Select Your Language

Notifications

webdunia
webdunia
webdunia
webdunia

ರಣಬೀರ್ ಮತ್ತು ಕತ್ರಿನಾ ಹೋಗಿದ್ದು ಒಟ್ಟಿಗೆ ಆದರೆ ಬಂದದ್ದು ಬೇರೆಬೇರೆಯಾಗಿ ಯಾಕೆ ಯಾಕೆ?

ಯುಎಸ್
, ಬುಧವಾರ, 8 ಜನವರಿ 2014 (12:05 IST)
PR
ಕತ್ರಿನಾ ಕೈಫ್ ಬಗ್ಗೆ ಬಾಲಿವುಡ್ ಮಂದಿಗೆ ಗಮನ ಎಂದೇ ಹೇಳ ಬಹುದು. ಈ ಸುಂದರಿ ತಾನು ಚಿತ್ರರಂಗದಲ್ಲಿ ಗೆಲ್ಲುವ ತನಕ ಸಲ್ಮಾನ್ ಖಾನ್ ಜೊತೆ ಪ್ರೀತಿಸಿ, ಆ ಬಳಿಕ ಆಕೆ ಆತನನ್ನು ಬಿಟ್ಟು ರಣ ಬೀರ್ ಕಪೂರ್ ಜೊತೆ ಪ್ರಿತಿಯಾಟ ಆಡಲು ಆರಂಭಿಸಿ ಸಾಕಷ್ಟು ಸಮಯವೇ ಕಳೆದಿದೆ .

ಇನ್ನು ಇಬ್ಬರು ಹೆಚ್ಚು ಹೆಚ್ಚು ಪ್ರೀತಿಯನ್ನು ತೋರುತ್ತಲೇ ಬಂದಿದ್ದಾರೆ. ಇತ್ತೀಚಿಗೆ ಈ ಜೋಡಿ ಹೊಸ ವರ್ಷದ ಸಂಭ್ರಮದ ಆಚರಣೆಗೆಂದು ಯುಎಸ್ ದೇಶಕ್ಕೆ ಹೊರಟರು. ಆದರೆ ಮಧ್ಯದಲ್ಲೇ ರಣಬೀರ್ ಕಪೂರ್ ಭಾರತಕ್ಕೆ ಹಿಂತಿರುಗಿದರು, ಆದರೆ ಈ ಚೆಲುವೆ ಲಂಡನ್ ನಲ್ಲಿಯೇ ಉಳಿದು , ಇತ್ತೀಚಿಗೆ ಹಾರಾಟಕ್ಕೆ ಬಂದರು. ಹೀಗೆ ಜಂಟಿಯಾಗಿ ಹೋದ ಜೋಡಿ ಒಂಟಿಯಾಗಿ ಬಂದ ಕಾರಣ ಅರಿಯದೆ ಬಾಲಿವುಡ್ ಅನೇಕ ಕಥೆಗಳನ್ನು ಹುಟ್ಟಿಸಿತ್ತು.ಆದರೆ ಅಂತಹದ್ದೇನು ಆಗಿರದೆ ಆಕೆ ಮತ್ತು ಆತ ಬೇರೆಬೇರೆಯಾಗಿ ಬರಲು ಮುಖ್ಯ ಕಾರಣ ಕತ್ರಿನಾಳ ಅನಾರೋಗ್ಯ.

ಯುಎಸ್ ದೇಶದ ಥಂಡಿ ವಾತಾವರಣದಿಂದ ಕತ್ರಿನಾಳಿಗೆ ಜ್ವರ ಬಂದು ಆಕೆಯು ತನ್ನ ತಾಯಿ ಮತ್ತು ಸಹೋದರಿಯರು ಇರುವ ಲಂಡನ್ ನಲ್ಲಿ ಹೋಗಿ ಆರೈಕೆ ಮಾಡಿ ಕೊಂಡು ಬಂದರು. ಆ ಕಾರಣದಿಂದ ರಣಬೀರ್ ಒಂಟಿಯಾಗಿ ಬಂದರು ಅಷ್ಟೇ. ಈಗ ಈ ಚೆಲುವೆ ಬ್ಯಾಂಗ್ ಬ್ಯಾಂಗ್ ಚಿತ್ರ ಶೂಟಿಂಗ್ ನಲ್ಲಿ ಬ್ಯುಸಿ. ಸದ್ಯದಲೇ ರಣಬೀರ್ ಮತ್ತು ಕತ್ರಿನಾ ನಟನೆಯ ಜಗ್ಗಾ ಜಾಸೂಸ್ ಶೂಟಿಂಗ್ ಆರಂಭವಾಗಲಿದೆ. .

Share this Story:

Follow Webdunia kannada