2013 ರ ಲಕ್ಕಿ ಗಲ್ ದೀಪಿಕಾ ಪಡುಕೋಣೆ
Publish Date: Sat, 28 Dec 2013 (09:45 IST)
Updated Date: Sat, 28 Dec 2013 (09:45 IST)
ಈ ವರ್ಷ ದೀಪಿಕಾ ಪಡುಕೋಣೆ ಗೆ ಅತ್ಯಂತ ಅದೃಷ್ಟ ದಾಯಕ ವರ್ಷವಾಗಿದೆ. ಆಕೆ ನಟಿಸಿರುವ ಎಲ್ಲ ಚಿತ್ರಗಳು ಸೂಪರ್ ಡೂಪರ್ ಸಕ್ಸಸ್ ಆಗಿದೆ. ಅಲ್ಲದೆ ಆಕೆಯ ಬಗ್ಗೆ ಜನರ ಕ್ರೇಜ್ ಸಹ ಹೆಚ್ಚಾಗಿದೆ. ದೀಪಿಕಾ ತಾನು ನಟಿಸಲು ಹೊರಟಿರುವ ಆದ ಗೆ ಪಡೆದಿರುವ ಮೊತ್ತ ಬರೋಬ್ಬರಿ 4 ಕೋಟಿ ರೂಪಾಯಿಗಳು.ಕೊಕಾಕೋಲ ಕಂಪನಿಯ ಆದ ನಲ್ಲಿ ನಟಿಸಲು ಆಕೆ ನೀಡುತ್ತಿರುವ ಮೊತ್ತ ನಾಲ್ಕು ಕೋಟಿ ರೂಪಾಯಿಗಳು. ಈ ಕಂಪನಿಗೆ ವಿಶ್ವದಾದ್ಯಂತ ಒಳ್ಳೆಯ ಮಾರುಕಟ್ಟೆ ಇದೆ. ಬಾಲಿವುಡ್ ನಲ್ಲಿ ಒಂದು ಚಿಕ್ಕ ಬಜೆಟ್ ಸಿನಿಮಾ ತೆಗೆಯುವಷ್ಟು ಮೊತ್ತವನ್ನು ಆಕೆಗೆ ನೀಡುತ್ತಿದ್ದಾರೆ ಎಂದರೆ ಡಿ೦ಪಿ ಬಗ್ಗೆ ಜನರಿಗಿರುವ ಕ್ರೇಜ್ ಎಂತಹದ್ದು ಎಂಬುದು ನೀವೆ ಅರ್ಥ ಮಾಡಿಕೊಳ್ಳಿ. ರೆಸ್ 2 ಚಿತ್ರದಿಂದ ಯಶಸ್ಸು ತನ್ನದಾಗಿಸಿಕೊಂಡ ದೀಪಿಕಾ ಆ ಬಳಿಕ ಚೆನ್ನೈ ಎಕ್ಸ್ ಪ್ರೆಸ್ ಮೂಲಕ ಮತ್ತೂ ಹೆಚ್ಚಿನ ಗೆಲುವು ಸಾಧಿಸಿದಳು. ಆಬಳಿಕ ಆಕೆಯ ಚಿತ್ರ ರಾಮ್ ಲೀಲಾ ಸೂಪರ್ ಹಿಟ್ ಆಯಿತು. ಇವೆಲ್ಲವೂ ಆಕೆಯ ತಾರಾ ಗ್ರಾಫ್ ಹೆಚ್ಚಿಸಿದೆ. ಒಟ್ಟಿನಲ್ಲಿ 2013 ರ ರಾಣಿಯಾಗಿ ಮೆರೆದ ದೀಪಿಕಾಳ 2014 ಹೇಗಿದೆ ಎಂಬುದು ಕಾಲವೇ ನಿರ್ಧರಿಸುತ್ತದೆ. ಏನೇ ಆಗಲಿ ಕರಾವಳಿ ಸುಂದರಿ ಗೆಲುವು ಕಾಣಲಿ