Publish Date: Sat, 13 Oct 2007 (19:37 IST)
Updated Date: Sat, 13 Oct 2007 (19:35 IST)
ಬಾಲಿವುಡ್ ಸುಪರ್‌ಸ್ಟಾರ್ ಶಾಹರೂಖ್ ಖಾನ್ ಅವರು ಹಿಂದೂಸ್ತಾನ ಟೈಮ್ಸ್ ಆಯೋಜಿಸಿದ ನಾಯಕತ್ವ ಶೃಂಗ ಸಭೆಯಲ್ಲಿ ಪ್ರೇಕ್ಷಕರ ಪ್ರಶ್ನೆಗಳ ಸುರಿಮಳೆಗೆ ತತ್ತರಿಸಿ ತಮ್ಮ ಅಂಗಿ ಕಳಚಿ ದೇಹ ಪ್ರದರ್ಶಿಸಿದರು.
ಸಭೆಯಲ್ಲಿ ಪ್ರೇಕ್ಷಕರೊಬ್ಬರು ಕೆಲ ದಿನಗಳಲ್ಲಿ ಬಿಡುಗಡೆಯಾಗಲಿರುವ ಓಂ ಶಾಂತಿ ಓಂ ಚಿತ್ರದಲ್ಲಿ ತೋರಿಸಿದ ದೇಹ ಪ್ರದರ್ಶನ ನಿಜವಾದ ದೇಹ ಪ್ರದರ್ಶನವೋ ಅಥವಾ ಕ್ಯಾಮರಾ ಕೈಚಳಕವೋ ಎಂದು ಪ್ರಶ್ನಿಸಿದರು.
ಕೂಡಲೇ ಎಂದು ನಿಂತ ಬಾಲಿವುಡ್ ಬಾದಶಾಹ್ ತಾವು ಧರಿಸಿದ ಅಂಗಿಯನ್ನು ಕಳಚಿ ತಮ್ಮ ದೇಹವನ್ನು ಪ್ರದರ್ಶಿಸಿ ಇದು ಕ್ಯಾಮರಾ ಕೈ ಚಳಕವಲ್ಲ .ಕಸರತ್ತಿನಿಂದ ಈ ರೀತಿಯ ದೇಹವನ್ನು ರೂಪಿಸಿದ್ದೇನೆ ಎಂದರು.
ತಮ್ಮ ದೇಹ ಪ್ರದರ್ಶನದಿಂದ ಬಾಲಿವುಡ್‌ಗೆ ಹೊಸಬರ ಪ್ರವೇಶವನ್ನು ತಡೆಯಬಹುದೇ ಎನ್ನುವ ಪ್ರಶ್ನೆಯನ್ನು ತಳ್ಳಿಹಾಕಿದ ಶಾಹರೂಖ್ ನಾನು ಯವಕನಾಗಿ ಕಾಣಿಸಲು ಪ್ರಯತ್ನಿಸುತ್ತಿದ್ದೇನೆ. ನನಗೆ ಹೊಸಬರ ಪ್ರವೇಶದ ಒತ್ತಡವಿಲ್ಲ ಎಂದರು.
ಬಾಲಿವುಡ್ ಸುಪರ್‌ಸ್ಟಾರ್ ಪಟ್ಟ ಹೋಗುವುದೆಂಬ ಹೆದರಿಕೆ ನನಗೆ ಖಂಡಿತ ಇಲ್ಲ ಎಂದು ಹೇಳಿದರು.