ಸಲ್ಮಾನ್ ಖಾನ್ ನನ್ನ ರೀಲ್ ನಲ್ಲಿ ಮಾತ್ರವಲ್ಲ ರಿಯಲ್ ನಲ್ಲೂ ಹೀರೋ ಅಂದ್ಲು ಡೈಸಿ
, ಬುಧವಾರ, 15 ಜನವರಿ 2014 (11:42 IST)
ಸಲ್ಮಾನ್ ಖಾನ್ ನಟನೆಯ ಬಾಡಿಗಾರ್ಡ್ ಚಿತ್ರ ಸೂಪರ್ ಹಿಟ್ ಆಗಿತ್ತು. ಆ ಚಿತ್ರದಲ್ಲಿ ನಟಿಸುವಂತೆ ನಟಿ ಡೈಸಿಯನ್ನು ಕೇಳಿದ್ದರು ಸಲ್ಮಾನ್. ಆದರೆ ಆ ಅವಕಾಶವನ್ನು ಡೈಸಿ ತಿರಸ್ಕರಿಸಿದ್ದರು. ಆ ಬಳಿಕ ಸಲ್ಮಾನ್ ಜೊತೆ ಅವರೀಗ ಜೈ ಹೊ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಾಡಿಗಾರ್ಡ್ ನಲ್ಲಿ ಆಕೆ ನಟಿ ಕರೀನಾ ಕಪೂರ್ ಸ್ನೇಹಿತೆ ಪಾತ್ರ ಮಾಡ ಬೇಕಿತ್ತು. ಅದಕ್ಕೆ ಇಷ್ಟಪಡ ಡೈಸಿ ಇಲ್ಲ ನಾನು ನಟಿಸಲ್ಲ ಎಂದು ಹೇಳಿದ್ದರು. ಈಗ ಅದರ ಬಗ್ಗೆ ಮಾತಾಡುತ್ತಾ , ತಾನು ಸಲ್ಮಾನ್ ಅವರ ಜೊತೆ ನಟಿಸಲಿ ಬಿಡಲಿ ಎಂದಿಗೂ ಅವರೇ ನನ್ನ ರೀಲ್ ಮತ್ತು ರಿಯಲ್ ಲೈಫಿನ ಕಥಾನಾಯಕ ಎಂದು ಹೇಳಿ ಬಾಲಿವುಡ್ ನಲ್ಲಿ ಒಂದು ಬಗೆ ಸೆನ್ಸೇಷನ್ ತಂದಿದ್ದಾರೆ. ಆಗ ನಾನು ದಕ್ಷಿಣ ಭಾರತ ಸಿನಿಮಾಗಳ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದೆ. ಅಲ್ಲದೆ ನನಗೆ ಇವರು ಕೇಳಿದ್ದ ಸಮಯದಲ್ಲಿ ಬಿಡುವು ಮಾಡಿಕೊಳ್ಳಲು ಸಾಧ್ಯ ಆಗಿರಲಿಲ್ಲ ಎಂದು ಹೇಳಿದ್ದಾಳೆ ಈಕೆ. ಗಮನ ಇಲ್ಲದೆ ಯಾವ ಕೆಲಸ ಮಾಡಿದರು ಪ್ರಯೋಜನ ಇಲ್ಲ ಎನ್ನುವ ಮಾತನ್ನು ಹೇಳಿ , ಈಗ ಸಿಕ್ಕಿರುವ ಜೈ ಹೊ ಚಿತ್ರವನ್ನು ಸರಿಯಾಗಿ ಬಳಸಿಕೊಳ್ಳುತ್ತಾ ಇದ್ದಾರಂತೆ.. ಜೊತೆಗೆ ಸಲ್ಮಾನ್ ಖಾನ್ ಅವರನ್ನು ಸಹ ಎಂದು ಕುಹಕವಾಡುತ್ತಿದೆ ಬಾಲಿವುಡ್