯುತ್ತಿಲ್ಲ ಅಂದಾಗ ಆಕೆ ಸಿನಿಮಾ ಕೈ ಬಿಟ್ಟಳಂತೆ. ನಿರ್ದೇಶಕರು ಇದೀಗ ಹೊಸಮುಖವನ್ನು ಹುಡುಕುತ್ತಿದ್ದಾರೆ.
ಅಲ್ಲಾವುದ್ದೀನ್ ಅದ್ಭುತ ದೀಪವನ್ನು ರಮೇಶ್ ಸಿಪ್ಪಿ ಹಾಗೂ ರೋಹನ್ ಸಿಪ್ಪಿ ನಿರಿಸಲು ಯೋಜಿಸಿದ್ದರಾದರೂ ಕೊನೆಗೆ ಕೈ ಬಿಟ್ಟಿದ್ದರು. ಆದರೆ ಸಂಜಯ್ ಘೋಷ್ ತಾವೇ ಸ್ವತಃ ನಿರ್ಮಾಣಕ್ಕೆ ಹೊರಟಿದ್ದರು. ಅಮಿತಾಬ್ ಬಚ್ಚನ್ ಬೆಂಬಲಿಸಿದ್ದರು.
ಪ್ರಸ್ತುತ ಸಿನಿಮಾದ ತಾರಾಗಣದಲ್ಲಿ ಅಮಿತಾಬ್ ಬಚ್ಚನ್, ರಿತೇಶ್ ದೇಶ್‌ಮುಖ್,ಸಂಜಯ್ ದತ್ತ್,ಜೂಹಿ ಚಾವ್ಲಾ, ಸಮೀರಾ ರೆಡ್ಡಿ ಮುಂತಾದವರಿದ್ದಾರೆ.