ಸೂಪರ್ ಸ್ಟಾರ್ ರಜನಿಕಾಂತ್ ಬಿಜೆಪಿ ಕಡೆಗೆ ?
, ಸೋಮವಾರ, 6 ಜನವರಿ 2014 (11:26 IST)
ಭಾರತೀಯ ಚಿತ್ರರಂಗದ ಆಲ್ ಟೈಂ ಸೂಪರ್ ಸ್ಟಾರ್ ಅಂದರೆ ರಜನಿಕಾಂತ್ ಮಾತ್ರ! ಅವರು ಸಿನಿಮಾ ರಂಗದಲ್ಲಿ ಹೆಚ್ಚು ಸಾಧನೆ ಮಾಡಿರುವಂತೆ ರಾಜಕೀಯರಂಗದಲ್ಲೂ ಸಾಧಿಸಲು ಅನುಕೂಲ ಆಗುವಂತಹ ವಾತಾವರಣ ಸದಾ ಕಲ್ಪಿತವಾಗುತ್ತಿದ್ದರೂ ಸಹ ಅದ್ಯಾಕೊ ರಜನಿಕಾಂತ್ ಅದರತ್ತ ಹೆಚ್ಚಿನ ಗಮನ ನೀಡುತ್ತಿಲ್ಲ. ಈಗ ಈ ಸೂಪರ್ ಸ್ಟಾರ್ ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡುವ ಸಲುವಾಗಿ ಬಿಜೆಪಿ ತನ್ನಡೆ ಸೆಳೆದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಈ ಪಕ್ಷದ ದೇಶದಲ್ಲಿ ಚುನಾವಣೆ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಕಷ್ಟು ಕಸರತ್ತುಗಳನ್ನು ಮಾಡುತ್ತಿದೆ. ಅದರಲ್ಲಿ ಒಂದು ಭಾಗವಾಗಿ ತಮಿಳುನಾಡಿನ ಬಿಜೆಪಿ ನಾಯಕರು ರಜನಿಕಾಂತ್ ರನ್ನು ತಮ್ಮತ್ತ ಸೆಳೆಯಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಇತ್ತೀಚೆಗೆ ಚೆನ್ನೈನಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಅಲ್ಲಿನ ಬಿಜೆಪಿ ನಾಯಕರು ಮೀಟಿಂಗ್ ನಡೆಸಿದರು. ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಭಾಜಪಕ್ಕೆ ಸೆಳೆಯಲು ಸಾಧ್ಯವಾಗುತ್ತದೆಯೆ ಎಂಬುದು ಸಧ್ಯದ ಪ್ರಶ್ನೆ !