ಪಿಂಕಿ ಗೆ ಸಿಕ್ಕಾಪಟ್ಟೆ ಸಿಟ್ಟು ಬಂದಿದೆ. ಬರದೇ ಇರುತ್ತಾ ಹೇಳಿ? ಆಕೆಗೆ ಕೋಪ ಬರೋದಕ್ಕೆ ಕಾರಣ ಹೇಳಿದ ಬಳಿಕ ನಿಮಗೆ ಅನ್ನಿಸುತ್ತೆ ಪಿಂಕಿ ಕೋಪ ಮಾಡಿಕೊಂಡಿದ್ದು ಸರಿ ಅಂತ. ಬಾಲಿವುಡ್ ಹಾಟ್ ನಟಿ ಪಿಂಕಿ ಅಲಿಯಾಸ್ ಪ್ರಿಯಾಂಕ ಚೋಪ್ರ .ಈಗ ಬಿಡುಗಡೆ ಆಗುತ್ತಿರುವ ಸಿನಿಮಾಗಳ ಕಾರಣ ದಿಂದ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ಅತ್ಯಾಚಾರಗಳು ನಡೆಯುತ್ತಿವೆ ಎನ್ನುವ ಬೆಂಕಿ ಹಚ್ಚಿರುವ ಮಂದಿ ಬಗ್ಗೆ ಮಾತಾಡುತ್ತಾ ಕೇವಲ ಎರಡೂವರೆ ಗಂಟೆಗಳು ಮಾತ್ರ ಪ್ರಸಾರ ಆಗುವ ಚಿತ್ರ ಮನುಷ್ಯನ ಮೇಲೆ ಪ್ರಭಾವ ಬೀರುವುದು ಖಂಡಿತಾ ಹಾಸ್ಯಾಸ್ಪದ ಸಂಗತಿ ಎಂದಿದ್ದಾಳೆ ಆಕೆ. ಇಂತಹ ಮಾತುಗಳನ್ನು ಮಾನಸಿಕವಾಗಿ ಗಟ್ಟಿ ಇಲ್ಲದ ಮಂದಿ ಮಾತ್ರ ಆಡುತ್ತಾರೆ ವಿನಃ ತಿಳುವಳಿಕೆ ಇರುವವರಲ್ಲ.
ಸಿನಿಮಾ ಅನೇಕ ಅಂಶಗಳನ್ನು ಹೊಂದಿರುವ ಮನೋರಂಜನೆ. ಇದರಿಂದ ಮನಸ್ಸಿಗೆ ಉಲ್ಲಾಸ ಸಂತೋಷ ಉಂಟಾಗುತ್ತದೆ. ಅನೇಕ ಸಮಸ್ಯೆಗಳಿಂದ ಬಳಲುತ್ತಿರುವ ಮನುಷ್ಯರಿಗೆ ಸಿನಿಮಾ ಒಂದು ಉತ್ತಮ ರಿಲಾಕ್ಸ್ ಮಾಡುವ ಸಾಧನವಾಗಿದೆ. ಚಿತ್ರ ನೋಡಲು ಬರುವವ ಅದರಿಂದ ಕಲಿಕೆ ಮಾಡಲು ಬರುವುದಿಲ್ಲ. ವಾತ್ಸಾಯನ ಕಾಮಸೂತ್ರ ನಮಗೆ ಉತ್ತಮ ಗ್ರಂಥ ಅರೆನಗ್ನವಾಗಿ ಇರುವ ಎಲ್ಲೋರ ಶಿಲ್ಪಗಳು ನಮ್ಮ ರಾಷ್ಟದ ಸಂಪತ್ತು .ಅವುಗಳಿಗಿಂತ ಸಿನಿಮಾದಲ್ಲಿ ಹೆಚ್ಚಿನದ್ದು ಇರುವುದಿಲ್ಲ. ಸಿನಿಮಾಗಳನ್ನು ನಿಷೇಧಿಸುವ ಮಾತು ಆಡುವವರು ಮೊದಲು ವಾತ್ಸಾಯನ ಕಾಮಸೂತ್ರ, ಎಲ್ಲೋರದಂತಹವುಗಳನ್ನು ನಿಷೇಧಿಸಲಿ ಎಂದಿದ್ದಾರೆ. ಅವು ಶಿಲ್ಪಗಳು, ಬರಹಗಳು.. ನಿಜ ಹಾಗೇ ಮಾಡ ಬಹುದು .ಆದರೇ ಅವು ನಿರ್ಜೀವ ವಸ್ತುಗಳು ಅಂತಿದ್ದಾರೆ ಬಾಲಿವುಡ್ ಕುಹಕಿಗಳು!