Publish Date: Sat, 30 Jun 2007 (16:07 IST)
Updated Date: Sat, 30 Jun 2007 (16:06 IST)
ಯಶ್ ರಾಜ್ ಮ್ಯುಸಿಕ್‌ನಿಂದ ನಿರ್ಮಿಸಲ್ಪಡುತ್ತಿರುವ ಡಿಜೆ ಅಖೀಲ್‌ರ ನೂತನ ಸಂಗೀತ ಆಲ್ಬಂನಲ್ಲಿ ನಟ ಅನಿನಾಶ್ ಚಾಧರಿ ಸಂಪೂರ್ಣ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳುವ ಸಿದ್ದತೆಯಲ್ಲಿದ್ದಾರೆ.
ನಟ ಆಶಿಶ್ ಚೌಧರಿ ಈಗಾಗಲೇ ದೈತ್ಯರಾದ ಆಶಾ ಬೋಸ್ಲೆ, ಹೇಮ ಸರ್‌ದೇಸಾಯ್ ಮತ್ತು ಹಂನ್ಸ್ ರಾಜ್ ಹಂನ್ಸ್ ರ ಸಂಗೀತ ಆಲ್ಬಂಗಳಲ್ಲಿ ಕುಣಿದಿದ್ದಾರೆ.
ಪೈಟ್ ಕ್ಲಬ್ ನಂತರ ನಟ ಆಶಿಶ್ ಸುಮಾರು ಒಂದು ವರ್ಷಗಳ ಕಾಲ ಮರೆಯಲಿದ್ದರು. ಈಗ ನೂತನ ಆಲ್ಬಂನ ವಾದಾ ಕರೋ ರಿಮಿಕ್ಸ್ ಹಾಡಿಗೆ ಅವರು ಹೆಜ್ಜೆ ಹಾಕುವುದನ್ನು ಅವರ ಅಭಿಮಾನಿಗಳು ಮತ್ತೊಮ್ಮೆ ನೋಡಬಹುದಾಗಿದೆ.
ಈ ಆಲ್ಬಂನ ನಿರ್ಮಾಣಕಾರ್ಯ ಯಶ್ ರಾಜ್ ಮ್ಯುಸಿಕ್ ನಡೆಸಲಿದೆ. ಡಿಜೆ ಅಖೀಲ್‌ರ ಈ ಮುಂಚಿನ ಆಲ್ಬಂನಲ್ಲಿ ಜಯೇದ್ ಖಾನ್ ನಟಿಸಿದ್ದರು. ತಮ್ಮ ಪಿಲ್ಮ್‌ನಲ್ಲಿ ಕಾಣಿಸುದಕ್ಕೆ ತದ್ವಿರುದ್ದವಾಗಿ ಈ ನೂತನ ಆಲ್ಬಂನಲ್ಲಿ ಆಶಿಶ್ ಹೊಸ ಲುಕ್ ನಲ್ಲಿ ಕಾಣಿಸಲಿದ್ದಾರೆ.