ಸಲ್ಮಾನ್ ಖಾನ್ ತುಂಬಾ ಹಾಟ್ ಹಾಟ್ - ಸೋನಂ ಕಪೂರ್
, ಮಂಗಳವಾರ, 1 ಏಪ್ರಿಲ್ 2014 (09:43 IST)
ಸೋನಂ ಕಪೂರ್ ಮತ್ತೊಮ್ಮೆ ಸೂರಜ್ ಬರ್ಜತ್ಯ ಅವರ ಟೀಂ ಜೊತೆ ಕೆಲಸ ಮಾಡುತ್ತಿದ್ದಾಳೆ.ಸಾವರಿಯ ನಂತರ ಮತ್ತೊಮ್ಮೆ ಈಕೆ ಈ ಗ್ರೂಪ್ ಜೊತೆ ಕೆಲಸ ಮಾಡುತ್ತಿದ್ದಾಳೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ನಟಿಸುತ್ತಿರುವ ಸೋನಂ ತನ್ನ ಹೀರೋ ಸಲ್ಮಾನ್ ಅವರನ್ನು ಹಾಟ್ ಎಂದು ಬಣ್ಣಿಸಿ ವರ್ಣಿಸಿದ್ದಾಳೆ. ಈ ಚಿತ್ರದಲ್ಲಿನ ತನ್ನ ನಟನೆ ಸಹ ಡಬಲ್ ಧಮಾಲ್ ಎಂದು ಖುಷಿಯಿಂದ ಹೇಳಿಕೊಂಡಿದ್ದಾಳೆ. ಸಲ್ಮಾನ್ ಅವರ ಜೊತೆ ನಟಿಸುವುದಕ್ಕೆ ನನಗೆ ಹೆಚ್ಚು ಎಗ್ಸೈಟ್ ಆಗಿತ್ತು. ಅವರೊಬ್ಬ ಮಾದಕ ನಟ. ಈ ಚಿತ್ರದಲ್ಲಿ ಮತ್ತಷ್ಟು ಹಾಟ್ ಆಗಿದ್ದಾರೆ, ನಾನು ಅದರ ಬಗ್ಗೆ ವಿವರಿಸಲಾರೆ, ನೀವೆ ಚಿತ್ರಗಳನ್ನು ನೋಡಿ ನಿರ್ಧರಿಸಿ ಎಂದು ಹೇಳಿದ್ದಾಳೆ ಸೋನಂ .
ಈ ಚಿತ್ರವನ್ನು ಸೂರಜ್ ಬರ್ಜತ್ಯ ಅವರು ನಿರ್ದೇಶಿಸುತ್ತಾ ಇದ್ದಾರೆ. ಸಲ್ಮಾನ್ ಖಾನ್ ಜೊತೆಯಲ್ಲಿ ನಟಿಸುವುದು ಅತ್ಯಂತ ಆರಾಮದಾಯಕ ಸಂಗತಿ. ಆಟ ತನ್ನ ಸಹ ಕಲಾವಿದರ ಜೊತೆ ಸ್ನೇಹಪರವಾಗಿ ಇರ್ತಾರೆ ಎನ್ನುವ ಮಾತು ಮತ್ತೊಮ್ಮೆ ಸಾಬೀತಾಗಿದೆ.. ಈಗ ಅವರ ಹಾಟ್ ಅಂಡ್ ಹಾಟ್ ದೃಶ್ಯಗಳನ್ನು ನೋಡುವುದಷ್ಟೇ ಬಾಕಿ ಇರೋದು. ಈ ಚಿತ್ರ ಅಲ್ಲದೆ ಡೋಲಿ ಕಿ ಡೋಲಿ ಸಿನಿಮಾದಲ್ಲೂ ಸಹ ಸೋನಂ ನಟಿಸುತ್ತಿದ್ದಾಳೆ. ಇಲ್ಲಿ ಸಹ ಆಕೆಯದ್ದು ಬಿನ್ನ ಪಾತ್ರವಂತೆ !