Select Your Language

Notifications

webdunia
webdunia
webdunia
webdunia

ಶರ್ಲಿನ್ ಚೋಪ್ರಾಗೆ ಲೈಂಗಿಕ ಹಿಂಸೆಯಂತೆ ಪಾಪ... ಅದ್ಯಾರಿಂದ ಅಂದ್ರೆ !

ಶರ್ಲಿನ್ ಚೋಪ್ರಾ
, ಶನಿವಾರ, 5 ಏಪ್ರಿಲ್ 2014 (14:12 IST)
ಶರ್ಲಿನ್ ಚೋಪ್ರಾಗೆ ಏನು ಮಾಡಲು ಆಗದೆ ಹೋದರು ಸಹ ಗಾಸಿಪ್ಸ್ ಅನ್ನೋ ಸಿಪ್ ಗಳನ್ನೂ ಆಕೆಯ ಅಭಿಮಾನಿಗಳಿಗೆ ನೀಡಿ ಅವರ ಮತ್ತನ್ನು ಏರಿಸುತ್ತಲೇ ಇರುತ್ತಾಳೆ. ಆದರೆ ಆಕೆಯ ತಾರ ಬದುಕಲ್ಲಿ ಕಾಮಸೂತ್ರ ತ್ರಿಡಿ ಚಿತ್ರದಷ್ಟು ಕಿರಿಕಿರಿ ಮತ್ಯಾವುದೇ ಚಿತ್ರದಲ್ಲೂ ಆಗಲಿಲ್ಲ ಎಂದೇ ಹೇಳ ಬಹುದಾಗಿದೆ .

ಈಕೆಯ ಹೊಸ ಚಿತ್ರದಲ್ಲಿ ಈಕೆ ಮೇಲೆ ನಿರ್ದೇಶ-ನಿರ್ಮಾಪಕ ಮತ್ತು ಅವರ ಮೇಲೆ ಈಕೆ ಕೆಸರು ಎರಚುವುದು ಎಲ್ಲರಿಗು ಸಾಮಾನ್ಯ ಸಂಗತಿ ಆಗಿ ಬಿಟ್ಟಿದೆ . ಸದ್ಯದ ಹೊಸ ಸುದ್ದಿ ಅಂದರೆ ಈ ಹಾಟ್ ನಟಿಯು ತ್ರೀಡಿ ಚಿತ್ರದ ನಿರ್ದೇಶಕ ರೂಪೇಶ್ ಮೇಲೆ ಕೇಸ್ ಹಾಕಿದ್ದಳಂತೆ. ಇದು ಈಗ ಬಾಲಿವುಡ್ ಗಮನ ಮತ್ತೆ ಆಕೆಯತ್ತ ತಿರುಗುವಂತೆ ಮಾಡಿದೆ.

ಈ ಚಿತ್ರದ ಬಳಿಕ ತನಗೆ ಹಾಲಿವುಡ್ ನಿಂದಲೂ ಸಹ ಅವಕಾಶಗಳು ಸಿಗುತ್ತದೆ ಎಂದು ನಂಬಿದ್ದಾಳೆ. ಅದು ಒಂದು ಕಡೆ ಇದ್ದಾರೆ, ಇದ್ದಕ್ಕಿದ್ದ ಹಾಗೆ ಈ ಬೆತ್ತಲೆ ಹೆಣ್ಣು ಈ ಚಿತ್ರದ ನಿರ್ದೇಶಕ ರೂಪೇಶ್ ಮೇಲೆ ಕೇಸ್ ಹಾಕಿದ್ದಾಳೆ.

ಇತ್ತೀಚಿಗೆ ಶರ್ಲಿನ್ ವಿಶುಯಲ್ಸ್ ಇಲ್ಲದೆ ಈ ನಿರ್ದೇಶಕ ಆ ಸಿನಿಮಾದ ಟೀಜರ್ ಬಿಡುಗಡೆ ಮಾಡಿದ್ದರೆ. ಅದು ಆಕೆಯ ಕೋಪವನ್ನು ನೆತ್ತಿಗೇರಿಸಿದೆ. ತನಗೆ ಈತ ಮೋಸ ಮಾಡಿದ್ದಾನೆ ಎಂದು ಮುಂಬೈ ಅಡಿಷನಲ್ ಪೊಲೀಸರಿಗೆ ಫಿರ್ಯಾದು ಮಾಡಿದ್ದಾಳೆ ಈಕೆ. ಅಷ್ಟೇ ಅಲ್ಲದೆ ತನಗೆ ಲೈಂಗಿಕ ಹಿಂಸೆ ನೀಡಿರುವುದಲ್ಲದೆ, ಅಸಭ್ಯಕರವಾದ ಮೇಲ್ ಸಹ ಮಾಡಿದ್ದಾನೆ ಎನ್ನುವ ದೂರು ಸಹ ಇದರಲ್ಲಿದೆ. ಈ ಕೇಸ್ ಯಾವ ರೀತಿಯಲ್ಲಿ ತಿರುವು ಪಡೆಯುತ್ತದೆಯೋ ಎಂದು ಕಾಯುತ್ತಿದ್ದಾರೆ ಬಾಲಿವುಡ್ ಮಂದಿ !

Share this Story:

Follow Webdunia kannada