ಅಂತೂ ಇಂತೂ ನೂರು ಕೋಟಿ ಗಳಿಕೆ ಮಾಡಿದ ಜೈ ಹೊ !
, ಗುರುವಾರ, 6 ಫೆಬ್ರವರಿ 2014 (10:23 IST)
ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದ ಸಲ್ಮಾನ್ ಖಾನ್ ಹೊಸ ಚಿತ್ರ ಜೈ ಹೊ ಆರಂಭದಲ್ಲಿ ಹೇಳಿಕೊಳ್ಳುವಂತಹ ಯಾವುದೇ ಬಗೆಯ ಯಶಸ್ಸು ಕಾಣುವಂತೆ ಮಾಡಲಿಲ್ಲ ಬಾಕ್ಸಾಫೀಸಿನಲ್ಲಿ. ಯಾರು ನಿರೀಕ್ಷಿಸದೆ ಇದ್ದಂತಹ ಸೋಲು ಕಂಡಿತ್ತಾದರು ಅದು ಹಾಗೆಂದು ನೆಲ ಕಚ್ಚಿಲ್ಲ. ಜೈ ಹೊ ಚಿತ್ರ ಹತ್ತು ದಿನಗಳ ಬಳಿಕ ನೂರು ಕೋಟಿ ಕ್ಲಬ್ ಮುಟ್ಟಿದೆ. ದಬಾಂಗ್ 2,ಏಕ್ತಾ ಟೈಗರ್ ಚಿತ್ರಗಳು ವಾರದೊಳಗೆ ಅಪಾರವಾದ ಕಲೆಕ್ಷನ್ ಮಾಡಿ ನೂರು ಕೋಟಿ ಕ್ಲಬ್ ಬಾಗಿಲು ತಟ್ಟಿತ್ತು . ಆದರೆ ಜೈಹೊ ಅದನ್ನು ರೀಚ್ ಆಗಲು ಹತ್ತು ದಿನಗಳನ್ನು ಪಡೆಯಿತು. ಭಾನುವಾರದಷ್ಟೊತ್ತಿಗೆ ಜೈ ಹೊ 101 .25ಕೋಟಿಗಳಷ್ಟು ವಸೂಲು ಮಾಡಿತ್ತು. ಈ ಚಿತ್ರ 150 ಕೋಟಿ ರೂಗಳನ್ನು ದಾಟುವುದು ಸಹ ಕಷ್ಟ ಸಂಗತಿ ಅಲ್ಲ ಎನ್ನುವ ಮಾತನ್ನು ಸಹ ಚಿತ್ರ ಪಂಡಿತರು ಹೇಳುತ್ತಿದ್ದಾರೆ. ಕಳೆದ ವರ್ಷ ಬಿಡುಗಡೆ ಆದ ಅಮೀರ್ ಖಾನ್ ಚಿತ್ರ ಧೂಮ್ 3 ಕೇವಲ ಮೂರೂ ದಿನಗಳಲ್ಲೇ 100 ಕೋಟಿ ಗಳಿಕೆ ಮಾಡಿತ್ತು.ಅದೇ ರೀತಿ ತೆಲುಗಿನಲ್ಲಿ ಅಪಾರವಾದ ಯಶಸ್ಸು ಪಡೆದಿದ್ದ ಸ್ಟಾಲಿನ್ ರೀಮೇಕ್ ಜೈ ಹೊ ಮಾತ್ರ ಹೇಳಿಕೊಳ್ಳುವಂತಹ ಯಶಸ್ಸು ಪಡೆಯಲೇ ಇಲ್ಲ !