Select Your Language

Notifications

webdunia
webdunia
webdunia
webdunia

ಸಲ್ಮಾನ್ ಖಾನ್ ಫಗ್ಲಿ ಸೆಟ್ ನಿಂದ ಹೊರ ಬಂದದ್ದು ಯಾಕೆ?

ಸಲ್ಮಾನ ಖಾನ್
, ಶನಿವಾರ, 22 ಮಾರ್ಚ್ 2014 (09:17 IST)
PR
ಸಲ್ಮಾನ್ ಖಾನ್ ಫಗ್ಲಿ ಚಿತ್ರದ ಸೆಟ್ ನಿಂದ ಹೊರ ಬಂದರು ಅನ್ನುವ ಸುದ್ದಿ ಎಲ್ಲೆಡೆ ಕೇಳಿ ಬಂದಿತ್ತು. ಈ ಚಿತ್ರವನ್ನು ಅಕ್ಷಯಕುಮಾರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಏನಾಯಿತು ಅಂತ ಸಲ್ಮಾನ್ ಹೊರಗೆ ಬಂದರು ಎನ್ನುವುದರ ಬಗ್ಗೆ ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗಿದ್ದು ಸತ್ಯ.

ಆದರೆ ಗಾಳಿ ಸುದ್ದಿಗಳಿಗೆನು ತಲೆ ಇರಲ್ಲ ಮತ್ತು ಬುಡ ಸಹಿತ. ಅದೇರೀತಿ ಆಗಿದೆ ಸಲ್ಮಾನ್ ಖಾನ್ ಅವರ ಈ ನಡವಳಿಕೆಯ ವಿಷಯದಲ್ಲೂ ಸಹಿತ. ಮುಖ್ಯವಾಗಿ ಸಲ್ಮಾನ್ ಖಾನ್ ಆ ಚಿತ್ರದ ಹಾಡನ್ನು ಪೂರೈಸಿ ಆ ಬಳಿಕ ಸೆಟ್ ನಿಂದ ಹೊರ ಬಂದರಂತೆ. ಅವರು ಅಲಿಯಾ ಭಟ್ ಮತ್ತು ಅರ್ಜುನ್ ಕಪೂರ್ ಅವರ ಹೊಸ ಚಿತ್ರ 2 ಸ್ಟೇಟ್ಸ್ ಫೋಟೋ ಶೂಟ್ ನೋಡಲು ಹೋಗಿದ್ದರಂತೆ.

ಸಲ್ಮಾನ್ ಖಾನ್ ಸಹೋದರಿ ಮತ್ತು ಅವರ ಭಾಮೈದ ಅತುಲ್ ಅಗ್ನಿ ಹೋತ್ರಿ ಸಹ ಅದೇ ಸ್ಥಳದಲ್ಲಿ ತಮ್ಮ ನಿರ್ಮಾಣದ ಚಿತ್ರಕ್ಕೆ ಸಂಬಂಧಪಟ್ಟಂತೆ ಕೆಲಸ ನಿರ್ವಹಿಸುತ್ತಿದ್ದರಂತೆ. ಈ ಸತ್ಯ ಗೊತ್ತಾದ ಬಳಿಕ ಬಾಲಿವುಡ್ ಗಾಸಿಪ್ ಬಾಯಿಗಳು ಥಟ್ ಅಂತ ಮುಚ್ಚಿಕೊಂಡವು.

Share this Story:

Follow Webdunia kannada