ಅಜಿತ್ ಸಿನಿಮಾಕ್ಕೆಂದು ಬಾಲಿವುಡ್ ರೈಟರ್ ಬರ್ತಾ ಇದ್ದಾರೆ.. ಅವರೇ ಇವರು !
, ಸೋಮವಾರ, 10 ಮಾರ್ಚ್ 2014 (09:52 IST)
ದಕ್ಷಿಣ ಭಾರತದ ಸಿನಿಮಾರಂಗವು ದಿನೇದಿನೇ ಹೆಚ್ಚು ಪ್ರಾಬಲ್ಯ ಹೊಂದುತ್ತಿದೆ. ತಮ್ಮ ಚಿತ್ರಗಳ ಗೆಲುವಿಗಾಗಿ ಎಂತಹ ಪ್ರಯತ್ನ ಬೇಕಾದರೂ ಮಾಡಲು ಸಿದ್ಧ ಮತ್ತು ಅದಕ್ಕಾಗಿ ಎಷ್ಟೇ ಖರ್ಚಾದರೂ ಸರಿಯೇ ಮಾಡಲು ಸದಾ ಸಿದ್ಧ ಅವರು.ಬಾಲಿವುಡ್ ಮಾರ್ಕೆಟ್ ನಲ್ಲಿ ತಮ್ಮ ಸ್ಥಾನ ತೋರಲು ಅಗತ್ಯ ಇರುವಂತಹ ಸಾಧನೆಗಳನ್ನು ಮಾಡುತ್ತಿರುತ್ತಾರೆ ದಕ್ಷಿಣದವರು. ಆ ಮುಖಾಂತರ ಈವರೆಗೂ ದಕ್ಷಿಣದವರು ಎಂದರೆ ನಿರ್ಲಕ್ಷ್ಯ ತೋರುತ್ತಿದ್ದ ಬಾಲಿವುಡ್ ಮಂದಿ ಇವರು ಸಾಮಾನ್ಯರಲ್ಲ ಎನ್ನುವ ಭಾವನೆಯನ್ನು ಬೆಳೆಸುವಲ್ಲಿ ಸಮರ್ಥರಾಗಿದ್ದಾರೆ ಎಂದೇ ಹೇಳ ಬಹುದು. ಈಗ ಅಂತಹ ಮತ್ತೊಂದು ವಿಶೇಷ ಸಂಗತಿ ಉಂಟಾಗಿದೆ ಕಾಲಿವುಡ್ ಚಿತ್ರರಂಗದಲ್ಲಿ.