Select Your Language

Notifications

webdunia
webdunia
webdunia
webdunia

ಶ್ರುತಿ ಹಾಸನ್ ಸಂಭಾವನೆ ಈಗ ಬರೋಬ್ಬರಿ....?!

ಶ್ರುತಿ ಹಾಸನ್ ಸಂಭಾವನೆ ಈಗ ಬರೋಬ್ಬರಿ....?!
, ಗುರುವಾರ, 27 ಮಾರ್ಚ್ 2014 (09:16 IST)
PR
ಚಿತ್ರರನ್ಗ್ದದಲ್ಲಿ ಒಂದು ಪದ್ಧತಿ ಇದೆ. ಸಾಮಾನ್ಯವಾಗಿ ಹೀರೋಗಳ ಬಳಿಪ್ರೈವೇಟ್ ಪ್ರೊಡಕ್ಷನ್ ಹೌಸ್ ಗಳು ವರ್ಷಾನುಗಟ್ಟಲೆ ನಟಿಸುವುದಕ್ಕೆ ಅಗ್ರಿಮೆಂಟ್ ಮಾಡಿಸಿಕೊಳ್ಳುತ್ತವೆ. ಆದರೆ ಬಾಲಿವುಡ್, ಕಾಲಿವುಡ್, ಟಾಲಿವುಡ್ ಗಳಲ್ಲಿ ಏಕಕಾಲದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಶ್ರುತಿ ಹಾಸನ್ ಗೆ ಈ ಅವಕಾಶ ದೊರಕಿದೆ.

ಈಗ ಶ್ರುತಿ ಹಾಸನ್ ಒಂದು ಕಾರ್ಪೋರೆಟ್ ದೊಡ್ಡ ಡೀಲಿಂಗ್ ಕುದುರಿಸಿಕೊಂಡಿದ್ದಾಳೆ . ಶ್ರುತಿ ಹಾಸನ್ ಈರೊಸ್ ಸಂಸ್ಥೆಯ ಜೊತೆಯಲ್ಲಿ ಒಂದು ಅಗ್ರಿಮೆಂಟ್ ಗೆ ಸಹಿ ಹಾಕ ಬೇಕಾಗಿದೆ. ಆ ಸಂಸ್ಥೆಗೆ ಆಕೆ ಎರಡು ವರ್ಷಗಳ ಕಾಲ್ಶೀಟ್ ನೀಡಲು ಸಿದ್ಧ ಆಗಿದ್ದಾಳೆ.

webdunia
PR
ಅದು ಆಕೆಗೆ 5ಕೋಟಿ ರೂಪಾಯಿ ನೀಡಿ ಆಕೆಯನ್ನು ಕೊಳ್ಳುವ ಬಗ್ಗೆ ಪ್ರಪೋಸಲ್ ನೀಡಿ ಅಗ್ರಿಮೆಂಟ್ ಮುಂದೆ ಇಟ್ಟಿದೆ. ಆರಂಭದಲ್ಲಿ ಈಕೆ ಈ ಪ್ರಪೋಸಲ್ ಗೆ ಸಮ್ಮತಿ ನೀಡಿದರು, ಆನಂತರ ಆ ಬಗ್ಗೆ ಒಂದಷ್ಟು ಆಕ್ಷೇಪ ಎತ್ತಿದ್ದಾಳೆ. ಈಗ ಸದ್ಯಕ್ಕೆ ಶ್ರುತಿ ಹಾಸನ್ 2015ರ ವರೆಗೂ ಬ್ಯುಸಿ ಆಗಿದ್ದಾಳೆ. ಆದ ಕಾರಣ 2016-2017 ವರೆಗೆ ಆದರೆ ಈ ಡೀಲ್ ಒಪ್ಪಿಕೊಳ್ಳುತ್ತೇನೆ ಎಂದಿದ್ದಾಳೆ ಈ ಚೆಲುವೆ.

ಅದನ್ನು ಕೇಳಿದ ಈರೊಸ್ ಸಂಸ್ಥೆ ಆಲೋಚಿಸಿ ನಿರ್ಣಯ ಹೇಳುತ್ತೇವೆ ಎಂದಿದ್ದಾರಂತೆ. ಒಂದು ವೇಳೆ ಈ ಡೀಲ್ ಅಂದು ಕೊಂಡಂತೆ ಆದರೆ ಆ ಎರಡು ವರ್ಷದ ಕಾಲ್ಶೀಟ್ ಸಂಪೂರ್ಣವಾಗಿ ಆ ಸಂಸ್ಥೆಗೆ ಸೇರಿದ್ದು ಎಂದು ಹೇಳ ಬಹುದು. ಸಿನಿಮಾದ ನಟನೆ, ಸಂಭಾವನೆ ಹೀಗೆ ಅನೇಕ ಸಂಗತಿಗಳ ಬಗ್ಗೆ ಈ ಅಗ್ರಿಮೆಂಟ್ ಹೊಂದಿದೆಯಂತೆ. ಯಾರಿಗೂ ಇಲ್ಲದ ಚಾನ್ಸ್ ಇವಳಿಗೆ ಸಿಕ್ತಲ್ಲ ಎನ್ನುವ ಹೊಟ್ಟೆ ಉರಿಯನ್ನು ಇತರ ನಾಯಕಿಯರು ತೋರಿಸುತ್ತಿದ್ದಾರೆ ಅನ್ನೋದು ಸುದ್ದಿ ... ! ಹೌದ !!

Share this Story:

Follow Webdunia kannada