Article Bollywood Gossips %e0%b2%85%e0%b2%9c%e0%b2%b0%e0%b3%81%e0%b2%a6%e0%b3%8d%e0%b2%a6%e0%b3%80%e0%b2%a8%e0%b3%8d %e0%b2%9c%e0%b3%80%e0%b2%b5%e0%b2%a8 %e0%b2%b8%e0%b2%be%e0%b2%a7%e0%b2%a8%e0%b3%86%e0%b2%af %e0%b2%b9%e0%b3%8a%e0%b2%b8 %e0%b2%9a%e0%b2%bf%e0%b2%a4%e0%b3%8d%e0%b2%b0 113071900030_1.htm

Daily Horoscope

Select Your Language

Notifications

webdunia
webdunia
webdunia
webdunia

ಅಜರುದ್ದೀನ್ ಜೀವನ ಸಾಧನೆಯ ಹೊಸ ಚಿತ್ರ?

ಅಜರುದ್ದೀನ್
PR
PR
ಭಾರತದ ಅಥ್ಲೀಟ್ ಮಿಲ್ಕಾ ಸಿಂಗ್ ಅವರ ಜೀವನ ಚರಿತ್ರೆ ಚಲನಚಿತ್ರವಾದ ಬಳಿಕ ಅದ್ಭುತ ಯಶಸ್ಸು ಸಿಕ್ಕಿದ ಕಥೆ ಗೊತ್ತೇ ಇದೆ. ಇದನ್ನೇ ಆಧಾರವಾಗಿಟ್ಟುಕೊಂಡು ಬಾಕ್ಸರ್ ಮೇರಿ ಕೋಮ್ ಜೀವನವನ್ನು ತೆರೆಯ ಮೇಲೆ ತರಲು ನಿರ್ಧರಿಸಿದ್ದಾಯಿತು, ನಾಯಕಿಯಾಗಲು ಪ್ರಿಯಾಂಕಾ ಚೋಪ್ರಾ ಒಪ್ಪಿಕೊಂಡಿದ್ದೂ ಆಯ್ತು.

ಈಗ ಈ ಪಟ್ಟಿಗೆ ಟೀಂ ಇಂಡಿಯಾದ ಯಶಸ್ವಿ ನಾಯಕರಲ್ಲಿ ಒಬ್ಬರಾದ ಮಹಮ್ಮದ್ ಅಜರುದ್ದೀನ್ ಅವರ ಹೆಸರೂ ಸೇರಿಕೊಂಡಿದೆಯಂತೆ. ಈಗಾಗಲೇ ಸಿಲ್ಕ್ ಸ್ಮಿತಾ ಜೀವನ ಚರಿತ್ರೆಯ ಆಯ್ದ ಭಾಗಗಳನ್ನು ಒಗ್ಗೂಡಿಸಿ ಡರ್ಟಿ ಪಿಕ್ಚರ್ ಚಿತ್ರ ಬಿಡುಗಡೆ ಮಾಡಿದ ಏಕ್ತಾ ಕಪೂರ್ ಈಗ ಈ ಹೊಸ ಸಾಹಸಕ್ಕೆ ಕೈ ಹಾಕಿದ್ದಾರಂತೆ. ಐವತ್ತು ವರ್ಷ ವಯಸ್ಸಿನ ಮಾಜಿ ಕ್ರಿಕೆಟರ್ ಬದುಕು ಹಠಾತ್ ಆಗಿ ಅಂತ್ಯಗೊಂಡಿದ್ದು ಎಲ್ಲರಿಗೂ ತಿಳಿದಿರುವ ಸಂಗತಿ. ಮ್ಯಾಚ್ ಫಿಕ್ಸಿಂಗ್ ದೊಡ್ಡ ಭೂತವಾಗಿ ಕ್ರಿಕೆಟ್ ಅಂಗಳದಲ್ಲಿ ಪ್ರವೇಶಿಸಿದ್ದೂ ಇದೇ ಸಮಯದಲ್ಲಿ. ಇತ್ತೀಚೆಗೆ ಕೆಲ ದಿನಗಳವರೆಗೂ ಆರೋಪವನ್ನು ಮೈಮೇಲೆ ಹೊತ್ತು ತಿರುಗುತ್ತಿದ್ದ ಅಜರ್ ಇತ್ತೀಚೆಗಷ್ಟೇ ಆರೋಪಮುಕ್ತರಾಗಿದ್ದಾರೆ.

ಮೂಲಗಳ ಪ್ರಕಾರ ನಿರ್ಮಾಪಕರು ಈಗಾಗಲೇ ಅಜರುದ್ದೀನ್ ಜೊತೆ ಮಾತನಾಡಿ ಒಪ್ಪಂದಕ್ಕೆ ಸಹಿ ಹಾಕಿದ್ದಾರಂತೆ. ಆದರೆ ಈ ಬಗ್ಗೆ ಯಾರೂ ಎಲ್ಲೂ ಏನನ್ನೂ ಹೇಳಿಲ್ಲ. ಚಿತ್ರ ಮಾಡುತ್ತಿದ್ದಾರೆ ಎಂಬ ಗಾಳಿ ಸುದ್ದಿ ಬಾಲಿವುಡ್ ತುಂಬೆಲ್ಲಾ ಹರಡಿರುವುದು ನಿಜ.

Share this Story:

Follow Webdunia kannada