ಈ ಬಾರಿ ಗಾಸಿಪ್ ಹಬ್ಬಿರುವುದು ಮರ್ಡರ್ 3 ಚಿತ್ರದ ನಟಿ ಅದಿತಿ ರಾವ್ ಹೈದರಿ ಹಾಗೂ ರಣದೀಪ್ ಹೂಡಾ ಅವರ ಮಧ್ಯೆ. ಮರ್ಡರ್ 3 ಬಳಿಕ ಅವರಿಬ್ಬರ ಮಧ್ಯೆ ಸಂಬಂಧ ಇದೆ ಎಂಬ ಮಾತುಗಳು ಕೇಳಿ ಬರುತ್ತಿರುವೆ.
ಈ ಬಗ್ಗೆ ಪ್ರಶ್ನಿಸಿದವರಿಗೆ "ಇದು ನನ್ನ ವೈಯಕ್ತಿಕ ಜೀವನ. ಯಾರೊಬ್ಬರ ಸೊತ್ತೂ ಅಲ್ಲ" ಎಂದು ರಣದೀಪ್ ಪ್ರತಿಕ್ರಿಯೆಸಿದ್ದಾರೆ.
ಕಳೆದೊಂದು ತಿಂಗಳಿನಿಂದ ಅವರಿಬ್ಬರೂ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಬಾಲಿವುಡ್ನಾದ್ಯಂತ ಹಬ್ಬಿತ್ತು. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅವರಿಬ್ಬರು ಜೊತೆಯಾಗಿ ಕಾಣಿಸಿಕೊಂಡು ಈ ಗಾಸಿಪ್ಗೆ ಮತ್ತಷ್ಟು ಒತ್ತು ನೀಡಿದ್ದಾರೆ. "ಅದರ ಕುರಿತು ನನಗೆ ಮಾತನಾಡಲು ಇಷ್ಟವಿಲ್ಲ ಎಂದಾದ ಮೇಲೆ ನಾನು ನಿಮ್ಮ ಪ್ರಶ್ನೆಗೆ ಏಕೆ ಉತ್ತರಿಸಬೇಕು. ಇದು ಯಾರೊಬ್ಬರಿಗೂ ಸಂಬಂಧಿಸಿದ ಪ್ರಶ್ನೆಯಲ್ಲ, ಅದನ್ನು ತಿಳಿದುಕೊಳ್ಳುವ ಹಕ್ಕು ನಿಮಗಾರಿಗೂ ಇಲ್ಲ" ಎಂದು ಪ್ರತಿಕ್ರಿಯಿಸಿದ್ದಾರೆ. 36 ವರ್ಷದ ರಣದೀಪ್ ಹೆಸರು ಈ ಹಿಂದೆ ಸುಶ್ಮಿತಾ ಸೇನ್ ಹಾಗೂ ನೀತೂ ಚಂದ್ರ ಅವರೊಂದಿಗೂ ತಳುಕು ಹಾಕಿಕೊಂಡಿತ್ತು.
ಜಾನ್ ಡೇ ಚಿತ್ರ ಪ್ರಚಾರಕ್ಕೆ ಬಂದಿದ್ದ ಸಮಯದಲ್ಲಿ ಅವರ ಚಿತ್ರದ ಬಗ್ಗೆ ಹಾಗೂ ಬದುಕಿನ ಬಗ್ಗೆ ಒಂದಷ್ಟು ಮಾತನಾಡಿದ ಅವರು ನಾನು ಬಾಲ್ಯದಿಂದಲೂ ಹಾಸ್ಟೆಲ್ನಲ್ಲಿ ಬೆಳೆದವ. ಆಗ ಬದುಕುವುದನ್ನು ನಾನು ಕಲಿತೆ ಎಂದಿದ್ದಾರೆ. ಜಾನ್ ಡೇ ಚಿತ್ರ ಸೇಡು ತೀರಿಸಿಕೊಳ್ಳುವ ಚಿತ್ರವಾಗಿದ್ದು, ನಾಸಿರುದ್ದೀನ್ ಶಾ ಜತೆ ನಟಿಸುತ್ತಿದ್ದಾರೆ. ಈ ಚಿತ್ರ ಸಖತ್ ಹಿಟ್ ಆಗುತ್ತದೆ ಎಂಬ ಭರವಸೆ ಹೂಡಾ ಅವರದ್ದು.