Select Your Language

Notifications

webdunia
webdunia
webdunia
webdunia

ಶಾರೂಖ್ ಖಾನ್ ಬಕರ ಆಗಿದ್ದ ವಿಷ್ಯ ನಿಮಗೆ ಗೊತ್ತೇ ?

ಶಾರೂಖ್ ಖಾನ್ ಬಕರ ಆಗಿದ್ದ ವಿಷ್ಯ ನಿಮಗೆ ಗೊತ್ತೇ ?
, ಬುಧವಾರ, 26 ಮಾರ್ಚ್ 2014 (09:27 IST)
PR
ಯಾರು ಬೇಕಾದರೂ ಬಕರ ಆಗ ಬಹುದು ಮನುಷ್ಯರಾಗಿ ಹುಇತ್ತಿದ ಬಳಿಕ. ಅದರಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಹೊರತಲ್ಲ. ಕಿಂಗ್ ಖಾನ್ ಅವರು ಬಕರ ಆಗಿದ್ದಾರೆ ಎನ್ನುವುದು ಈಗ ಬಿ ಟೌನ್ ನಲ್ಲಿ ಕೇಳಿ ಬರುತ್ತಿರುವ ಸಂಗತಿ ಆಗಿದೆ.

ಆದರೆ ಶಾರುಖ್ ಖಾನ್ ಅವರನ್ನು ಯಾರೂ ಬಕರ ಮಾಡಿಲ್ಲ. ಅವರ ಹೊಸ ಚಿತ್ರದ ಹೆಸರು ಯೇ ಹೈ ಬಕ್ರಾಪುರ್ ಅನ್ನುವ ಚಿತ್ರದಲ್ಲಿ ಶಾರೂಖ್ ಖಾನ್ ಅವರ ಹೆಸರನ್ನು ಒಂದು ಕುರಿಗೆ ಇಟ್ಟಿದ್ದಾರಂತೆ. ಇದೊಂದು ಮಧ್ಯಮ ವರ್ಗದ ಕಥೆ ಆಗಿದ್ದು ಈ ಒಂದು ಕುರಿಯ ಸುತ್ತ ಹರಿದಾಡುವ ಕಥಾ ಹಂದರ ಹೊಂದಿದೆಯಂತೆ ಈ ಚಿತ್ರ. ಜಾನಕಿ ವಿಶ್ವನಾಥನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

webdunia
PR
ರಮೇಶ್. ಎಸ್. ಅರುಣಾಚಲಂ ಈ ಚಿತ್ರದ ನಿರ್ಮಾಣ ಮಾಡಿದ್ದಾರೆ. ಕುರಿಗೆ ಶಾರೂಖ್ ಖಾನ್ ಹೆಸರು ಇಟ್ಟ ಕಾರಣ ಶಾರುಖ್ ಇದರ ಬಗ್ಗೆ ಆಕ್ಷೇಪ ಎತ್ತುತ್ತಾರೆನೋ ಎನ್ನುವ ಬಗ್ಗೆ ಚಿತೆ ಹೊಂದಿರುವ ಸಿನಿಮಾ ಮಂದಿ, ಮೊದಲು ಈ ಚಿತ್ರವನ್ನು ಶಾರೂಖ್ ಖಾನ್ ಮತ್ತು ಆತನ ಮಿತ್ರವೃಂದಕ್ಕೆ ಈ ಚಿತ್ರವನ್ನು ಮೊದಲುಪ್ರದರ್ಶಿಸುವುದಕ್ಕೆ ನಿಶ್ಚಯ ಮಾಡಿದ್ದಾರೆ.

ಶಾರೂಖ್ ಖಾನ್ ಅವರ ಗೌರವಕ್ಕೆ ಧಕ್ಕೆ ತರುವಂತಹ ಯಾವುದೇ ದೃಶ್ಯ ಇದ್ದರು ಸಹಿತ ಅದನ್ನು ತೆಗೆದು ಹಾಕ್ತೀವಿ ಎನ್ನುವ ಸಂಗತಿಯನ್ನು ಅವರು ಹೇಳಿದ್ದಾರಂತೆ. ಒಟ್ಟಾರೆ ಶಾರುಖ್ ಕುರಿ ಆದ ಸುದ್ದಿ ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಸಂಚಲನ ಮೂಡಿಸಿದೆ.

Share this Story:

Follow Webdunia kannada