Select Your Language

Notifications

webdunia
webdunia
webdunia
webdunia

ಶುದ್ಧ್ ದೇಸಿ ರೊಮಾನ್ಸ್: ಪ್ರಶಂಸೆ ಖುಷಿಯಲ್ಲಿ ಪರಿಣಿತಿ

ಶುದ್ಧ್ ದೇಸಿ ರೊಮಾನ್ಸ್
ಬೆಂಗಳೂರು , ಸೋಮವಾರ, 31 ಮಾರ್ಚ್ 2014 (16:09 IST)
ಪರಿಣಿತಿ ಚೋಪ್ರಾ ಅಭಿನಯದ ಶುದ್ಧ್ ದೇಸಿ ರೊಮಾನ್ಸ್ ಚಿತ್ರ ಯಶಸ್ವಿಯಾಗಿದೆ. ಇದರಿಂದ ಅವರು ಫುಲ್ ಖುಷಿಯಾಗಿದ್ದಾರೆ. ಚಿತ್ರದ ಸ್ಕ್ರಿಪ್ಟ್ ಓದಿದಾಗಲೇ ಇದು ಹಿಟ್ ಆಗುತ್ತದೆ ಎಂದುಕೊಂಡಿದ್ದರಂತೆ. ಯಶ್ರಾಜ್ ಫಿಲ್ಮ್ ಬ್ಯಾನರ್ನಲ್ಲಿ ಮನೀಷ್ ಶರ್ಮಾ ನಿರ್ದೇಶಿಸಿರುವ ಈ ಚಿತ್ರ ಅದ್ಭುತವಾಗಿ ಮೂಡಿ ಬಂದಿದೆ. ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದಿದ್ದಾರೆ ಪರಿಣಿತಿ. ಸ್ಕ್ರಿಪ್ಟ್ ಓದಿದಾಗಲೇ ಚಿತ್ರ ಯಶಸ್ಸಿನತ್ತ ಹೋಗುವ ಧೈರ್ಯ ನನಗಿತ್ತು. ಆಗಲೇ ಇದು ಮನರಂಜನೆ ನೀಡುತ್ತದೆ ಎಂದೂ ಭಾವಿಸಿದ್ದೆ. ಡಿಫರೆಂಟ್ ಪಾತ್ರದಲ್ಲಿ ಅಭಿನಯಿಸಬೇಕು ಎಂದುಕೊಂಡಿದ್ದೆ. ಅದೀಗ ನಿಜವಾಗಿದೆ. ಈ ಚಿತ್ರದ ಯಶಸ್ಸಿನಿಂದ ನನಗೆ ಭಾರೀ ಖುಷಿಯಾಗಿದೆ ಎಂದಿದ್ದಾರೆ ಪರಿಣಿತಿ.

ಈ ಸಿನೆಮಾವನ್ನು ಜನ ಮೆಚ್ಚಿದ್ದಾರೆ. ವಿಮರ್ಶಕರು ಉತ್ತಮ ಚಿತ್ರ ಎಂದಿದ್ದಾರೆ. ಎಲ್ಲರ ನಟನೆ ಜತೆ ಜಯದೀಪ್ ಮತ್ತು ಮನೀಷ್ ಕೆಲಸ ಮೆಚ್ಚಲೇಬೇಕು ಎಂದು ಚಿತ್ರದ ನಿರ್ದೇಶಕ ಹಾಗೂ ಸ್ಕ್ರಿಪ್ಟ್ ರೈಟರನ್ನು ಪರಿಣಿತಿ ಹೊಗಳಿದ್ದಾರೆ. ವಿಮರ್ಶಕರು ನೆಗೆಟಿವ್ ಆಗಿಯೂ ಬರೆದಿದ್ದಾರಲ್ಲಾ ಎಂದರೆ ವಿಮರ್ಶೆ ಯಾವಾಗಲೂ ಭಿನ್ನವಾಗಿರುತ್ತದೆ. ನೋಡುವ ವ್ಯಕ್ತಿಯ ಸೂಕ್ಷ್ಮತೆ, ಅಭಿರುಚಿಗಳು ಸದಾ ಭಿನ್ನವಾಗಿರುತ್ತವೆ. ನನ್ನ ಮಟ್ಟಿಗೆ ಇಲ್ಲಿ ಯಾವುದೇ ತಪ್ಪು ನಡೆದಿಲ್ಲ ಎಂದು ಹೇಳುವ ಮೂಲಕ ಅವರನ್ನು ಸಮರ್ಥಿಸಿಕೊಳ್ಳುತ್ತಾರೆ.

Share this Story:

Follow Webdunia kannada