Select Your Language

Notifications

webdunia
webdunia
webdunia
webdunia

.ಶೇನ್ ವಾರ್ನ್ -ಹ್ಯಾರ್ಲಿ ದೂರ ದೂರ?

ಹ್ಯಾರ್ಲಿ
, ಬುಧವಾರ, 29 ಜನವರಿ 2014 (10:06 IST)
PR
ಹಾಲಿವುಡ್ ನಟಿ ಹ್ಯಾರ್ಲಿ ಮತ್ತು ಕ್ರಿಕೆಟರ್ ಶೇನ್ ವಾರ್ನ್ ವಿಚ್ಚೇದನ ಪಡೆದಿದ್ದಾರೆ ಎನ್ನುವ ಸಂಗತಿ ಸಾಕಷ್ಟು ದಿನಗಳಿಂದ ವಿಶ್ವದೆಲ್ಲೆಡೆ ಹರಡಿತ್ತು. ಆದರೆ ಅದಕ್ಕೆ
ಸಂಬಂಧಪಟ್ಟಂತೆ ಈ ಸಂಗತಿಯನ್ನು ಅವರು ಅಲ್ಲಗಳೆದಿದ್ದರು.ತಾವು ಒಂದಾಗಿಯೇ ಇದ್ದೇವೆಂದು ಹೇಳಿದ್ದರು. ಅದು ಆಗಿನ ಕಥೆ.ಹಲವು ಸಂದರ್ಭಗಳಲ್ಲಿ, ಹಲವು ಅನೇಕ ರೂಮರ್ಗಳು ಹೆಚ್ಚಿನ ಪ್ರಭಾವ ಬೀರಿತ್ತಾದರು, ಅಲ್ಪ ಕಾಲದ ಬಳಿಕ ಅದು ತಣ್ಣಗಾಯಿತು.ಆದರೆ ಈಗ ಸಿಕ್ಕಿರುವ ಸಮಾಚಾರದ ಅನ್ವಯ ಅವರಿಬ್ಬರೂ ವಿಚ್ಛೇದನಕ್ಕೆ ಸಿದ್ಧರಾಗಿದ್ದಾರೆ. ಬಹಳ ಕಾಲದಿಂದ ನೆನಗುದಿಯಲ್ಲಿ ಇದ್ದ ಸಂಗತಿಯು ಈಗೊಂದು ನೆಲೆ ಕಂಡಿದೆ ಅನ್ನುತ್ತಿದ್ದಾರೆ ಅವರಿಬ್ಬರ ಆಪ್ತವಲಯ.


webdunia
PR
ಈ ಸಂಗತಿಯನ್ನು ಅಲ್ಲಿನಾ ಹಲೋ ಅನ್ನುವಪತ್ರಿಕೆಗೆ ಆಪ್ತವಲಯ ತಿಳಿಸಿದ ಸಂಗತಿ ಈಗ ಎಲ್ಲಲ್ಲೂ. ಶೇನ್ ವಾರ್ನ್ ಟ್ವೀಟ್ ಮಾಡಿದ ವಿಷಯಗಳಲ್ಲಿ ಹಿಂದೆ ಆದ ಸಂಗತಿಗಳಿಗೆ ಬೇಸರ ಪಡ ಬಾರದು ಎನ್ನುವ ಮಾತು ಎಲ್ಲರ ಗಮನ ಸೆಳೆದಿದೆ. ನಿನ್ನೆಯ ಬಗ್ಗೆ ಆಲೋಚಿಸಬಾರದು ಎಂದು ಶೇನ್ ವಾರ್ನ್ ಹೇಳಿದ್ದಾರೆ ಸೋಶಿಯಲ್ ನೆಟ್ ವರ್ಕ್ ನಲ್ಲಿ. ಈ ಅಂಶಗಳು ಸಹ ನಿಜವನ್ನು ಸಾಬೀತು ಮಾಡಿದೆ.

ಕಳೆದುದನ್ನು ನೆನಪಿಸಿ ಕೊಂಡರೆ ಭವಿಷ್ಯದ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ. ನಾಳೆಯ ಒಳ್ಳೆಯ ದಿನಗಳನ್ನು ಊಹಿಸಿಕೊಂಡು ಕಾಲ ಕಳೆಯ ಬೇಕು ಎಂದಿದ್ದಾರೆ.ಆದರು ಹ್ಯಾರ್ಲಿ ಇದು ಸುಳ್ಳು ಅಂದಿದ್ದಾರೆ. ನಿಜ ಯಾವುದುಎನ್ನುವುದು ತಿಳಿಯುವುದು ತಡವಲ್ಲ !

Share this Story:

Follow Webdunia kannada